ಮಾರುತಿ ಓಮ್ನಿಗೆ ಟಕ್ಕರ್ ನೀಡಲು ಬಂದಿದೆ ಮಹೀಂದ್ರ ಸುಪ್ರೊ

ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆ್ಯಂಡ್ ಮಹೀಂದ್ರ, ಎರಡು ಅತಿ ನೂತನ ವಾಹನಗಳನ್ನು ಬಿಡುಗಡೆ ಮಾಡಿದೆ. ಅದುವೇ,

  • ಮಹೀಂದ್ರ ಸುಪ್ರೊ ವ್ಯಾನ್ ಮತ್ತು
  • ಮಹೀಂದ್ರ ಸುಪ್ರೊ ಮ್ಯಾಕ್ಸಿ ಟ್ರಕ್

ಈ ಪೈಕಿ ಫ್ಯಾಮಿಲಿ ವಾಹನಗಳ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಮಹೀಂದ್ರ ಸುಪ್ರೊ ವ್ಯಾನ್ ಅತ್ಯಂತ ಜನಪ್ರಿಯ ಮಾರುತಿ ಓಮ್ನಿಗೆ ಪ್ರತಿಸ್ಪರ್ಧಿಯಾಗಲಿದೆ. ಅದೇ ಹೊತ್ತಿಗೆ ಸುಪ್ರೊ ಮ್ಯಾಕ್ಸಿ ಟ್ರಕ್ ಹಗುರ ಭಾರದ ಟ್ರಕ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಥಾಣೆ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಥಾಣೆ)

ಮಹೀಂದ್ರ ಸುಪ್ರೊ ವ್ಯಾನ್

  • ಎಲ್‌ಎಕ್ಸ್: 4.38 ಲಕ್ಷ ರು.
  • ವಿಎಕ್ಸ್: 4.63 ಲಕ್ಷ ರು.
  • ಝಡ್‌ಎಕ್ಸ್: 4.93 ಲಕ್ಷ ರು.
  • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಥಾಣೆ)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಥಾಣೆ)

    ಮಹೀಂದ್ರ ಸುಪ್ರೊ ಮ್ಯಾಕ್ಸಿ ಟ್ರಕ್

    • ಟಿ2: 4.25 ಲಕ್ಷ ರು.
    • ಟಿ4: 4.45 ಲಕ್ಷ ರು.
    • ಟಿ6: 4.75 ಲಕ್ಷ ರು.
    • ಮಹೀಂದ್ರ ಸುಪ್ರೊ ವ್ಯಾನ್ ಮತ್ತು ಸುಪ್ರೊ ಮ್ಯಾಕ್ಸಿ ಮಿನಿ ಟ್ರಕ್ ಬಿಡುಗಡೆ

      ಮಹೀಂದ್ರ ಸುಪ್ರೊ ಕುಟುಂಬ ಪ್ರಯಾಣಿಕ ವಾಹನದಲ್ಲಿ ಎಂಟು ಮಂದಿಗೆ (2+3+3) ಆರಾಮದಾಯಕವಾಗಿ ಸಂಚರಿಸಬಹುದಾಗಿದೆ. ಇನ್ನೊಂದೆಡೆ ಸುಪ್ರೊ ಮ್ಯಾಕ್ಸಿ ಟ್ರಕ್ ನಲ್ಲಿ ಗರಿಷ್ಠ ಒಂದು ಟನ್ ಭಾರವನ್ನು ಹೊರಬಹುದಾಗಿದೆ.

      ಮಹೀಂದ್ರ ಸುಪ್ರೊ ವ್ಯಾನ್ ಮತ್ತು ಸುಪ್ರೊ ಮ್ಯಾಕ್ಸಿ ಮಿನಿ ಟ್ರಕ್ ಬಿಡುಗಡೆ

      ಮಹಿಂದ್ರ ಸುಪ್ರೊ ವ್ಯಾನ್ ದೇಶದ ಜನಪ್ರಿಯ ಮಾರುತಿ ಸುಜುಕಿ ಓಮ್ನಿಗೆ ಮತ್ತು ಸುಪ್ರೊ ಮ್ಯಾಕ್ಸಿ ಟ್ಯಾಕಿ ಟಾಟಾದ ಹೆಸರಾಂತ ಏಸ್ ಮೆಗಾ ಹಗುರ ಭಾರದ ವಾಹನಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

      ಎಂಜಿನ್ ತಾಂತ್ರಿಕತೆ

      ಎಂಜಿನ್ ತಾಂತ್ರಿಕತೆ

      • 909 ಸಿಸಿ,
      • 45 ಅಶ್ವಶಕ್ತಿ,
      • ಡಿಐ ಟರ್ಬೊ ಡೀಸೆಲ್ ಮೋಟಾರು,
      • 98 ಎನ್ ಎಂ ತಿರುಗುಬಲ
      • 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
      • ಮೈಲೇಜ್:

        ಮೈಲೇಜ್:

        • ಸುಪ್ರೊ ವ್ಯಾನ್: 23.5 kpl
        • ಸುಪ್ರೊ ಮ್ಯಾಕ್ಸಿ ಟ್ರಕ್: 22.4 kpl
        • ವೈಶಿಷ್ಟ್ಯಗಳು

          ವೈಶಿಷ್ಟ್ಯಗಳು

          ಮಹೀಂದ್ರ ಸುಪ್ರೊ ವ್ಯಾನ್ ಹಾಗೂ ಸುಪ್ರೊ ಮ್ಯಾಕ್ಸಿ ಟ್ಯಾಕ್ಸಿ ಬೇಸ್ ವೆರಿಯಂಟ್ ಗಳಲ್ಲಿ ಎಸಿ ಹಾಗೂ ಪವರ್ ಸ್ಟೀರಿಂಗ್ ಗಳಂತಹ ಕೊರತೆ ಕಾಡಲಿದೆ. ಆದರೆ ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಇವೆರಡು ಸೌಲಭ್ಯಗಳ ಜೊತೆಗೆ ಮೊಬೈಲ್ ಚಾರ್ಜಿಂಗ್, ಫ್ಲೋರ್ ಕನ್ಸಾಲ್, ಬಾಟಲಿ ಹೋಲ್ಡರ್, ದೊಡ್ಡದಾದ ಢಿಕ್ಕಿ ಜಾಗ ಹಾಗೂ ಎಂಟು ಹಾಗೂ ಐದು ಸೀಟುಗಳ ವ್ಯವಸ್ಥೆಯನ್ನು ಪಡೆಯಲಿದೆ.

Most Read Articles

Kannada
English summary
Mahindra Launches Supro Range In India For INR 4.25 Lakh Onwards
Story first published: Friday, October 16, 2015, 15:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X