ಹೊಸ ಸ್ವರೂಪದ 2015 ಮಹೀಂದ್ರ ಥಾರ್ ಸಿಆರ್‌ಡಿಇ ಭರ್ಜರಿ ಬಿಡುಗಡೆ

By Nagaraja

ಭಾರತದ ಎಸ್‌ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು ಅತಿ ನೂತನ ಥಾರ್ ಸಿಆರ್‌ಡಿಇ (2015 Mahindra Thar CRDe)ಆಫ್ ರೋಡ್ ಜೀಪ್ ಅನ್ನು ದೇಶದ ಮಾರಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಮಾಡಿದೆ. 2015 ಮಹೀಂದ್ರ ಥಾರ್ ಸಿಆರ್‌ಡಿಇ ಫೋರ್ ವೀಲ್ ಡ್ರೈವ್ (4X4) ಆಯ್ಕೆಯಲ್ಲಿ ಮಾತ್ರ ಲಭ್ಯವಾಗಲಿದೆ ಎಂಬುದು ಇದರ ವಿಶೇಷ.

ಪ್ರಮುಖವಾಗಿಯೂ ಆಫ್-ರೋಡ್ ಇಷ್ಟಪಡುವ ಯುವ ಜನಾಂಗವನ್ನು ಮಹೀಂದ್ರ ಥಾರ್ ಗುರಿಯಾಗಿರಿಸಿಕೊಳ್ಳಲಿದೆ. ಅಲ್ಲದೆ ನಗರ ಪ್ರದೇಶದ ಶ್ರೀಮಂತ ಜೀವನಶೈಲಿಯ ಚಾಲನೆಗೂ ಸೂಕ್ತವಾಗುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ದೇಶದ ಅಗ್ರ 10 ಕ್ರೀಡಾ ಬಳಕೆಯ ವಾಹನಗಳಲ್ಲಿ ಕಾಣಿಸಿಕೊಂಡಿರುವ ಹೊಸ ಥಾರ್‌ ಸಿಆರ್‌ಡಿಇ ಮಾದರಿಯಲ್ಲಿ ಏನೆಲ್ಲ ವೈಶಿಷ್ಟ್ಯ ಹಾಗೂ ಹೊಸ ತಂತ್ರಗಾರಿಕೆಗಳಿವೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ನಾಸಿಕ್)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ನಾಸಿಕ್)

ಮಹೀಂದ್ರ ಥಾರ್ ಸಿಆರ್‌ಡಿಇ: 8.03 ಲಕ್ಷ ರು.

ಹೊರಮೈ

ಹೊರಮೈ

  • ಹೊಸ ಫ್ರಂಟ್ ಬಂಪರ್
  • ಹೊಸ ರಿಯರ್ ಬಂಪರ್
  • ಹೊಸ ವೀಲ್ ಆರ್ಚ್
  • ಹೊಸ ಕ್ಲಿಯರ್ ಲೆನ್ಸ್ ಹೆಡ್ ಲ್ಯಾಂಪ್,
  • ಪರಿಷ್ಕೃತ ಹಾಗೂ ತೆಗೆಯಬಹುದಾದ ಮೇಲಾವರಣ,
  • ಬದಿಯಲ್ಲಿ ಹೊಸ ಫೂಟ್ ಸ್ಟೆಪ್
  • ಒಳಮೈ

    ಒಳಮೈ

    • ಹೊಸ ಸ್ಟೈಲಿಷ್ ಬ್ಲ್ಯಾಕ್ ಮತ್ತು ಬೀಜ್ ಡ್ಯಾಶ್ ಬೋರ್ಡ್,
    • ಲಾಕ್ ಮಾಡಬಹುದಾದ ಗ್ಲೋವ್ ಬಾಕ್ಸ್,
    • ಹೊಸ ಸ್ಟೈಲಿಷ್ 3-ಪೊಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
    • 2 ಡಿನ್ ಮ್ಯೂಸಿಕ್ ಸಿಸ್ಟಂ
    • ತಂತ್ರಜ್ಞಾನ - ಮೆಕ್ಯಾನಿಕಲ್ ಲಾಕಿಂಗ್ ರಿಯರ್ ಡಿಫೆರೆನ್ಸಿಯಲ್

      ತಂತ್ರಜ್ಞಾನ - ಮೆಕ್ಯಾನಿಕಲ್ ಲಾಕಿಂಗ್ ರಿಯರ್ ಡಿಫೆರೆನ್ಸಿಯಲ್

      ಆಫ್ ರೋಡ್ ಚಾಲನೆಯಲ್ಲಿ ಮತ್ತಷ್ಟು ರೋಚಕತೆ ಸೃಷ್ಟಿ ಮಾಡಿರುವ ಮಹೀಂದ್ರ ಸಂಸ್ಥೆಯು, ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಥಾರ್ ಸಿಆರ್‌ಡಿಇ ಮಾದರಿಯಲ್ಲಿ ಮೆಕ್ಯಾನಿಕಲ್ ಲಾಕಿಂಗ್ ರಿಯರ್ ಢಿಫೆರೆನ್ಸಿಯಲ್ ತಂತ್ರಜ್ಞಾನವನ್ನು (Mechanical locking rear differential) ಒದಗಿಸಿದೆ. ಇದರಂತೆ ಆಫ್ ರೋಡ್ ಸಂಚಾರದ ವೇಳೆ ನಿಮ್ಮ ಗಾಡಿಯ ಒಂದು ಚಕ್ರ ಸಿಲುಕಿ ಹಾಕಿಕೊಂಡ್ಡಲ್ಲಿ ಎಲ್ಲ ಶಕ್ತಿಯು ಆ ನಿರ್ದಿಷ್ಟ ಚಕ್ರಕ್ಕೆ ವರ್ಗಾವಣೆಯಾಗಲಿದೆ. ಈ ಮೂಲಕ ಆಪತ್ಕಾಲ ಪರಿಸ್ಥಿತಿಯಿಂದ ಹೊರಬರಬಹುದಾಗಿದೆ, ನಿಮ್ಮ ಆಫ್ ರೋಡ್ ಪಯಣವನ್ನು ಮತ್ತಷ್ಟು ಸುರಕ್ಷಿತವಾಗಿಸಲಿದೆ.

      ಆರಾಮದಾಯಕ

      ಆರಾಮದಾಯಕ

      • ಪ್ರೀಮಿಯಂ ಸೀಟು,
      • ಹೊಸ ಸ್ಟೀರಿಂಗ್ ವೀಲ್,
      • ಹೊಸ ಗೇರ್ ನಾಬ್,
      • ಹೊಸ ಡೋರ್ ಟ್ರಿಮ್ ಜೊತೆ ಆರ್ಮ್ ರೆಸ್ಟ್
      • ಅನುಕೂಲ

        ಅನುಕೂಲ

        • ಫ್ಲೋರ್ ಕನ್ಸೋಲ್ ಜೊತೆ ಕಪ್ ಹೋಲ್ಡರ್,
        • ಮೊಬೈಲ್ ಚಾರ್ಜಿಂಗ್ ಪಾಯಿಂಟ್,
        • ವಿಂಡ್ ಶೀಲ್ಡ್ ಹಿಮ ನಿವಾರಕ
        • ಆಯಾಮ

          ಆಯಾಮ

          • ಉದ್ದ 3928 ಎಂಎಂ
          • ಅಗಲ 1726 ಎಂಎಂ
          • ವೀಲ್ ಬೇಸ್ 2430 ಎಂಎಂ
          • ಸೀಟು - ಆರು ಹಾಗೂ ಏಳು
          • 200 ಎಂಎಂ ಗ್ರೌಂಡ್ ಕ್ಲಿಯರನ್ಸ್
          • ಎಂಜಿನ್ ತಾಂತ್ರಿಕತೆ

            ಎಂಜಿನ್ ತಾಂತ್ರಿಕತೆ

            ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದರ 2498 ಸಿಸಿ ಟರ್ಬೊ ಚಾರ್ಜ್ಡ್ ಸಿಆರ್‌ಡಿಇ ಡೀಸೆಲ್ ಎಂಜಿನ್ 105 ಅಶ್ವಶಕ್ತಿ (247 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ. ಅಲ್ಲದೆ ಎಲ್ಲ ನಾಲ್ಕು ಚಕ್ರಗಳಿಗೆ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮುಖಾಂತರ ಪವರ್ ವಿತರಣೆಯಾಗಲಿದೆ.

            ವೈಶಿಷ್ಟ್ಯಗಳು

            ವೈಶಿಷ್ಟ್ಯಗಳು

            • ಹೊಸ ಫ್ರಂಟ್ ಮತ್ತು ರಿಯರ್ ಬಂಪರ್,
            • ಹೊಸ ವೀಲ್ ಆರ್ಚ್,
            • ಬದಿಯಲ್ಲಿ ಫೂಟ್ ಸ್ಟೆಪ್,
            • ಹೊಸ ಮೇಲಾವರಣ,
            • ಕ್ಲಿಯರ್ ಲೆನ್ಸ್ ಹೆಡ್ ಲ್ಯಾಂಪ್,
            • ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್,
            • 3 ಪೊಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
            • ಪರಿಷ್ಕೃತ ಎಸಿ ವೆಂಟ್ಸ್,
            • ಹೊಸ ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್,
            • ಹೊಸ ಫ್ಲೋರ್ ಮ್ಯಾಟ್ ಜೊತೆ ಕಪ್ ಹೋಲ್ಡರ್,
            • 2 ಡಿನ್ ಮ್ಯೂಸಿಕ್ ಪ್ಲೇಯರ್
            • ಬಣ್ಣಗಳು

              ಬಣ್ಣಗಳು

              2015 ಮಹೀಂದ್ರ ಥಾರ್ ಸಿಆರ್‌ಡಿಇ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ,

              • ರೆಡ್ ರೇಜ್,
              • ಫಿಯೆರಿ ಬ್ಲ್ಯಾಕ್,
              • ಮಿಸ್ಟ್ ಸಿಲ್ವರ್,
              • ಡೈಮಂಡ್ ವೈಟ್,
              • ರೊಕಿ ಬೀಜ್
              • ಹೊಸ ಸ್ವರೂಪದ 2015 ಮಹೀಂದ್ರ ಥಾರ್ ಸಿಆರ್‌ಡಿಇ ಭರ್ಜರಿ ಬಿಡುಗಡೆ

                ನಿಮ್ಮ ಮಾಹಿತಿಗಾಗಿ ಮಹೀಂದ್ರ ಥಾರ್ ಡಿಐ ವೆರಿಯಂಟ್ ನಲ್ಲೂ ಲಭ್ಯವಿರುತ್ತದೆ. ಆದರೆ ಥಾರ್ ಶೇಕಡಾ 70ರಷ್ಟು ಮಾರಾಟವನ್ನು ಸಿಆರ್‌ಡಿಇ ವೆರಿಯಂಟ್ ಆಕ್ರಮಿಸಿಕೊಂಡಿದೆ. ಹಾಗಾಗಿ ಪ್ರಸ್ತುತ ಸಿಆರ್‌ಡಿಇ ವೆರಿಯಂಟ್ ಮಾತ್ರ ಅಪ್ ಗ್ರೇಡ್ ಮಾಡಲಾಗಿದೆ. ಇನ್ನು ತಲುಪಲು ಸಾಧ್ಯವಾಗದಂತಹ ರಿಮೋಟ್ ಪ್ರದೇಶದಲ್ಲಿ ಥಾರ್ ಡಿಐ ವೆರಿಯಂಟ್ ಬಳಕೆ ಮಾಡಲಾಗುತ್ತದೆ. ಇದು ಕೇರಳ ಹಾಗೂ ರಾಜಸ್ತಾನಗಳಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಹಾಗೆಯೇ ಅಪ್ ಗ್ರೇಡ್ ಸಿಆರ್‌ಡಿಇ, ಆಕ್ಸೆಸರಿ ಥಾರ್ ಮತ್ತು ಹಾರ್ಡ್ ಟಾಪ್ ವರ್ಷನ್ ಎಂಬ ಮೂರು ವರ್ಷನ್ ಗಳಲ್ಲಿ ಥಾರ್ ಸಿಆರ್‌ಡಿಇ ಅನಾವರಣಗೊಂಡಿದೆ.


Most Read Articles

Kannada
English summary
2015 Mahindra Thar CRDe has been launched. Let’s take a look at the new 2015 Mahindra Thar CRDe’s price, engine specs, features and more!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X