ಬಂದೇ ಬಿಡ್ತು ದೇಶದಲ್ಲೇ ಅತ್ಯಧಿಕ ಮೈಲೇಜ್ ನೀಡುವ ಡೀಸೆಲ್ ಕಾರು

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಭಾರತೀಯ ಮಾರುಕಟ್ಟೆಗೆ ಹೊಸತಾದ ಸೆಲೆರಿಯೊ ಡೀಸೆಲ್ ಆವೃತ್ತಿಯನ್ನು ಪರಿಚಯಿಸಿದೆ. ಇದು ನಾಲ್ಕು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದ್ದು, 4.65 ಲಕ್ಷ ರು.ಗಳಿಂದ ಟಾಂಪ್ ಎಂಡ್ 5.71 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಾರುತಿ ಸೆಲೆರಿಯೊ ಪೆಟ್ರೋಲ್ ಆವೃತ್ತಿ ಮಾರುಕಟ್ಟೆಯಲ್ಲಿದ್ದು, ಇದರ ಎಎಂಟಿ ವರ್ಷನ್ ಅತಿ ಹೆಚ್ಚು ಮಾರಾಟವನ್ನು ಪಡೆದುಕೊಂಡಿತ್ತು. ಈಗ ಡೀಸೆಲ್ ಆವೃತ್ತಿಯು ಸೇರ್ಪೆಡೆಯಾಗಿದೆ. ಇದು ಅತ್ಯುತ್ತಮ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಎಲ್‌ಡಿಐ: 4.65 ಲಕ್ಷ ರು.
  • ವಿಡಿಐ: 4.95 ಲಕ್ಷ ರು.
  • ಝಡ್‌ಡಿಐ: 5.35 ಲಕ್ಷ ರು.
  • ಝಡ್‌ಡಿಐ (ಐಚ್ಛಿಕ): 5.71 ಲಕ್ಷ ರು.
  • ಎಂಜಿನ್ ತಾಂತ್ರಿಕತೆ

    ಎಂಜಿನ್ ತಾಂತ್ರಿಕತೆ

    ನೂತನ ಮಾರುತಿ ಸುಜುಕಿ ಸೆಲೆರಿಯೊ ಡೀಸೆಲ್ ಮಾದರಿಯು 793 ಸಿಸಿ, ಟ್ವಿನ್ ಸಿಲಿಂಡರ್, ಟರ್ಬೊ ಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 47 ಅಶ್ವಶಕ್ತಿ (125 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ. ಅಂದರೆ ಡೀಸೆಲ್ ವೆರಿಯಂಟ್ ನಲ್ಲಿ ಎಎಂಟಿ ವ್ಯವಸ್ಥೆ ಇರುವುದಿಲ್ಲ.

    ಮೈಲೇಜ್

    ಮೈಲೇಜ್

    ಇನ್ನು ಬಹು ಮುಖ್ಯ ಘಟಕವಾದ ಸೆಲೆರಿಯೊ ಡೀಸೆಲ್ ಮಾದರಿಯು ಪ್ರತಿ ಲೀಟರ್ ಗೆ 27.62 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಇಂಧನ ಕ್ಷಮತೆಯ ಡೀಸೆಲ್ ಕಾರು ಎಂದೆನಿಸಿಕೊಂಡಿದೆ.

    ವಿಶಿಷ್ಟತೆ

    ವಿಶಿಷ್ಟತೆ

    • ಪವರ್ ಸ್ಟೀರಿಂಗ್,
    • ಎಸಿ,
    • ಫಾಗ್ ಲ್ಯಾಂಪ್,
    • ಇಂಟೆಗ್ರೇಟಡ್ ಆಡಿಯೋ ಜೊತೆ ಬ್ಲೂಟೂತ್ ಕನೆಕ್ಟಿವಿಟಿ,
    • ಬಹು ಮಾಹಿತಿ ಪರದೆ,
    • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್,
    • ಟಿಲ್ಟ್ ಸ್ಟೀರಿಂಗ್,
    • ಕೀಲೆಸ್ ಎಂಟ್ರಿ
    • ಎತ್ತರ ಹೊಂದಾಣಿಸಬಹುದಾದ ಸೀಟು
    • ಸುರಕ್ಷತೆ

      ಸುರಕ್ಷತೆ

      • ಡ್ಯುಯಲ್ ಫ್ರಂಟ್ ಏರ್ ಬ್ಯಾಗ್,
      • ಎಬಿಎಸ್ ಜೊತೆ ಇಬಿಡಿ,
      • ಸೆಕ್ಯೂರಿಟಿ ಸಿಸ್ಟಂ,
      • ಢಿಕ್ಕಿ ವೇಳೆಯಲ್ಲಿ ಆಟೋ ಅನ್ ಲಾಕ್
      •  ಸತ್ಯಾಂಶ

        ಸತ್ಯಾಂಶ

        ಬರೋಬ್ಬರಿ 900 ಕೋಟಿ ರು.ಗಳನ್ನು ಹೂಡಿಕೆ ಮಾಡುವ ಮೂಲಕ ಮಾರುತಿ ಸಂಸ್ಥೆಯು ತನ್ನದೇ ಘಟಕದಲ್ಲಿ ಸೆಲೆರಿಯೊ ಡೀಸೆಲ್ ಎಂಜಿನ್ ಅನ್ನು ಅಭಿವೃದ್ಧಿಗೊಳಿಸಿದೆ.

        ಸತ್ಯಾಂಶ

        ಸತ್ಯಾಂಶ

        ಸೆಲೆರಿಯೊ ಡೀಸೆಲ್ ಎಂಜಿನ್ ಜಗತ್ತಿನಲ್ಲೇ ಚೊಕ್ಕದಾದ ಡೀಸೆಲ್ ಎಂಜಿನ್ ಆಗಿರಲಿದ್ದು, 89 ಕೆ.ಜಿ ತೂಕವನ್ನಷ್ಟೇ ಹೊಂದಿರಲಿದೆ. ಇದು ಸ್ವಿಫ್ಟ್ ಡೀಸೆಲ್ ನಲ್ಲಿ ಬಳಕೆ ಮಾಡುತ್ತಿರುವ ಫಿಯೆಟ್ ನಿಂದ ಆಮದು ಮಾಡಲಾಗಿರುವ ಎಂಜಿನ್ ಗಿಂತಲೂ ಜಾಸ್ತಿ ಟಾರ್ಕ್ ನೀಡುತ್ತದೆ.

        ಬಣ್ಣಗಳು

        ಬಣ್ಣಗಳು

        • ಸನ್ ಶೈನ್ ಗ್ರೇ,
        • ಬ್ಲೇಝಇಂಗ್ ರೆಡ್,
        • ಸೆರುಲಿಯನ್ ಬ್ಲೂ,
        • ಪಿಯರ್ಲ್ ಆರ್ಕಟಿಕ್ ವೈಟ್,
        • ಸಿಲ್ಕಿ ಸಿಲ್ವರ್,
        • ಗ್ಲಿಸ್ಟೆನಿಂಗ್ ಗ್ರೇ

Most Read Articles

Kannada
English summary
India's largest carmaker Maruti Suzuki has launched the Celerio Diesel in India. The car boasts the most fuel efficient diesel engine in India
Story first published: Wednesday, June 3, 2015, 13:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X