ದೇಶದ ಗರಿಷ್ಠ ಮೈಲೇಜ್ ಕಾರು ಸಿಯಾಝ್ ಹೈಬ್ರಿಡ್ ಭರ್ಜರಿ ಲಾಂಚ್

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುತಿ, ತನ್ನ ಜನಪ್ರಿಯ ಮಧ್ಯಮ ಗಾತ್ರದ ಸೆಡಾನ್ ಕಾರಾಗಿರುವ ಸಿಯಾಝ್‌ನ ಡೀಸೆಲ್ ಹೈಬ್ರಿಡ್ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಪ್ರಾರಂಭಿಕ ಬೆಲೆ: 8.23 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ದೇಶದ ಅತ್ಯುತ್ತಮ ಮೈಲೇಜ್ ಕಾರೆನಿಸಿಕೊಳ್ಳಲಿರುವ ಸಿಯಾಝ್ ಹೈಬ್ರಿಡ್ ಕಾರು ಪ್ರತಿ ಲೀಟರ್‌ಗೆ 28 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ದೇಶದ ಗರಿಷ್ಠ ಮೈಲೇಜ್ ಕಾರು ಸಿಯಾಝ್ ಹೈಬ್ರಿಡ್ ಭರ್ಜರಿ ಲಾಂಚ್

ಪ್ರಸ್ತುತ ಹೈಬ್ರಿಡ್ ಸಿಯಾಝ್ ಕಾರು ಈಗ ಮಾರಾಟದಲ್ಲಿರುವ ಡೀಸೆಲ್ ಮಾದರಿಯ ಸ್ಥಾನವನ್ನು ತುಂಬಲಿದೆ. ಅಂದರೆ ಈಗಿರುವ ಸಿಯಾಝ್ ಡೀಸೆಲ್ ಮಾದರಿಯ ಮಾರಾಟ ನಿಲುಗಡೆಗೊಳ್ಳಲಿದೆ. ಅಲ್ಲದೆ ಈಗಿರುವ ಸ್ಟೋಕ್ ಕ್ಲಿಯರ್ ಮಾಡಲು ಡೀಲರುಗಳು ವಿಶೇಷ ಆಫರುಗಳನ್ನು ನೀಡುತ್ತಿದ್ದಾರೆಯೆಂಬ ಮಾಹಿತಿಯಿದೆ.

ದೇಶದ ಗರಿಷ್ಠ ಮೈಲೇಜ್ ಕಾರು ಸಿಯಾಝ್ ಹೈಬ್ರಿಡ್ ಭರ್ಜರಿ ಲಾಂಚ್

ಪ್ರಮುಖವಾಗಿಯೂ ಸೆಗ್ಮೆಂಟ್ ಲೀಡರ್ ಹೋಂಡಾ ಸಿಟಿ ಮಾದರಿಗೆ ಪೈಪೋಟಿ ಒಡ್ಡಲಿರುವ ಸಿಯಾಝ್, ಡೀಸೆಲ್ ಹೈಬ್ರಿಡ್ ಮುಖಾಂತರ ಗರಿಷ್ಠ ಮಾರಾಟದ ಗುರಿಯಿರಿಸಿಕೊಂಡಿದೆ.

ದೇಶದ ಗರಿಷ್ಠ ಮೈಲೇಜ್ ಕಾರು ಸಿಯಾಝ್ ಹೈಬ್ರಿಡ್ ಭರ್ಜರಿ ಲಾಂಚ್

ನೂತನ ಸಿಯಾಝ್ ಕಾರಿನಲ್ಲಿ ಸುಜುಕಿ ಹೈಬ್ರಿಡ್ ವೆಹಿಕಲ್ ಸಿಸ್ಟಂ (SHVS) ತಂತ್ರಜ್ಞಾನ ಆಳವಡಿಸಲಾಗುತ್ತಿದ್ದು, 1.3 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ದೇಶದ ಗರಿಷ್ಠ ಮೈಲೇಜ್ ಕಾರು ಸಿಯಾಝ್ ಹೈಬ್ರಿಡ್ ಭರ್ಜರಿ ಲಾಂಚ್

ಈ ಮೂಲಕ ಸರಕಾರದ ಯೋಜನೆಗೆ ಮಾರುತಿಯು ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಪ್ರಸ್ತುತ ಎಸ್‌ಎಚ್‌ವಿಎಸ್ ತಂತ್ರಜ್ಞಾನವನ್ನು ಸುಜುಕಿ ತವರೂರಾದ ಜಪಾನ್ ನಿಂದ ಆಮದು ಮಾಡಲಾಗುತ್ತಿದೆಯಾದರೂ ಸರಕಾರ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳಿಗೆ ನೀಡಿಕೊಂಡು ಬರುತ್ತಿರುವ ಫೇಮ್ ಸಬ್ಸಿಡಿಯ ಭಾಗವಾಗಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಮಾರುತಿಗೆ ನೆರವಾಗಿದೆ.

ವೆರಿಯಂಟ್, ಬೆಲೆ ಮಾಹಿತಿ (ಲಕ್ಷ ರು.ಗಳಲ್ಲಿ)

ವೆರಿಯಂಟ್, ಬೆಲೆ ಮಾಹಿತಿ (ಲಕ್ಷ ರು.ಗಳಲ್ಲಿ)

  • ವಿಡಿಐ: 8.23
  • ವಿಡಿಐ (ಐಚ್ಛಿಕ): 8.37
  • ವಿಡಿಐ (ಪ್ಲಸ್): 8.81
  • ಝಡ್‌ಡಿಐ: 9.52
  • ಝಡ್‌ಡಿಐ (ಪ್ಲಸ್): 10.17
  • ದೇಶದ ಗರಿಷ್ಠ ಮೈಲೇಜ್ ಕಾರು ಸಿಯಾಝ್ ಹೈಬ್ರಿಡ್ ಭರ್ಜರಿ ಲಾಂಚ್

    ಮುಂದಿನ ದಿನಗಳಲ್ಲಿ ಎರ್ಟಿಗಾ, ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳಲ್ಲೂ ಇದಕ್ಕೆ ಸಮಾನವಾದ ಎಸ್‌ಎಚ್‌ವಿಎಸ್ ತಂತ್ರಜ್ಞಾನವನ್ನು ಆಳವಡಿಸುವ ಯೋಜನೆಯನ್ನು ಮಾರುತಿ ಹೊಂದಿದೆ. ಅಂದರೆ ಸದ್ಯದಲ್ಲೇ ವಾಹನ ಪ್ರೇಮಿಗಳಿಗೆ 30 ಕೀ.ಮೀ. ಗಿಂತಲೂ ಹೆಚ್ಚು ಮೈಲೇಜ್ ನೀಡುವ ಕಾರುಗಳ ದರ್ಶನವಾಗಲಿದೆ. ಅಲ್ಲದೆ ಜಾಗತಿಕವಾಗಿ ಬಿಡುಗಡೆ ಕಾಣಲಿರುವ ನೂತನ ಬಲೆನೊದಲ್ಲಿ 1.2 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಳವಡಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.


Most Read Articles

Kannada
English summary
Maruti Ciaz diesel hybrid launched in India
Story first published: Tuesday, September 1, 2015, 14:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X