ಪ್ರೀಮಿಯಂ ಕಾರುಗಳಿಗಾಗಿ ಮಾರುತಿಯಿಂದ ಹೊಸ ಡೀಲರ್‌‌ಶಿಪ್

By Nagaraja

ಸಣ್ಣ ಹಾಗೂ ಪ್ರಯಾಣಿಕ ಕಾರು ವಿಭಾಗದಲ್ಲಿ ಪಾರುಪತ್ಯ ಮೆರೆದಿರುವ ದೇಶದ ಅತಿ ದೊಡ್ಡ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಈಗ ಹೈ ಎಂಡ್ ಕಾರುಗಳ ವಿಭಾಗದತ್ತವೂ ತನ್ನ ಚಿತ್ತ ಹಾಯಿಸಿದೆ.

ಬಲ್ಲ ಮೂಲಗಳ ಪ್ರಕಾರ, ನಿಕಟ ಭವಿಷ್ಯದಲ್ಲೇ ಪ್ರೀಮಿಯಂ ಕಾರುಗಳ ಮಾರಾಟಕ್ಕಾಗಿ ಮಾರುತಿ ಹೊಸ ವಿತರಕ ಜಾಲವನ್ನು ತೆರೆದುಕೊಳ್ಳಲಿದೆ. ಪ್ರಾರಂಭದಲ್ಲಿ ಇದು ದೇಶದ ಆಯ್ದ ನಗರಗಳಲ್ಲಿ ಮಾತ್ರ ಸ್ಥಿತಗೊಂಡಿರಲಿದೆ.

maruti s cross

ಬೆಳೆದು ಬರುತ್ತಿರುವ ಭಾರತ ವಾಹನ ಮಾರುಕಟ್ಟೆಯಲ್ಲಿ ಪ್ರೀಮಿಯಂ ಕಾರುಗಳಿಗೆ ನಿಧಾನವಾಗಿ ಏರುತ್ತಲೇ ಇದೆ. ಇದನ್ನು ಗಮನಿಸಿರುವ ಸಂಸ್ಥೆಯು ಈಗಿನ ಡೀಲರ್‌ಶಿಪ್ ಜಾಲಕ್ಕೆ ಯಾವುದೇ ತೊಂದರೆಯನ್ನುಂಟು ಮಾಡದೇ ಹೊಸತಾದ ವಿತರಕ ಜಾಲವನ್ನು ತೆರೆದುಕೊಳ್ಳಲಿದೆ.

ಮುಂದಿನ ಒಂದು ವರ್ಷದೊಳಗೆ ದೇಶದ ಪ್ರಮುಖ ನಗರಗಳಲ್ಲಿ 30ರಿಂದ 35 ಪ್ರೀಮಿಯಂ ಡೀಲರ್‌ಶಿಪ್ ತೆರೆದುಕೊಳ್ಳುವ ಇರಾದೆಯಲ್ಲಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಾರುತಿ ಅಂಗಸಂಸ್ಥೆಯಾದ ಸುಜುಕಿಯಿಂದ ಹೊಸತಾದ ಹೈ ಎಂಡ್ ಮಾದರಿಗಳು ದೇಶದಲ್ಲಿ ಬಿಡುಗಡೆಗೊಳ್ಳಲಿರುವಂತೆಯೇ ಸಂಸ್ಥೆಯಿಂದ ಇಂತಹದೊಂದು ಪೂರಕ ನೀತಿ ಕಂಡುಬಂದಿದೆ.

ಮಾರುತಿಯ ಅತಿ ಜನಪ್ರಿಯ ಮಾದರಿಗಳಾದ ಸ್ವಿಫ್ಟ್ ಹಾಗೂ ಡಿಜೈರ್ ಹೊರತುಪಡಿಸಿದರೆ ಇತರ ಮಾದರಿಗಳ ಮಾರಾಟ ಕಡಿಮೆಯಾಗಿದೆ. ಹಾಗಾಗಿ ಈ ನೂತನ ಡೀಲರ್‌ಶಿಪ್‌ನೊಂದಿಗೆ ಗ್ರಾಹಕರಿಗೆ ವಿಭಿನ್ನ ಮಾರಾಟ ಅನುಭವ ನೀಡುವ ಯೋಜನೆಯನ್ನು ಸಂಸ್ಥೆಯು ಹೊಂದಿದೆ.

ಮಾರುತಿ ಸುಜುಕಿಯ ಕಿಝಾಝಿ, ಇನ್ನಷ್ಟೇ ಆಗಮನವಾಗಲಿರುವ ಪ್ರೀಮಿಯಂ ಎಸ್‌ಎಕ್ಸ್4 ಎಸ್ ಕ್ರಾಸ್, ವೈಆರ್‌ಎ ಮುಂತಾದ ಮಾದರಿಗಳು ಹೈ ಎಂಡ್ ಕಾರುಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

Most Read Articles

Kannada
English summary
Country's largest car maker Maruti Suzuki is planning to start a new range of premium dealerships across India to focus on sale of new niche models as the company aims to double its volume to two million cars in the next five years. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X