ಕ್ವಿಡ್ ಎಫೆಕ್ಟ್; ಮಾರುತಿ ಆಲ್ಟೊ ಕೆ10 ಅರ್ಬನೊ ಸೀಮಿತ ಆವೃತ್ತಿ ಬಿಡುಗಡೆ

By Nagaraja

ಈಗಷ್ಟೇ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ರೆನೊ ಕ್ವಿಡ್ ಆಪಾಯವನ್ನು ಅರಿತು ಎಚ್ಚೆತ್ತುಕೊಂಡಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಈ ಹಬ್ಬದ ಆವೃತ್ತಿಯಲ್ಲಿ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ತನ್ನ ಜನಪ್ರಿಯ ಆಲ್ಟೊ ಕೆ10 ಅರ್ಬನೊ (Urbano) ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ನೂತನ ಮಾರುತಿ ಆಲ್ಟೊ ಕೆ10 ಅರ್ಬನೊ ಸೀಮಿತ ಆವೃತ್ತಿಯಲ್ಲಿ ಪ್ರಮುಖವಾಗಿಯೂ ಅಂದತೆಯಲ್ಲಿ ಬದಲಾವಣೆ ಕಂಡುಬರಲಿದ್ದು, ಹೆಚ್ಚುವರಿ ವೈಶಿಷ್ಟ್ಯಗಳನ್ನು ಗ್ರಾಹಕರು ಅನುಭವಿಸಬಹುದಾಗಿದೆ. ಈ ಬಗೆಗಿನ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಭೇಟಿ ಕೊಡಿರಿ.

ಮಾರುತಿ ಆಲ್ಟೊ ಕೆ10 ಅರ್ಬನೊ ಸೀಮಿತ ಆವೃತ್ತಿ ಬಿಡುಗಡೆ

ನೂತನ ಆಲ್ಟೊ ಕೆ10 ಅರ್ಬನೊ ಸೀಮಿತ ಆವೃತ್ತಿಯು ಎಲ್‌ಎಕ್ಸ್, ಎಲ್‌ಎಕ್ಸ್‌ಐ, ವಿಎಕ್ಸ್‌ಐ ಮತ್ತು ವಿಎಕ್ಸ್‌ಐ (ಐಚ್ಛಿಕ) ವೆರಿಯಂಟ್ ಗಳಲ್ಲಿ ಗ್ರಾಹಕರನ್ನು ತಲುಪಲಿದೆ. ಜೊತೆಗೆ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲೂ ಲಭ್ಯವಿರುತ್ತದೆ.

ಮಾರುತಿ ಆಲ್ಟೊ ಕೆ10 ಅರ್ಬನೊ ಸೀಮಿತ ಆವೃತ್ತಿ ಬಿಡುಗಡೆ

ಕಾರಿನ ಹೊರಮೈಯಲ್ಲಿ ಪ್ರಮುಖವಾಗಿಯೂ ಹೆಚ್ಚಿನ ಕ್ರೋಮ್ ಸ್ಪರ್ಶ, ಫಾಗ್ ಲ್ಯಾಂಪ್ ಹೌಸಿಂಗ್, ಹೊರಗಿನ ರಿಯರ್ ವ್ಯೂ ಮಿರರ್, ವೀಲ್ ಆರ್ಚ್, ಟೈಲ್ ಲೈಟ್ ಮತ್ತು ಕಾರಿನ ಬದಿಯಲ್ಲಿ ಹೆಚ್ಚುವರಿ ಗ್ರಾಫಿಕ್ಸ್ ಇರಲಿದೆ.

ಮಾರುತಿ ಆಲ್ಟೊ ಕೆ10 ಅರ್ಬನೊ ಸೀಮಿತ ಆವೃತ್ತಿ ಬಿಡುಗಡೆ

ನ್ನು ಕಾರಿನೊಳಗೆ ಲೆಥರ್ ಸೀಟು ಕವರ್, ಫ್ಲೋರ್ ಮ್ಯಾಟ್, ಸ್ಟೈಲಿಷ್ ಪೆಡಲ್, ಆ್ಯಂಬಿಯಂಟ್ ಲೈಟ್ ಮತ್ತು ಎಲ್‌ಇಡಿ ಡೋರ್ ಸಿಲ್ಸ್ ಸೌಲಭ್ಯಗಳು ಇರಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ರಿವರ್ಸ್ ಪಾರ್ಕಿಂಗ್ ಸೆನ್ಸಾರ್,
  • ಹ್ಯಾಂಡ್ಸ್ ಫ್ರೀ ಬ್ಲೂಟೂತ್ ಕಿಟ್,
  • ಯುಎಸ್ ಬಿ ಕಾರ್ ಚಾರ್ಜರ್ ಜೊತೆ ವೋಲ್ಟೆಜ್, ತಾಪಮಾನ ಡಿಸ್‌ಪ್ಲೇ.
  • ಬೆಲೆ

    ಬೆಲೆ

    ಒಟ್ಟಾರೆಯಾಗಿ ನೂತನ ಮಾರುತಿ ಆಲ್ಟೊ ಕೆ10 ಅರ್ಬನೊ ಲಿಮಿಟೆಡ್ ಎಡಿಷನ್, ಸಾಮಾನ್ಯ ಆವೃತ್ತಿಗಿಂತಲೂ 17,000 ರು.ಗಳಷ್ಟು ದುಬಾರಿಯೆನಿಸಲಿದೆ. ಪ್ರಸ್ತುತ ಆಲ್ಟೊ ಕೆ10 ದೆಹಲಿ ಎಕ್ಸ್ ಶೋ ರೂಂ ಬೆಲೆ ಪ್ರಕಾರ 3.23 ಲಕ್ಷ ರು.ಗಳಿಂದ 4.05 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

    ಮಾರುತಿ ಆಲ್ಟೊ ಕೆ10 ಅರ್ಬನೊ ಸೀಮಿತ ಆವೃತ್ತಿ ಬಿಡುಗಡೆ

    ಹಬ್ಬದ ಆವೃತ್ತಿಯಲ್ಲಿ ದೇಶದ ಜನಪ್ರಿಯ ಸಂಸ್ಥೆಗಳು ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡುವುದು ವಾಡಿಕೆಯಾಗಿದೆ. ಈ ನಡುವೆ ಪ್ರತಿಸ್ಪರ್ಧಿಗಳಿಂದ ಎದುರಾಗಿರುವ ಸವಾಲನ್ನು ಎದುರಿಸುವ ಸಲುವಾಗಿಯೂ ಮಾರುತಿ ಇಂತಹದೊಂದು ನಡೆ ಅನುಸರಿಸಿದೆ.

Most Read Articles

Kannada
English summary
Maruti Suzuki Alto K10 Urbano limited edition launched in India
Story first published: Wednesday, October 7, 2015, 18:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X