ಅತಿ ಶೀಘ್ರದಲ್ಲೇ ಮಾರುತಿ ಸೆಲೆರಿಯೊ ಡೀಸೆಲ್ ಕಾರು ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅತಿ ಶೀಘ್ರದಲ್ಲೇ ಸೆಲೆರಿಯೊ ಡೀಸೆಲ್ ಕಾರನ್ನು ಭಾರತಕ್ಕೆ ಪರಿಚಯಿಸಲಿದೆ. ಸೆಲೆರಿಯೊ ಪೆಟ್ರೋಲ್ ಮಾದರಿಗೆ ದೊರಕಿರುವ ಅಭೂತಪೂರ್ವ ಪ್ರತಿಕ್ರಿಯೆಯ ಬೆನ್ನಲ್ಲೇ ಮಾರುತಿಯಿಂದ ಇಂತಹದೊಂದು ನಡೆ ಕಂಡುಬರುತ್ತಿದೆ.

ಸೆಲೆರಿಯೊದಲ್ಲಿ ಪರಿಚಯಿಸಲಾದ ಮ್ಯಾನುವಲ್ ಆಟೋಮ್ಯಾಟಡ್ ಟ್ರಾನ್ಸ್ ಮಿಷನ್ (ಎಎಂಟಿ) ವ್ಯವಸ್ಥೆಯು ಪ್ರಸ್ತುತ ಕಾರಿನ ಯಶಸ್ಸಿನಲ್ಲಿ ದೊಡ್ಡ ಪರಿಣಾಮ ಬೀರಿತ್ತು. ಈಗ ಈ ಹ್ಯಾಚ್ ಬ್ಯಾಕ್ ಕಾರಿನ ಡೀಸೆಲ್ ಮಾದರಿಗಾಗಿ ಗ್ರಾಹಕರು ಕಾದು ಕುಳಿತಿದ್ದಾರೆ.

maruti celerio

ವರದಿಗಳ ಪ್ರಕಾರ ಸೆಲೆರಿಯೊ ಡೀಸೆಲ್ ಕಾರು ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆಯನ್ನು ತಲುಪಲಿದೆ. ಅಂದರೆ ಇನ್ನು ಎರಡು ಮೂರು ತಿಂಗಳಲ್ಲೇ ಸೆಲೆರಿಯೊ ಡೀಸೆಲ್ ಆವೃತ್ತಿ ಬಿಡುಗಡೆಯಾಗಲಿದೆ.

ಎಂಜಿನ್ ತಾಂತ್ರಿಕತೆ
ಇನ್ ಲೈನ್ ಟು ಸಿಲಿಂಡರ್, 800 ಸಿಸಿ ಡೀಸೆಲ್ ಎಂಜಿನ್,
ಅಶ್ವಶಕ್ತಿ 51.26
150 ತಿರುಗುಬಲ,
ಮ್ಯಾನುವಲ್ ಗೇರ್ ಬಾಕ್ಸ್.
ಮೈಲೇಜ್: 30 kpl (ನಿರೀಕ್ಷೆ)

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಸೆಲೆರಿಯೊ ಡೀಸೆಲ್ ವೆರಿಯಂಟ್ ನಲ್ಲಿ ಎಎಂಟಿ ಸೇವೆ ಇರುವುದಿಲ್ಲ. ಹಾಗಾಗಿ ಮ್ಯಾನುವಲ್ ಗೇರ್ ಬಾಕ್ಸ್ ಇಷ್ಟಪಡುವ ಗ್ರಾಹಕರಿಗಿದು ಪರಿಪೂರ್ಣ ಅನುಭವವಾಗಲಿದೆ.

Most Read Articles

Kannada
English summary
One of the most popular vehicles by Maruti Suzuki in India after their 800 hatchback, is the Celerio. Ever since the launch of Celerio, people have been waiting for a diesel variant.
Story first published: Wednesday, April 1, 2015, 9:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X