ಸಿಯಾಝ್ ಹೈಬ್ರಿಡ್ ಬಿಡುಗಡೆಗೆ ಕ್ಷಣಗಣನೆ; ವಿಶೇಷತೆಗಳೇನು?

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅತಿ ಶೀಘ್ರದಲ್ಲೇ ನೂತನ ಸಿಯಾಝ್ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡಲಿದೆ. ವಾಹನೋದ್ಯಮದ ನಿಕಟ ಮೂಲಗಳ ಪ್ರಕಾರ ಸಿಯಾಝ್ ಮಧ್ಯಮ ಗಾತ್ರದ ಸೆಡಾನ್ ಕಾರಿನ ಹೈಬ್ರಿಡ್ ವರ್ಷನ್ ಮುಂಬರುವ 2015 ಸೆಪ್ಟೆಂಬರ್ 01ರಂದು ದೇಶದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನದ (ಎಸ್‌ಎಚ್‌ವಿಎಸ್) ನೂತನ ಸಿಯಾಝ್ ಹೈಬ್ರಿಡ್ ಕಾರು ಈಗ ಮಾರಾಟದಲ್ಲಿರುವ ಡೀಸೆಲ್ ಮಾದರಿಯ ಸ್ಥಾನವನ್ನು ತುಂಬಲಿದೆ. ಇದು ಲಿಥಿಯಂ ಇಯಾನ್ ಬ್ಯಾಟರಿ ಜೊತೆಗೆ 1.3 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ಸಿಯಾಝ್ ಹೈಬ್ರಿಡ್ ಬಿಡುಗಡೆಗೆ ಕ್ಷಣಗಣನೆ

ಮಾರುತಿ ಸುಜುಕಿ ಸಿಯಾಝ್ ಭಾರತದಲ್ಲಿ ಲಭ್ಯವಾಗಲಿರುವ ಮೊದಲ ಡೀಸೆಲ್ ಹೈಬ್ರಿಡ್ ಸೆಡಾನ್ ಕಾರಾಗಿರಲಿದ್ದು, ಸ್ಟ್ಯಾರ್ಟರ್ ಜನರೇಟರ್ ಜೊತೆಗೆ ಸ್ಟ್ಯಾರ್ಟ್-ಸ್ಟಾಪ್ ತಂತ್ರಗಾರಿಕೆಯೂ ಆಳವಡಿಕೆಯಾಗಲಿದೆ.

ಸಿಯಾಝ್ ಹೈಬ್ರಿಡ್ ಬಿಡುಗಡೆಗೆ ಕ್ಷಣಗಣನೆ

ಇದು ಈಗಿರುವ ಪ್ರತಿ ಲೀಟರ್‌ಗೆ 26.21 ಕೀ.ಮೀ. ಗಳಿಂದ 28 ಕೀ.ಮೀ. ಗಳಷ್ಟು ವರ್ಧಿತ ಮೈಲೇಜ್ ನೀಡುವಲ್ಲಿ ಸಕ್ಷಮವಾಗಿರಲಿದೆ.

ಸಿಯಾಝ್ ಹೈಬ್ರಿಡ್ ಬಿಡುಗಡೆಗೆ ಕ್ಷಣಗಣನೆ

ಅಂತೆಯೇ ಸಿಯಾಝ್‌ ಹೈಬ್ರಿಡ್ ಎಲ್ಲ ವೆರಿಯಂಟ್ ಗಳಲ್ಲೂ ಲಭ್ಯವಾಗಲಿದೆ. ಹಾಗೆಯೇ ಎಬಿಎಸ್, ಇಬಿಡಿ ಮತ್ತು ಚಾಲಕ ಏರ್ ಬ್ಯಾಗ್ ಸೌಲಭ್ಯವೂ ಇರಲಿದೆ.

ಸಿಯಾಝ್ ಹೈಬ್ರಿಡ್ ಬಿಡುಗಡೆಗೆ ಕ್ಷಣಗಣನೆ

ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಗಾರಿಕೆಯ ಮುಖಾಂತರ ಇದರಲ್ಲಿ ಆಳವಡಿಸಲಾಗಿರುವ ಲಿಥಿಯಂ ಇಯಾನ್ ಬ್ಯಾಟರಿಯು ಬ್ರೇಕಿಂಗ್ ವೇಳೆ ಹಾಗೂ ಚಕ್ರಗಳು ಉರುಳುವಾಗಲೂ ಬ್ಯಾಟರಿ ರಿ ಚಾರ್ಜ್ ಆಗಲಿದೆ. ಇವೆಲ್ಲದರ ಜೊತೆಗೆ ಸ್ಟ್ಯಾರ್ಟ್-ಸ್ಟಾಪ್ ತಂತ್ರಜ್ಞಾನವೂ ಮೈಲೇಜ್‌ಗೆ ಮತ್ತಷ್ಟು ಉತ್ತೇಜನವನ್ನು ಸಿಗಲಿದೆ.

ಸಿಯಾಝ್ ಹೈಬ್ರಿಡ್ ಬಿಡುಗಡೆಗೆ ಕ್ಷಣಗಣನೆ

ಒಟ್ಟಿನಲ್ಲಿ ಮಾರುತಿ ಸಿಯಾಝ್ ಡೀಸೆಲ್ ಹೈಬ್ರಿಡ್ ಕಾರಿನ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸದ್ದು ಮಾಡುವ ನಿರೀಕ್ಷೆಯಿದೆ.

Most Read Articles

Kannada
English summary
Maruti Suzuki Ciaz Hybrid To Be Launched On 1st September!
Story first published: Friday, August 28, 2015, 12:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X