ಮಾರುತಿ ಡೀಸೆಲ್ ಎಂಜಿನ್ ನಿರ್ಮಾಣ ಇನ್ನು ವಿಳಂಬ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನದೇ ಘಟಕದಲ್ಲಿ ಡೀಸೆಲ್ ಎಂಜಿನ್ ಅಭಿವೃದ್ಧಿಗೊಳಿಸುವ ಪ್ರಕ್ರಿಯೆಯು ಮತ್ತಷ್ಟು ವಿಳಂಬವಾಗಲಿದೆ. ಸಂಸ್ಥೆಯು ಈಗಲೂ ಹೊಸ ಇಂಜಿನ್ ಪರಿಷ್ಕರಣೆಯಲ್ಲಿ ತೊಡಗಿಸಿಕೊಂಡಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಾರುತಿ ಸಂಸ್ಥೆಯು ವರ್ಷಗಳಿಂದ ಇಟಲಿಯ ಐಕಾನಿಕ್ ಫಿಯೆಟ್ ಸಂಸ್ಥೆಯಿಂದ ಡೀಸೆಲ್ ಎಂಜಿನ್ ಗಳನ್ನು ಆಮದು ಮಾಡುತ್ತಿದೆ. ಆದರೆ ಮುಂದುವರಿದ ಬೆಳವಣಿಗೆಯಲ್ಲಿ ತನ್ನದೇ ಆದ ತಳಹದಿಯಲ್ಲಿ ಎಂಜಿನ್ ಅಭಿವೃದ್ಧಿಗೊಳಿಸುವ ಕುರಿತಂತೆ ಯೋಜನೆ ಪ್ರಕಟಿಸಿತ್ತು.

maruti swift

ಇದರಂತೆ 2016ರ ವೇಳೆಯಾಗುವ ಮಾರುತಿಯ ತನ್ನದೇ ಘಟಕದಲ್ಲಿ ಅಭಿವೃದ್ದಿಯಾದ 1.5 ಲೀಟರ್ ಡೀಸೆಲ್ ಎಂಜಿನ್ ಆಗಮನವಾಗಬೇಕಾಗಿತ್ತು. ಆದರೆ ಪ್ರಸ್ತುತ ಯೋಜನೆಯೀಗ 2018ಕ್ಕೆ ಮುಂದೂಡಲ್ಪಟ್ಟಿದೆ.

ಈ ನಡುವೆ ಮಾರುತಿಯ 800 ಸಿಸಿ ಸೆಲಿರಿಯೊ ಡೀಸೆಲ್ ಕಾರು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಆದರೆ 1.5 ಲೀಟರ್ ಡೀಸೆಲ್ ಎಂಜಿನ್ ಗಾಗಿ ಗ್ರಾಹಕರು ಮತ್ತಷ್ಟು ಸಮಯ ಕಾಯಬೇಕಾಗಿದೆ.

Most Read Articles

Kannada
English summary
Maruti Suzuki is selling a high volume of cars in the Indian market. They offer both petrol and diesel engine options under the hood of their vehicles.
Story first published: Saturday, May 30, 2015, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X