ಅತಿ ಶೀಘ್ರದಲ್ಲೇ ಮಾರುತಿ ಎಸ್-ಕ್ರಾಸ್ ಅನಾವರಣ

By Nagaraja

ಇತ್ತೀಚೆಗಿನ ಸಮಯಗಳಲ್ಲಿ ಸೆಲೆರಿಯೊ, ಸಿಯಾಝ್‌ಗಳಂತಹ ವಿಶ್ವಾಸಾರ್ಹ ಮಾದರಿಗಳನ್ನು ಪರಿಚಯಿಸಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಅತಿ ಶೀಘ್ರದಲ್ಲೇ ಎಸ್-ಕ್ರಾಸ್ ಅನಾವರಣ ಮಾಡಲಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಎಸ್-ಕ್ರಾಸ್ ಸಂಸ್ಥೆಗೆ ಸೇರಿದಂತೆ ಅಭಿಮಾನಿಗಳ ಬಹುನಿರೀಕ್ಷಿತ ಮಾದರಿಯಾಗಿದೆ. ಇದು ಗ್ರಾಹಕರಿಗೆ ಹೊಸತನದ ಅನುಭವ ನೀಡಲಿದೆ ಎಂಬುದರಲ್ಲಿ ಯಾವುದೇ ಸಂದೇಹವೇ ಇಲ್ಲ.

ಮಾರುತಿ ಎಸ್ ಕ್ರಾಸ್

ಮಾರುತಿ ಸುಜುಕಿ ಎಸ್ ಕ್ರಾಸ್ ಕಾರನ್ನು ಜೂನ್ 7ರಂದು ನಡೆಯಲಿರುವ 2015 ಐಐಎಫ್‌ಎ ಪ್ರಶಸ್ತಿ ಸಮಾರಂಭದಲ್ಲಿ ಅನಾವರಣಗೊಳಿಸಲಾಗುತ್ತದೆ. ಆದರೆ ಈ ಕಾರ್ಯಕ್ರಮವು ಭಾರತದಲ್ಲಿ ನಡೆಯುತ್ತಿಲ್ಲ. ಬದಲಾಗಿ ಮಲೇಷ್ಯಾದಲ್ಲಿ ಅನಾವರಣಗೊಳ್ಳಲಿದೆ. ಈ ಸಂದರ್ಭದಲ್ಲಿ ಬಾಲಿವುಡ್ ತಾರೆಯರು ಪ್ರಮುಖ ಆಕರ್ಷಣೆಯಾಗಲಿದ್ದಾರೆ.
ಮಾರುತಿ ಎಸ್ ಕ್ರಾಸ್

ನೂತನ ಮಾರುತಿ ಎಸ್ ಕ್ರಾಸ್ ಕಾರಿನಲ್ಲಿ 1.4 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗುವುದು. ಇನ್ನು ಅನಾವರಣದ ವೇಳೆ ಮತ್ತಷ್ಟು ಮಾಹಿತಿಗಳು ಹೊರಬೀಳಲಿದೆ.

ಮಾರುತಿ ಎಸ್-ಕ್ರಾಸ್ ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್, ನಿಸ್ಸಾನ್ ಟೆರನೊ ಹಾಗೂ ರೆನೊ ಡಸ್ಟರ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ. ಇದರ ಬೆಲೆ 8 ಲಕ್ಷ ರು.ಗಳಿಂದ 12 ಲಕ್ಷ ರು.ಗಳ ವರೆಗಿರುವ ಸಾಧ್ಯತೆಯಿದೆ.

ಮಾರುತಿ ಎಸ್ ಕ್ರಾಸ್

ಇನ್ನು ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಗೆ ಸಮಾನವಾದ ಇಂಟಿರಿಯರ್ ನಿರೀಕ್ಷಿಸಬಹುದಾಗಿದೆ. ಒಟ್ಟಿನಲ್ಲಿ ತನ್ನ ವ್ಯವಸ್ಥಿತ ಡೀಲರ್ ಹಾಗೂ ಸರ್ವಿಸ್ ಸೇವೆಯ ಮುಖಾಂತರ ಸಣ್ಣ ಕಾರು ವಿಭಾಗದಲ್ಲಿ ಅತಿ ಹೆಚ್ಚು ಪ್ರಭಾವ ಹೊಂದಿರುವ ಮಾರುತಿ ಎಸ್-ಕ್ರಾಸ್ ಮುಖಾಂತರ ಇದೇ ಹೆಸರನ್ನು ಕಾಪಾಡಿಕೊಳ್ಳುವ ಇರಾದೆಯಲ್ಲಿದೆ.
Most Read Articles

Kannada
English summary
Maruti Suzuki has not had a new product launch in India recently. The last big launch by Maruti Suzuki was their premium sedan offering Ciaz, which brought the company back on track.
Story first published: Saturday, May 30, 2015, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X