ಎಸ್-ಕ್ರಾಸ್ ಅನಾವರಣ; ಪ್ರೀಮಿಯಂ ಕಾರುಗಳ ಸಾಲಿಗೆ ಮಾರುತಿ

By Nagaraja

ಸಣ್ಣ ಕಾರುಗಳ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವನ್ನು ಸಾಧಿಸುವ ಮುಖಾಂತರ ದೇಶದ ನಂ.1 ಪ್ರಯಾಣಿಕ ಸಂಸ್ಥೆ ಎಂಬ ಬಿರುದನ್ನು ತಮ್ಮದಾಗಿಸಿಕೊಂಡಿರುವ ಮಾರುತಿ ಸುಜುಕಿ, ಈಗ ನೂತನ ಎಸ್-ಕ್ರಾಸ್ ಮಾದರಿಯ ಭರ್ಜರಿ ಅನಾವರಣದ ಮೂಲಕ ಪ್ರೀಮಿಯಂ ವಿಭಾಗದತ್ತವೂ ದಾಪುಗಾಲನ್ನಿಟ್ಟಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಈ ವಿಭಾಗದಲ್ಲಿ ರನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಮಾದರಿಗಳು ಹೆಚ್ಚಿನ ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ. ಈಗ ಈ ವಿಭಾಗಕ್ಕೆ ದೇಶದ ಜನಪ್ರಿಯ ಸಂಸ್ಥೆಯು ಅಧಿಕೃತವಾಗಿ ಎಂಟ್ರಿ ಕೊಡುವ ಮೂಲಕ ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ಎಸ್-ಕ್ರಾಸ್

ಎಸ್-ಕ್ರಾಸ್

ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮಾರುತಿ ಸುಜುಕಿ ಎಸ್ ಕ್ರಾಸ್ ಭರ್ಜರಿ ಅನಾವರಣ ಕಂಡಿದೆ. ಬಲ್ಲ ಮೂಲಗಳ ಪ್ರಕಾರ ಪ್ರಸಕ್ತ ತಿಂಗಳಲ್ಲೇ ಮಾರುಕಟ್ಟೆ ತಲುಪಲಿದೆ.

ವಿತರಣೆ

ವಿತರಣೆ

ವಿಶೇಷವೆಂದರೆ ಮಾರುತಿಯ ಪ್ರೀಮಿಯಂ ನೆಕ್ಸಾ ಡೀಲರ್ ಶಿಪ್ ಗಳಲ್ಲಿ ಮಾತ್ರ ನೂತನ ಎಸ್-ಕ್ರಾಸ್ ಮಾರಾಟ ನಡೆಯಲಿದೆ. ಈ ಮೂಲಕ ಕಾರಿನ ವಿಶೇಷತೆಯನ್ನು ಕಾಪಾಡಲು ಸಂಸ್ಥೆ ಪ್ರಯತ್ನಿಸುತ್ತಿದೆ.

ಪೆಟ್ರೋಲ್ ಇಲ್ಲ, ಡೀಸೆಲ್ ಮಾತ್ರ

ಪೆಟ್ರೋಲ್ ಇಲ್ಲ, ಡೀಸೆಲ್ ಮಾತ್ರ

ನೂತನ ಎಸ್ ಕ್ರಾಸ್ ಒಂದು ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಎಸ್ ಕ್ರಾಸ್ ಸಂಸ್ಥೆಯ ಚೊಚ್ಚಲ ಪ್ರೀಮಿಯಂ ಕ್ರಾಸೋವರ್ ಮಾದರಿಯಾಗಿದ್ದು ಎರಡು ಡೀಸೆಲ್ ಎಂಜಿನ್‌ಗಳಿಂದ ನಿಯಂತ್ರಿಸಲ್ಪಡಲಿದೆ. ಆದರೆ ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಗಳ ಸೇವೆ ಲಭ್ಯವಿರುವುದಿಲ್ಲ. ಇದು 1.6 (320 DDiS ವರ್ಷನ್) ಹಾಗೂ 1.3 (200 DDiS ವರ್ಷನ್) ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

1.6 ಲೀಟರ್ - 118 ಅಶ್ವಶಕ್ತಿ, 320 ಎನ್‌ಎಂ ತಿರುಗುಬಲ,

1.3 ಲೀಟರ್ - 89 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ

ಸದ್ಯ ಆಟೋಮ್ಯಾಟಿಕ್ ಇಲ್ಲ

ಸದ್ಯ ಆಟೋಮ್ಯಾಟಿಕ್ ಇಲ್ಲ

ಈ ಪೈಕಿ ಆರು ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನಿಂದ ನಿಯಂತ್ರಿಸಲ್ಪಡುವ 320 ಡಿಡಿಐಎಸ್ ವರ್ಷನ್, 11.3 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗ ಹಾಗೂ ಪ್ರತಿ ಲೀಟರ್ ಗೆ 22.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅದೇ ರೀತಿ 200 ಡಿಡಿಐಎಸ್ ವರ್ಷನ್ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದ್ದು, 13.2 ಸೆಕೆಂಡುಗಳಲ್ಲಿ 0-100 ವೇಗವರ್ಧನೆ ಹಾಗೂ ಪ್ರತಿ ಲೀಟರ್ ಗೆ 23.65 ಕೀ.ಮೀ. ಮೈಲೇಜ್ ನೀಡಲಿದೆ. ಅಂತೆಯೇ ಸದ್ಯಕ್ಕೆ ಆಟೋಮ್ಯಾಟಿಕ್ ಸೇವೆ ಲಭ್ಯವಿರುವುದಿಲ್ಲ.

ಸುರಕ್ಷತೆ

ಸುರಕ್ಷತೆ

ಇನ್ನು ಸುರಕ್ಷತೆಯ ವಿಚಾರದಲ್ಲೂ ಯಾವುದೇ ರಾಜಿಗೂ ಮಾರುತಿ ತಯಾರಾಗಿಲ್ಲ. ಕಾರಿನ ರಕ್ಷಣಾತ್ಮಕ ರಚನೆ, ಡ್ಯುಯಲ್ ಏರ್ ಬ್ಯಾಗ್, ಆಲ್ ವೀಲ್ ಡಿಸ್ಕ್ ಬ್ರೇಕ್ ಜೊತೆ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಎಲ್ಲ ಮಾದರಿಗಳಲ್ಲೂ ಲಭ್ಯವಾಗಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಕ್ರೂಸ್ ಕಂಟ್ರೋಲ್,

ರೈನ್ ಸೆನ್ಸಿಂಗ್ ವೈಪರ್,

ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಜೊತೆ ಪ್ರೊಜೆಕ್ಟರ್ ಬೆಳಕು,

ಕ್ಲೈಮೇಟ್ ಕಂಟ್ರೋಲ್,

16 ಇಂಚುಗಳ ಅಲಾಯ್ ವೀಲ್,

7 ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮನರಂಜಾನ ಸಿಸ್ಟಂ ಜೊತೆ ನೇವಿಗೇಷನ್, ಬ್ಲೂಟೂತ್,

ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಟಿಎಫ್ ಟಿ ಸ್ಕ್ರೀನ್

5 ವರ್ಣಮಯ ಬಣ್ಣಗಳು

5 ವರ್ಣಮಯ ಬಣ್ಣಗಳು

ಅರ್ಬನ್ ಬ್ಲೂ,

ಕೆಫೈನ್ ಬ್ರೌನ್,

ಗ್ರ್ಯಾನೈಟ್ ಗ್ರೇ,

ಪ್ರೀಮಿಯಂ ಸಿಲ್ವರ್,

ಪಿಯರ್ಲ್ ಆರ್ಕಟಿಕ್ ವೈಟ್.

8 ವೆರಿಯಂಟ್

8 ವೆರಿಯಂಟ್

1.3 ಲೀಟರ್ ಸಿಗ್ನಾ,

1.3 ಲೀಟರ್ ಸಿಗ್ನಾ (ಐಚ್ಛಿಕ),

1.3 ಲೀಟರ್ ಡೆಲ್ಟಾ,

1.3 ಲೀಟರ್ ಝೆಟಾ,

1.3 ಲೀಟರ್ ಆಲ್ಫಾ,

1.6 ಲೀಟರ್ ಡೆಲ್ಟಾ,

1.6 ಲೀಟರ್ ಝೆಟಾ,

1.6 ಲೀಟರ್ ಆಲ್ಫಾ

ಬೆಲೆ

ಬೆಲೆ

ಇನ್ನು ಬೆಲೆ ಬಗೆಗಿನ ವಿವರಗಳು ಬಿಡುಗಡೆ ವೇಳೆಯಷ್ಟೇ ಲಭ್ಯವಾಗಲಿದೆ. ಅಂತೆಯೇ ಭಾರತದಲ್ಲಿ ಮಾರುತಿ ಬದಲು ಸುಜುಕಿ ಬ್ಯಾಡ್ಜ್‌ನಲ್ಲೇ ಮಾರಾಟವಾಗುವ ಸಾಧ್ಯತೆಯಿದೆ.


Most Read Articles

Kannada
English summary
Maruti Suzuki S-Cross unveiled; Engine, Variants, Features & More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X