ವರ್ಷಾಂತ್ಯದೊಳಗೆ 100ರಷ್ಟು ನೆಕ್ಸಾ ಶೋ ರೂಂ ತೆರೆಯಲಿರುವ ಮಾರುತಿ

By Nagaraja

ನಿಮಗೆಲ್ಲರಿಗೂ ತಿಳಿದಿರುವ ಮಾರುತಿ ಸುಜುಕಿಯ ಪ್ರೀಮಿಯಂ ಕ್ರಾಸೋವರ್ ಎಸ್-ಕ್ರಾಸ್ ಮಾದರಿಯು ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಇದರ ಮಾರಾಟವು ಸಂಸ್ಥೆಯ ಪ್ರೀಮಿಯಂ ನೆಕ್ಸಾ ಶೋ ರೂಂಗಳಲ್ಲಿ ನೆರವೇರಲಿದೆ.

ಇದರಂತೆ ತನ್ನ ಮಾರಾಟವನ್ನು ಮತ್ತಷ್ಟು ಕುದುರಿಸಿಕೊಂಡಿರುವ ಸಂಸ್ಥೆಯು ವರ್ಷ್ಯಾಂತ್ಯದೊಳಗೆ 100ರಷ್ಟು ನೆಕ್ಸಾ ಡೀಲರ್ ಶಿಪ್ ಗಳನ್ನು ತೆರೆದುಕೊಳ್ಳುವ ಯೋಜನೆ ಹೊಂದಿದೆ.

ಮಾರುತಿ ಎಸ್ ಕ್ರಾಸ್

ಈ ಹಿಂದೆ ಕಿಜಾಶಿ ಹಾಗೂ ಗ್ರಾಂಡ್ ವಿಟಾರಾ ಮಾದರಿಗಳನ್ನು ಪರಿಚಯಿಸಿದ್ದರೂ ನಿರೀಕ್ಷಿಸಿದಷ್ಟು ಯಶ ಸಾಧಿಸಿರಲಿಲ್ಲ. ಇದರಿಂದಾಗಿ ಎರಡು ವಾಹನಗಳ ಮಾರಾಟವನ್ನು ಹಿಂಪಡೆಯಲಾಗಿತ್ತು.

ಈಗ ಎಲ್ಲ ಹೊಸತನದೊಂದಿಗೆ ಎಸ್-ಕ್ರಾಸ್ ಮಾದರಿ ಪರಿಚಯವಾಗಲಿದೆ. ಇದು ಪ್ರೀಮಿಯಂ ವಿಭಾಗದಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳುವ ಸಾಧ್ಯತೆಯಿದೆ.

ಇದರಂತೆ ಮಾರಾಟವನ್ನು ಇಮ್ಮಡಿಗೊಳಿಸಲು ಶೋ ರೂಂ ಸಂಖ್ಯೆಗಳನ್ನು ವಿಸ್ತರಿಸಲಿದೆ. ಇನ್ನು ಮುಂದೆ ಸಂಸ್ಥೆಯ ಪ್ರೀಮಿಯಂ ಕಾರುಗಳು ನೆಕ್ಸಾ ಶೋ ರೂಂ ಮುಖಾಂತರವೇ ಮಾರಾಟವಾಗಲಿದೆ.

Most Read Articles

Kannada
English summary
Maruti Suzuki is now gaining confidence and plan to introduce more premium offerings in India. The Japanese manufacturer has not had a successful run with premium products in the sub-continent.
Story first published: Saturday, July 4, 2015, 14:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X