2015 ಮೊದಲಾರ್ಧದಲ್ಲೇ ಸೆಲೆರಿಯೊ ಡೀಸೆಲ್ ಕಾರು - ಮೈಲೇಜ್ 35?

By Nagaraja

ದೇಶದ ಅಗ್ರ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಸೆಲೆರಿಯೊ ಪೆಟ್ರೋಲ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಂಎಂಟಿ) ಮಾದರಿಗೆ ಅತಿ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಸಂಸ್ಥೆಯು ಸೆಲೆರಿಯೊ ಡೀಸೆಲ್ ವೆರಿಯಂಟ್ ಬಿಡುಗಡೆ ಮಾಡುವ ಬಗ್ಗೆ ಯೋಜನೆಯಲ್ಲಿದೆ.

ಈಗ ಬಂದಿರುವ ಮಾಹಿತಿಗಳ ಪ್ರಕಾರ 2015 ಮೊದಲಾರ್ಧದಲ್ಲೇ ಸೆಲೆರಿಯೊ ಡೀಸೆಲ್ ವೆರಿಯಂಟ್ ಬಿಡುಗಡೆಯಾಗಲಿದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟ ಗಳಿಸಲು ಸಂಸ್ಥೆಗೆ ನೆರವಾಗಲಿದೆ.

maruti suzuki celerio

ಪೆಟ್ರೋಲ್ ಹಾಗೂ ಡೀಸೆಲ್ ನಡುವಣ ದರ ವ್ಯತ್ಯಾಸ ಕಡಿಮೆಯಾಗಿರುವಂತೆಯೇ ಗ್ರಾಹಕರು ಈಗ ಎರಡು ಎಂಜಿನ್ ಆಯ್ಕೆಗಳತ್ತವೂ ತಮ್ಮ ಚಿತ್ತ ಹಾಯಿಸಿದ್ದಾರೆ.

ಇನ್ನು ವಿನ್ಯಾಸದ ವಿಚಾರಕ್ಕೆ ಬಂದಾಗ ಕಾರಿನ ಹೊರಮೈ ಹಾಗೂ ಒಳಮೈ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆ ಕಡಿಮೆಯಾಗಿದೆ.

ನಾವು ಅಂದುಕೊಂಡ ಹಾಗೇ ಹೊಸ ಸೆಲೆರಿಯೊ 792 ಸಿಸಿ ಡೀಸೆಲ್ ಎಂಜಿನ್ ಪಡೆದುಕೊಂಡಲ್ಲಿ ಅದು ಗ್ರಾಹಕರ ಪಾಲಿಗೆ ಹೊಸ ಅನುಭವವಾಗಲಿದೆ. ಇದು 50 ಅಶ್ವಶಕ್ತಿ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿರಲಿದೆ.

ಮೈಲೇಜ್
ಆದರೆ ಇಲ್ಲಿ ಗಮನಾರ್ಹ ಸಂಗತಿಯೆಂದರೆ ಬಲ್ಲ ಮೂಲಗಳ ಪ್ರಕಾರ ಹೊಸ ಸೆಲೆರಿಯೊ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 32 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇವೆಲ್ಲಕ್ಕೂ ಸಂಬಂಧಿಸಿದಂತೆ ಮಾರುತಿಯಿಂದ ಇನ್ನಷ್ಟೇ ಅಧಿಕೃತ ವರದಿ ಬೇಕಾಗಿದೆ.

Most Read Articles

Kannada
English summary
Maruti Suzuki to launch Celerio diesel trim Soon
Story first published: Thursday, February 5, 2015, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X