ಮಾರುತಿ ಸ್ವಿಫ್ಟ್ ಹೈಬ್ರಿಡ್ ಕಾರಿನ ವಿಶೇಷತೆಗಳೇನು ?

By Nagaraja

ನಿಮಗೆಲ್ಲರಿಗೂ ಗೊತ್ತಿರುವಂತೆಯೇ ದೇಶದ ಅತಿ ದೊಡ್ಡ ಪ್ರಯಾಣಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಸರ್ವಕಾಲಿಕ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಸ್ವಿಫ್ಟ್ ಕಾರಿನ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಈ ಹೈಬ್ರಿಡ್ ಅಥವಾ ಮಿಶ್ರತಳಿಯ ಕಾರು ಪೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮೋಟಾರುಗಳನ್ನು ಹೊಂದಿರಲಿದೆ. ಅಷ್ಟಕ್ಕೂ ಹೊಸ ಕಾರಿನನಲ್ಲಿರುವ ವಿಶೇಷತೆಗಳೇನು? ಈ ಬಗ್ಗೆ ತಿಳಿದುಕೊಳ್ಳಲು ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಮಾರುತಿ ಹೈಬ್ರಿಡ್ ಕಾರಿನ ವಿಶೇಷತೆಗಳೇನು ?

ಭಾರತದಲ್ಲಿ ನಡೆದ ಅಂತರಾಷ್ಟ್ರೀಯ ಗ್ರೀನ್ ಮೊಬಿಲಿಟಿ ಎಕ್ಸ್ ಪೋದಲ್ಲಿ ತನ್ನ ಅತಿ ನೂತನ ಹೈಬ್ರಿಡ್ ತಳಿಯನ್ನು ಪರಿಚಯಿಸಿದ್ದ ಮಾರುತಿ ಸುಜುಕಿ, ಸ್ವಿಫ್ಟ್ ಶ್ರೇಣಿಯ ಕಾರಿಗೆ ಹೊಸ ಆಯಾಮವನ್ನು ನೀಡಿತ್ತು. ಇದು ವಾಹನ ಪ್ರೇಮಿಗಳಲ್ಲೂ ಭಾರಿ ಕುತೂಹಲವನ್ನುಂಟು ಮಾಡಿದೆ.

ಮಾರುತಿ ಹೈಬ್ರಿಡ್ ಕಾರಿನ ವಿಶೇಷತೆಗಳೇನು ?

ಸುಸ್ಥಿರ ಪರಿಸರದ ಸಂರಕ್ಷಣೆಯ ನಿಟ್ಟಿನಲ್ಲಿ ಜಗತ್ತಿನ ವಾಹನ ತಯಾರಿಕ ಸಂಸ್ಥೆಗಳು ನಿಧಾನವಾಗಿ ಪರಿಸರ ಸ್ನೇಹಿ ವಾಹನಗಳ ನಿರ್ಮಾಣದತ್ತ ವಾಲುತ್ತಿದೆ. ಇದೇ ಹಾದಿಯನ್ನು ಮಾರುತಿ ಕೂಡಾ ಅನುಸರಿಸಿದೆ.

ಮಾರುತಿ ಹೈಬ್ರಿಡ್ ಕಾರಿನ ವಿಶೇಷತೆಗಳೇನು ?

ನೂತನ ಸ್ವಿಫ್ಟ್ ರೇಂಜ್ ಎಕ್ಸ್ ಟೇಂಡರ್ ಕಾರಿನಲ್ಲಿ 658 ಸಿಸಿ ಪೆಟ್ರೋಲ್ ಹಾಗೂ 5 ಕೆಡಬ್ಲ್ಯುಎಚ್ ಲಿಥಿಯಂ ಇಯಾನ್ ಬ್ಯಾಟರಿ ಬಳಕೆಯಾಗಲಿದೆ. ಇವೆರಡು ಜೊತೆ ಸೇರಿ 73 ಅಶ್ವಶಕ್ತಿ ಅತ್ಯುತ್ತಮ ಉತ್ಪಾದಿಸಲಿದೆ.

ಮಾರುತಿ ಹೈಬ್ರಿಡ್ ಕಾರಿನ ವಿಶೇಷತೆಗಳೇನು ?

ಈ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಮೋಟಾರಿನ ಸಂಯೋಜನೆಯಿಂದಾಗಿ ಪ್ರತಿ ಲೀಟರ್ ಗೆ 48.2 ಕೀ.ಮೀ. ಮೈಲೇಜ್ ನೀಡಲು ಶಕ್ತವಾಗಲಿದೆ.

ಮಾರುತಿ ಹೈಬ್ರಿಡ್ ಕಾರಿನ ವಿಶೇಷತೆಗಳೇನು ?

ಪ್ರಸ್ತುತ ಕಾರು ಸಂಪೂರ್ಣ ಎಲೆಕ್ಟ್ರಿಕ್ ಮೋಟಾರ್ ನಿಂದ ಮಾತ್ರ 25.5 ಕೀ.ಮೀ.ಗಳಷ್ಟು ದೂರ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ 200 ವಾಟ್ ಎಲೆಕ್ಟ್ರಿಕ್ ಸಾಕೆಟ್ ನಲ್ಲಿ ಕೇವಲ 90 ನಿಮಿಷಗಳಲ್ಲೇ ಸಂಪೂರ್ಣ ಜಾರ್ಜ್ ಮಾಡಿಸಬಹುದಾಗಿದೆ.

ಮಾರುತಿ ಹೈಬ್ರಿಡ್ ಕಾರಿನ ವಿಶೇಷತೆಗಳೇನು ?

ಹೊಸ ಕಾರು ಕೇವಲ 1600 ಕೆ.ಜಿ ಭಾರವನ್ನಷ್ಟೇ ಹೊಂದಿರಲಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಆಳವಡಿಸಲಾಗುವುದು. ಅಂತೆಯೇ ಚಾಲನಾ ಅನುಕೂಲಕ್ಕಾಗಿ ಸಿರೀಸ್ ಹೈಬ್ರಿಡ್, ಪ್ಯಾರಲಲ್ ಹೈಬ್ರಿಡ್ ಮತ್ತು ಆಲ್ ಎಲೆಕ್ಟ್ರಿಕ್ ಗಳೆಂಬ ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

ಮಾರುತಿ ಹೈಬ್ರಿಡ್ ಕಾರಿನ ವಿಶೇಷತೆಗಳೇನು ?

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಸ್ವಿಫ್ಟ್ ಹೈಬ್ರಿಡ್ ಮಾದರಿಯನ್ನು ಸಹ ಸಂಸ್ಥೆಯಾಗಿರುವ ಸುಜುಕಿಯ ಜಪಾನ್ ಘಟಕದಿಂದ ಆಮದು ಮಾಡಲಾಗುವುದು. ಇದು ಈ ನಿರ್ದಿಷ್ಟ ಕಾರಿನ ಬೆಲೆ ದುಬಾರಿಯಾಗಲು ಕಾರಣವಾಗಲಿದೆ. ಹಾಗಿದ್ದರೂ ದೇಶದಲ್ಲಿ ಸರಕಾರದಿಂದ ಸಬ್ಸಿಡಿ ನೀಡುವ ಭರವಸೆಯಿರುವುದರಿಂದ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.

Most Read Articles

Kannada
English summary
Maruti Swift hybrid: all you need to know
Story first published: Saturday, July 4, 2015, 16:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X