ಬೆಂಝ್ ಪವರ್ ಫುಲ್ ಎಎಂಜಿ ಸಿ 63 ಎಸ್ ಬಿಡುಗಡೆ

By Nagaraja

ಭಾರತ ಮಾರುಕಟ್ಟೆಯಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಜರ್ಮನಿ ಮೂಲದ ಐಷಾರಾಮಿ ಕಾರು ಸಂಸ್ಥೆ ಮರ್ಸಿಡಿಸ್ ಬೆಂಝ್, ಎಎಂಜಿ ಸಿ 63 ಎಸ್ ಕಾರನ್ನು ಬಿಡುಗಡೆ ಮಾಡಿದೆ. ಇದು ದೇಶದಲ್ಲಿ ಬೆಂಝ್ ನಿಂದ ಬಿಡುಗಡೆಯಾಗುತ್ತಿರುವ 10ನೇ ಎಎಂಜಿ ಮಾದರಿಯಾಗಿದೆ.

ಬೆಲೆ ಮಾಹಿತಿ: 1.3 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)

ತನ್ನ ಚಲನಶೀಲತೆ ಹಾಗೂ ಶಕ್ತಿ ಎಎಂಜಿಯೊಂದಿಗೆ ವಿಶ್ವ ಕಾರು ಪ್ರಶಸ್ತಿಗೆ ಭಾಜನವಾಗಿರುವ ಬೆಂಝ್ ಎಎಂಜಿ ಸಿ 63 ಎಸ್ ಈ ವಿಭಾಗದಲ್ಲಿ ಸಮಗ್ರ ಚಾಲನಾ ಅನುಭವ ನೀಡಲಿದೆ. ಸಮಗ್ರ ಮಾಹಿತಿ ಹಾಗೂ ಚಿತ್ರಗಳಿಗಾಗಿ ಚಿತ್ರಪುಟದತ್ತ ಕಣ್ಣಾಯಿಸಿರಿ.

ಬೆಂಝ್ ಪವರ್ ಫುಲ್ ಎಎಂಜಿ ಸಿ 63 ಎಸ್ ಬಿಡುಗಡೆ

ನೂತನ ಎಎಂಜಿ ಸಿ 63 ಎಸ್ ಕಾರನಡಿಯಲ್ಲಿ ಕೈಯಿಂದಲೇ ನಿರ್ಮಿತ ಎಎಂಜಿ 4.0 ಲೀಟರ್ ವಿ8 ಬೈ ಟರ್ಬೊ ಎಂಜಿನ್ ಆಳವಡಿಸಲಾಗಿದ್ದು, 700 ಎನ್‌ಎಂ ತಿರುಗುಬಲದಲ್ಲಿ 510 ಅಶ್ವಶಕ್ತಿ ಉತ್ಪಾದಿಸುತ್ತದೆ.

ಬೆಂಝ್ ಪವರ್ ಫುಲ್ ಎಎಂಜಿ ಸಿ 63 ಎಸ್ ಬಿಡುಗಡೆ

ಪ್ರಸ್ತುತ ಶಕ್ತಿಶಾಲಿ ಕಾರು ನಾಲ್ಕು ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಬೆಂಝ್ ಪವರ್ ಫುಲ್ ಎಎಂಜಿ ಸಿ 63 ಎಸ್ ಬಿಡುಗಡೆ

ಅಲ್ಲದೆ ತನ್ನ ಹಿಂದಿನ ಮಾದರಿಗಿಂತಲೂ ಶೇಕಡಾ 32ರಷ್ಟು ಕಡಿಮೆ ಇಂಧನ ಬಳಕೆ ಸಾಕಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಬೆಂಝ್ ಪವರ್ ಫುಲ್ ಎಎಂಜಿ ಸಿ 63 ಎಸ್ ಬಿಡುಗಡೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಇಂಟೆಲಿಜೆಟ್ ಅಸಿಸ್ಟನ್ಸ್ ಸಿಸ್ಟಂ ಸುರಕ್ಷಿತ ಪಯಣವನ್ನು ಖಾತ್ರಿಪಡಿಸಲಿದೆ.

  • ಅಡಾಪ್ಟಿವ್ ಬ್ರೇಕ್ ಲೈಟ್ಸ್,
  • ಪ್ರಿ-ಸೇಫ್ ಸಿಸ್ಟಂ,
  • ಏಳು ಏರ್ ಬ್ಯಾಗ್,
  • ಆಂಟೆಕ್ಷನ್ ಅಸಿಸ್ಟ್,
  • ಐಎಸ್‌ಒಎಫ್ಐಎಕ್ಸ್ ಚೈಲ್ಡ್ ಸೀಟು,
  • ಚಕ್ರದೊತ್ತಡ ಪರೀಕ್ಷಾ ವ್ಯವಸ್ಥೆ
  • ಬೆಂಝ್ ಪವರ್ ಫುಲ್ ಎಎಂಜಿ ಸಿ 63 ಎಸ್ ಬಿಡುಗಡೆ

    ಅಂತೆಯೇ ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್, ರೇಸ್ ಮತ್ತು ವೈಯಕ್ತಿಯ ಮೋಡ್ ಜೊತೆಗೆ ಪ್ರಸ್ತುತ ಎಎಂಜಿ ಕಾರು ಉನ್ನತ ದರ್ಜೆಯ ಚಾಲನಾ ದರ್ಜೆಯನ್ನು ಕಾಪಾಡಿಕೊಳ್ಳಲಿದೆ.

    ಗೇರ್ ಬಾಕ್ಸ್: ಎಎಂಜಿ ಸ್ಪೀಡ್ ಶಿಫ್ಟ್ ಎಂಸಿಟಿ 7 ಸ್ಪೀಡ್ ಸ್ಪೋರ್ಟ್ಸ್

    ವೈಶಿಷ್ಟ್ಯಗಳು

    ವೈಶಿಷ್ಟ್ಯಗಳು

    • ಐಚ್ಛಿಕ ಕಾರ್ಬನ್ ಸೆರಾಮಿಕ್ ಬ್ರೇಕ್,
    • ಮಾನವ ನಿರ್ಮಿತ ಆರ್ಟಿಕೊ ಲೆಥರ್,
    • ಎಎಂಜಿ ಡೈನಾಮಿಕ್ ಸೆಲೆಕ್ಟ್,
    • 3ನೇ ದರ್ಜೆಯ ರೈಡ್ ಕಂಟ್ರೋಲ್,
    • ನಿರ್ವಹಣಾ ಎಕ್ಸಾಸ್ಟ್ ಸಿಸ್ಟಂ
    • ಬೆಂಝ್ ಪವರ್ ಫುಲ್ ಎಎಂಜಿ ಸಿ 63 ಎಸ್ ಬಿಡುಗಡೆ

      ಬೆಲೆ ಮಾಹಿತಿ: 1.3 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)


Most Read Articles

Kannada
English summary
Mercedes-AMG C63 S Launched: Price, Specs, Features & More!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X