ಬೆಂಝ್ ಮಗದೊಂದು ಐಷಾರಾಮಿ ಕಾರು ಭಾರತಕ್ಕೆ

By Nagaraja

ಜರ್ಮನಿಯ ಪ್ರೀಮಿಯಂ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಮಗದೊಂದು ಐಷಾರಾಮಿ ಕಾರನ್ನು ದೇಶಕ್ಕೆ ಪರಿಚಯಿಸಲಿದೆ. ಅದುವೇ,

ಮರ್ಸಿಡಿಸ್ ಬೆಂಝ್ ಎಎಂಜಿ ಸಿ63 ಎಸ್

ಮರ್ಸಿಡಿಸ್ ಬೆಂಝ್‌ನ ನಿರ್ವಹಣಾ ವಿಭಾಗವಾಗಿರುವ ಎಎಂಜಿ ವಿಶ್ವದೆಲ್ಲೆಡೆ ಅತಿ ಹೆಚ್ಚಿನ ಮನ್ನಣೆಗೆ ಪಾತ್ರವಾಗಿದ್ದು, ಭಾರತದಲ್ಲೂ ಮೋಡಿ ಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಮರ್ಸಿಡಿಸ್ ಬೆಂಝ್ ಎಎಂಜಿ ಸಿ63 ಎಸ್

ಪ್ರಸಕ್ತ ಸಾಲಿನಲ್ಲಿ ಈಗಾಗಲೇ 10 ಹೊಸ ಮಾದರಿಗಳನ್ನು ಪರಿಚಯಿಸಿರುವ ಬೆಂಝ್, ವರ್ಷಾಂತ್ಯದೊಳಗೆ ಈ ಸಂಖ್ಯೆಯನ್ನು 15ಕ್ಕೆ ಏರಿಸುವುದರಲ್ಲಿ ಬದ್ಧವಾಗಿದೆ. ಅಂದರೆ 2015ನೇ ಸಾಲಿನಲ್ಲಿ 15 ಮಾದರಿಗಳು ದೇಶದಲ್ಲಿ ಬಿಡುಗಡೆಯಾಗಲಿದೆ.

2015 ಸೆಪ್ಟೆಂಬರ್ 03ರಂದು ಇದಕ್ಕೆ ವೇದಿಕೆಯೊದಗಿಸಲಿದ್ದು, ಬೆಂಝ್ ಎಎಂಜಿ ಸಿ63 ಎಸ್ ಮಾಡೆಲ್ ಪ್ರವೇಶವಾಗಲಿದೆ. ಕಂಪ್ಲೀಟ್ ಬಿಲ್ಡ್ ಯುನಿಟ್ ಮುಖಾಂತರ ಇದು ಭಾರತವನ್ನು ತಲುಪಲಿದೆ.

ಮರ್ಸಿಡಿಸ್ ಬೆಂಝ್ ಎಎಂಜಿ ಸಿ63 ಎಸ್

ಎಂಜಿನ್ ತಾಂತ್ರಿಕತೆ
  • 4.0 ಲೀಟರ್ ವಿ8 ಟ್ವಿನ್ ಟರ್ಬೊ
  • 503 ಅಶ್ವಶಕ್ತಿ
  • 700.19 ಎನ್‌ಎಂ ತಿರುಗುಬಲ
  • 7 ಸ್ಪೀಡ್ ಎಎಂಜಿ ಸ್ಪೀಡ್ ಶಿಫ್ಟ್ ಗೇರ್ ಬಾಕ್ಸ್
  • ಗರಿಷ್ಠ ವೇಗ ಗಂಟೆಗೆ 250 ಕೀ.ಮೀ.
ಮರ್ಸಿಡಿಸ್ ಬೆಂಝ್ ಎಎಂಜಿ ಸಿ63 ಎಸ್
ಇನ್ನು ಗರಿಷ್ಠ ನಿರ್ವಹಣೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬೆಂಝ್ ಎಎಂಜಿ ಸಿ63 ಎಸ್ ಮಾಡೆಲ್ ನಿರ್ಮಾಣದಲ್ಲಿ ಅತಿ ಹೆಚ್ಚು ಕಾರ್ಬನ್ ಫೈಬರ್ ಪರಿಕರಗಳನ್ನು ಬಳಕೆ ಮಾಡಲಾಗಿದೆ.
Most Read Articles

Kannada
English summary
Mercedes-AMG C63 S Model Launching In India On 3rd September
Story first published: Tuesday, August 18, 2015, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X