ನ್ಯೂ ಏಜ್ ಮಹೀಂದ್ರ ಎಕ್ಸ್‌ಯುವಿ500 ಭರ್ಜರಿ ಲಾಂಚ್

By Nagaraja

ದೇಶದ ಎಸ್‌ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಧೆಯು ಎಲ್ಲ ಹೊಸತನದಿಂದ ಕೂಡಿದ ನ್ಯೂ ಏಜ್ ಮಹೀಂದ್ರ ಎಕ್ಸ್ ಯುವಿ500 ಕಾರನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆಯು 11.21 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ 15.99 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ನಾಲ್ಕು ವರ್ಷಗಳಷ್ಟು ಕಾಲ ನೆಲೆಯೂರಿದ ಬಳಿಕ ಚಿರತೆಯಿಂದ ಸ್ಪೂರ್ತಿ ಪಡೆದ ಮಹೀಂದ್ರ ಎಕ್ಸ್‌ಯುವಿ500 ಹೊಸ ಸ್ವರೂಪ ಪಡೆದುಕೊಳ್ಳಲೆದೆ. ಅಲ್ಲದೆ ನೂತನ ಮಾದರಿಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದೆ.

ನ್ಯೂ ಏಜ್ ಮಹೀಂದ್ರ ಎಕ್ಸ್‌ಯುವಿ500 ಭರ್ಜರಿ ಲಾಂಚ್

ಹೊರಮೈಯಲ್ಲಿ ಮಹೀಂದ್ರ ಸ್ಕಾರ್ಪಿಯೊಗೆ ಸಮಾನವಾದ ರೀತಿಯಲ್ಲಿ ಹೊಸತಾದ ಗ್ರಿಲ್ ಹಾಗೂ ಕ್ರೋಮ್ ಸ್ಪರ್ಶವನ್ನು ಪಡೆದುಕೊಂಡಿದೆ. ಇನ್ನು ಆಧುನಿಕ ನೋಟದ ಭಾಗವಾಗಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಕ್ಲಸ್ಟರ್ ನಲ್ಲಿ ಬದಲಾವಣೆ ಕಂಡುಬಂದಿದೆ. ಇದು ವಿಶಿಷ್ಟ ಎಸ್ ಲೈನ್ ಹಾಗೂ ಕಾರ್ನರಿಂಗ್ ಬೆಳಕಿನಿಂದ ಕೂಡಿರಲಿದೆ.

ನ್ಯೂ ಏಜ್ ಮಹೀಂದ್ರ ಎಕ್ಸ್‌ಯುವಿ500 ಭರ್ಜರಿ ಲಾಂಚ್

ಶಕ್ತಿಶಾಲಿ ಬೊನೆಟ್, ದಿಟ್ಟವಾದ ಫ್ರಂಟ್ ಬಂಪರ್ ಹಾಗೂ ಹೊಸತಾದ ಸ್ಕಿಡ್ ಪ್ಲೇಟ್, ಕ್ರೋಮ್ ರೇಖೆ, ಎಲ್ ಆಕಾರದ ಫಾಗ್ ಲ್ಯಾಂಪ್ ಹಾಗೂ ನೂತನ ಅಲಾಯ್ ವೀಲ್ ಗಳನ್ನು ಹೊಸ ಕಾರು ಪಡೆಯಲಿದೆ.

ನ್ಯೂ ಏಜ್ ಮಹೀಂದ್ರ ಎಕ್ಸ್‌ಯುವಿ500 ಭರ್ಜರಿ ಲಾಂಚ್

ಇನ್ನು ಕಾರಿನೊಳಗೂ ಪ್ರೀಮಿಯಂ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಇದು ಕಪ್ಪು ಹಾಗೂ ಬೀಜ್ ವರ್ಣದ ಡ್ಯಾಶ್ ಬೋರ್ಡ್ ಪಡೆದುಕೊಂಡಿದೆ. ಕಾರಿನೊಳಗೆ ಐಸಿ ಬ್ಲೂ ಲೈಟಿಂಗ್, ಅಲ್ಯೂಮಿನಿಯಂ ಸ್ಕಫ್ ಪ್ಲೇಟ್, ಸ್ಪೋರ್ಟಿ ಅಲ್ಯೂಮನಿಯಂ ಆಕ್ಸೆಲೇಟರ್, ಕ್ಲಚ್ ಹಾಗೂ ಬ್ರೇಕ್ ಪೆಡಲ್ ಪಡೆಯಲಿದೆ.

ನ್ಯೂ ಏಜ್ ಮಹೀಂದ್ರ ಎಕ್ಸ್‌ಯುವಿ500 ಭರ್ಜರಿ ಲಾಂಚ್

ಇನ್ನು ಹೊಸ ಮಹೀಂದ್ರ ಎಕ್ಸ್ ಯುವಿ 500 ಕಾರಿನಲ್ಲಿ ಎಲೆಕ್ಟ್ರಿಕ್ ಸನ್ ರೂಫ್, ಕೀಲೆಸ್ ಎಂಟ್ರಿ ಹಾಗೂ ಪುಶ್ ಬಟನ್ ಸ್ಟ್ಯಾರ್ಟ್ ಸೌಲಭ್ಯವಿರಲಿದೆ.

ನ್ಯೂ ಏಜ್ ಮಹೀಂದ್ರ ಎಕ್ಸ್‌ಯುವಿ500 ಭರ್ಜರಿ ಲಾಂಚ್

ಹಾಗೆಯೇ ಹಳೆಯ 6.2 ಇಂಚುಗಳ ಡಿಸ್ ಪ್ಲೇಯ ಸ್ಥಾನದಲ್ಲಿ ಮತ್ತಷ್ಟು ದೊಡ್ಡದಾ ಏಳು ಇಂಚಿನ ಟಚ್ ಸ್ಕ್ರೀನ್ ಜೊತೆಗೆ ತ್ರಿಡಿ ನೇವಿಗೇಷನ್ ಹಾಗೂ ಮಹೀಂದ್ರ ಬ್ಲೂ ಸೆನ್ಸ್ ಆಪ್ ಕಾಣಸಿಗಲಿದೆ.

ನ್ಯೂ ಏಜ್ ಮಹೀಂದ್ರ ಎಕ್ಸ್‌ಯುವಿ500 ಭರ್ಜರಿ ಲಾಂಚ್

ಇವೆಲ್ಲದರ ಹೊರತಾಗಿ ರಿಯರ್ ಕ್ಯಾಮೆರಾ ಡೈನಾಮಿಕ್ ಅಸಿಸ್ಟ್ ಹಾಗೂ ಆರು ವಿಧದಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು ಸೇವೆ ಕೂಡಾ ಸಿಗಲಿದೆ.

ನ್ಯೂ ಏಜ್ ಮಹೀಂದ್ರ ಎಕ್ಸ್‌ಯುವಿ500 ಭರ್ಜರಿ ಲಾಂಚ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದರ 2.2 ಲೀಟರ್ ಎಂ ಹಾಕ್ ಡೀಸೆಲ್ ಎಂಜಿನ್ ಭಾರತೀಯ ವಾಹನ ಅಧ್ಯಯನ ಪ್ರಕಾರ ಪ್ರತಿ ಲೀಟರ್ ಗೆ 16 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ನ್ಯೂ ಏಜ್ ಮಹೀಂದ್ರ ಎಕ್ಸ್‌ಯುವಿ500 ಭರ್ಜರಿ ಲಾಂಚ್

ಒಟ್ಟಿನಲ್ಲಿ ಹೊಸ ವಿನ್ಯಾಸದ ವಿಚಾರದಲ್ಲಿ ಮಾತ್ರವಲ್ಲ ಪರಿಷ್ಕೃತ ಶಾಕ್ ಅಬ್ಸಾರ್ಬರ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂಗಳು (ಇಎಸ್‌ಪಿ) ಅತ್ಯುತ್ತಮ ಹ್ಯಾಂಡ್ಲಿಂಗ್ ಹಾಗೂ ಸ್ಥಿರತೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಡಬ್ಲ್ಯು 4 (ಫ್ರಂಟ್ ವೀಲ್ ಡ್ರೈವ್): 11.21 ಲಕ್ಷ ರು.

ಡಬ್ಲ್ಯು 6 (ಫ್ರಂಟ್ ವೀಲ್ ಡ್ರೈವ್): 12.48 ಲಕ್ಷ ರು.

ಡಬ್ಲ್ಯು 8 (ಫ್ರಂಟ್ ವೀಲ್ ಡ್ರೈವ್): 14.18 ಲಕ್ಷ ರು.

ಡಬ್ಲ್ಯು 8 (ಆಲ್ ವೀಲ್ ಡ್ರೈವ್): 14.99 ಲಕ್ಷ ರು.

ಡಬ್ಲ್ಯು 10 (ಫ್ರಂಟ್ ವೀಲ್ ಡ್ರೈವ್): 14.99 ಲಕ್ಷ ರು.

ಡಬ್ಲ್ಯು 10 (ಆಲ್ ವೀಲ್ ಡ್ರೈವ್): 15.99 ಲಕ್ಷ ರು.

ವಿಶೇಷತೆ

ವಿಶೇಷತೆ

ಕ್ರೂಸ್ ಕಂಟ್ರೋಲ್

ರಿಯರ್ ಪಾರ್ಕಿಂಗ್ ಸೆನ್ಸಾರ್,

ಲೆಥರ್ ಹೋದಿಕೆ,

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್,

ರೈನ್ ಸೆನ್ಸಿಂಗ್ ವೈಪರ್,

ಟಚ್ ಸ್ಕ್ರೀನ್ ಡಿಸ್ ಪ್ಲೇ ಜೊತೆಗೆ ನೇವಿಗೇಷನ್,

ವಾಯ್ಸ್ ಮೆಸೇಜಿಂಗ್ ಸಿಸ್ಟಂ

ಸುರಕ್ಷತೆ

ಸುರಕ್ಷತೆ

ಆರು ಏರ್ ಬ್ಯಾಗ್,

ಎಬಿಎಸ್,

ಇಬಿಡಿ,

ಟ್ರಾಕ್ಷನ್ ಕಂಟ್ರೋಲ್,

ಇಎಸ್ ಪಿ,

ಬ್ರೇಕ್ ಅಸಿಸ್ಟ್

Most Read Articles

Kannada
English summary
Mahindra has launched the new age XUV 500 in India today. Mahindra had started promoting the vehicle well in advance, through a contest.
Story first published: Monday, May 25, 2015, 16:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X