ಹೋಂಡಾ ಎಚ್‌ಆರ್-ವಿ ಅನಾವರಣ; ಭಾರತಕ್ಕೆ ಬರುತ್ತಾ?

By Nagaraja

ಜಪಾನ್‌ನ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಎಲ್ಲ ಹೊಸತನದಿಂದ ಕೂಡಿರುವ ಎಚ್‌ಆರ್-ವಿ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಅನಾವರಣಗೊಳಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ನಿಕಟ ಭವಿಷ್ಯದಲ್ಲೇ ಎಚ್‌ಆರ್-ವಿ ಮಾದರಿಯನ್ನು ಹೋಂಡಾ ಸಂಸ್ಥೆಯು ಭಾರತಕ್ಕೆ ಪರಿಚಯಿಸಲಿದೆ.

ಹೋಂಡಾ ಜನಪ್ರಿಯ ಸಿಆರ್-ವಿ ಮಾದರಿಯ ತಳಹದಿಯಲ್ಲಿ ರೂಪುಗೊಂಡಿರುವ ಎಚ್‌-ವಿ ಅತ್ಯಾಧುನಿಕ ಮುಂದುವರಿದ ತಂತ್ರಜ್ಞಾನಗಳನ್ನು ಪಡೆಯಲಿದೆ. ವಾಹನ ಶೈಲಿಯಿಂದ ಹಿಡಿದು ಚಾಲನೆ ಹಾಗೂ ಇಂಧನ ಕ್ಷಮತೆಯಲ್ಲಿ ಇದು ಅದ್ಭುತ ಅನುಭವ ನೀಡಲಿದೆ.

ಹೋಂಡಾ ಎಚ್‌ಆರ್-ವಿ ಅನಾವರಣ

ನೂತನ ಹೋಂಡಾ ಎಚ್‌ಆರ್-ವಿ 130 ಅಶ್ವಶಕ್ತಿ ಉತ್ಪಾದಿಸಬಲ್ಲ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಹಾಗೂ 120 ಪಿಎಸ್ ಪವರ್‌ನ ಐ-ಡಿಟೆಕ್ ಡೀಸೆಲ್ ಎಂಜಿನ್ ಪಡೆಯಲಿದೆ. ಇವೆರಡು ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಂತೆಯೇ ಪೆಟ್ರೋಲ್ ಮಾದರಿಯು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಹೋಂಡಾ ಎಚ್‌ಆರ್-ವಿ ಅನಾವರಣ

ಹೋಂಡಾ ಎಚ್‌‌ಆರ್ವಿ ಕಾರು ಹೋಂಡಾದ ಮ್ಯಾಜಿಕ್ ಸೀಟು ಸಿಸ್ಟಂ ಪಡೆಯಲಿದೆ. ಅಲ್ಲದೆ 453 ಲೀಟರ್ ಬೂಟ್ ಸ್ಪೇಸ್ ಕೂಡಾ ಪಡೆಯಲಿದೆ. ಇನ್ನು ಸೀಟುಗಳನ್ನು ಮಡಚಿದಾಗ ಗರಿಷ್ಠ 1026 ಲೀಟರ್ ಬೂಟ್ ಸ್ಪೇಸ್ ಪಡೆಯಲಿದೆ.

ಹೋಂಡಾ ಎಚ್‌ಆರ್-ವಿ ಅನಾವರಣ

ಇನ್ನು ಏಳು ಇಂಚಿನ ಕನೆಕ್ಟ್ ಸ್ಕ್ರೀನ್, ಸ್ಮಾರ್ಟ್ ಫೋನ್ ತರಹನೇ ಕ್ರಿಯಾತ್ಮಕತೆ, ಆಂಡ್ರಾಯ್ಡ್ 4.0.4 ಆಪರೇಟಿಂಗ್ ಸಿಸ್ಟಂಗಳು ವೆಬ್ ಬ್ರೌಸಿಂಗ್, ಸೋಷಯಲ್ ಮೀಡಿಯಾ ಹಾಗೂ ಇಂಟರ್‌ನೆಟ್‌ನಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ.

ಹೋಂಡಾ ಎಚ್‌ಆರ್-ವಿ ಅನಾವರಣ

ಇನ್ನು ಸುರಕ್ಷತೆಯತ್ತ ದೃಷ್ಟಿ ಹಾಯಿಸಿದಾಗ ಕರ್ಟೈನ್ ಏರ್ ಬ್ಯಾಗ್, ಏಸ್ ಬಾಡಿ ನಿರ್ಮಾಣ ಮತ್ತು ಹೋಂಡಾದ ಮುಂದುವರಿದ ಡ್ರೈವ್ ಆಸಿಸ್ಟ್ ಸಿಸ್ಟಂ ಕೂಡಾ ಪಡೆಯಲಿದೆ.

ಹೋಂಡಾ ಎಚ್‌ಆರ್-ವಿ ಅನಾವರಣ

ಒಟ್ಟಿನಲ್ಲಿ ನೂತನ ಎಚ್‌ಆರ್-ವಿ ಕಾಂಪಾಕ್ಟ್ ಎಸ್‌ಯುವಿ ಭಾರತ ಮಾರುಕಟ್ಟೆಯನ್ನು ಯಾವಾಗ ತಲುಪಲಿದೆ ಎಂಬುದು ಇನ್ನಷ್ಟೇ ಖಚಿತವಾಗಲಿದೆ.

Most Read Articles

Kannada
Read in English: New Honda HR-V Revealed
English summary
The latest Honda HR-V has been revealed for 2015, with the company showcasing the new crossover with ‘dynamic styling, the versatility of an MPV, sophisticated-yet-fun driving dynamics and fuel-efficient performance.'
Story first published: Thursday, February 19, 2015, 15:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X