ಮುಂದಿನ ತಲೆಮಾರಿನ ಆಲ್ಟೊ 2017ರಲ್ಲಿ ಬಿಡುಗಡೆ

By Nagaraja

ದೇಶದ ಸರ್ವಕಾಲಿಕ ಶ್ರೇಷ್ಠ ಹಾಗೂ ನಂ.1 ಕಾರಾಗಿರುವ ಆಲ್ಟೊದ ಮುಂದಿನ ತಲೆಮಾರಿನ ಆವೃತ್ತಿಯು 2017ರಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಆಟೋ ವಲಯದಲ್ಲಿ ಗಂಭೀರ ಚರ್ಚೆಗಳು ಆರಂಭವಾಗಿದ್ದು, ಹೊಚ್ಚ ಹೊಸ ಆಲ್ಟೊ 2017 ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂಬುದು ತಿಳಿದು ಬಂದಿದೆ.

ನೂತನ ಕಾರು ಆಲ್ಟೊ ಕೀ (Alto Kei) ತಳಹದಿಯಲ್ಲಿ ರೂಪುಗೊಳ್ಳಲಿದ್ದು, ಭಾರತೀಯ ರಸ್ತೆ ಹಾಗೂ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ವಿನ್ಯಾಸವಾಗಲಿದೆ. ನಿಮ್ಮ ಮಾಹಿತಿಗಾಗಿ ಈ ಹಿಂದಿನ ಆಲ್ಟೊ 800 ಹಾಗೂ ಕೆ10 ಮಾದರಿಗಳನ್ನು ಭಾರತೀಯ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿತ್ತು. ಅಲ್ಲದೆ ತನ್ನ ಈ ಯೋಜನೆಯಲ್ಲಿ ಮಾರುತಿ ಯಶಸ್ಸನ್ನು ಸಾಧಿಸಿತ್ತು.

ಮುಂದಿನ ತಲೆಮಾರಿನ ಆಲ್ಟೊ 2017ರಲ್ಲಿ ಬಿಡುಗಡೆ

ನ್ಯೂ ಜನರೇಷನ್ ಆಲ್ಟೊ ಈಗಿರುವ ಮಾದರಿಗಿಂತಲೂ ಕಡಿಮೆ ಭಾರ, ಹೆಚ್ಚು ವೇಗ ಹಾಗೂ ಗರಿಷ್ಠ ನಿರ್ವಹಣೆಯನ್ನು ನೀಡಲಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ
ಮುಂದಿನ ತಲೆಮಾರಿನ ಆಲ್ಟೊ 2017ರಲ್ಲಿ ಬಿಡುಗಡೆ

ವರದಿಗಳ ಪ್ರಕಾರ ಹೊಸ ಆಲ್ಟೊದಲ್ಲಿ 658 ಸಿಸಿ ಎಂಜಿನ್ ಆಳವಡಿಕೆಯಾಗಲಿದ್ದು, 53 ಅಶ್ವಶಕ್ತಿ ಉತ್ಪಾದಿಸಲಿದೆ. ಇನ್ನು ಇದರ ಟರ್ಬೊ ಮಾದರಿಯು ಗರಿಷ್ಠ 62 ಅಶ್ವಶಕ್ತಿ ಉತ್ಪಾದಿಸಲಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ

ಮುಂದಿನ ತಲೆಮಾರಿನ ಆಲ್ಟೊ 2017ರಲ್ಲಿ ಬಿಡುಗಡೆ

ಮುಂದಿನ ತಲೆಮಾರಿನ ಆಲ್ಟೊ ಭಾರತದ ಎಮಿಷನ್ ಸ್ಟ್ಯಾಂಡರ್ಡ್ ಮಾನ್ಯತೆಯನ್ನು ಹೊಂದಿರಲಿದ್ದು, ಪ್ರತಿ ಲೀಟರ್ ಗೆ 32 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿರಲಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ

ಮುಂದಿನ ತಲೆಮಾರಿನ ಆಲ್ಟೊ 2017ರಲ್ಲಿ ಬಿಡುಗಡೆ

ಇನ್ನು ಈಗಿರುವ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ (ಎಎಂಟಿ) ಮಾದರಿಯನ್ನು ಉಳಿಸಿಕೊಳ್ಳಲಾಗುವುದು. ಅಲ್ಲದೆ ಆಯಾಮದಲ್ಲಿ (3395ಎಂಎಂ) ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ

ಮುಂದಿನ ತಲೆಮಾರಿನ ಆಲ್ಟೊ 2017ರಲ್ಲಿ ಬಿಡುಗಡೆ

ನೂತನ ಆಲ್ಟೊ ಗುಜರಾತ್ ಘಟಕದಲ್ಲಿ ನಿರ್ಮಾಣವಾಗಲಿದ್ದು, ಮೂರರಿಂದ 4.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ


Most Read Articles

Kannada
Read more on ಆಲ್ಟೊ alto
English summary
Next Generation Maruti Alto launch in 2017
Story first published: Friday, August 28, 2015, 17:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X