9ನೇ ಬಾರಿಯೂ ನಂ.1 ಎಸ್‌ಯುವಿ ಬೊಲೆರೊ ಯಶಸ್ಸಿನ 9 ಗುಟ್ಟುಗಳು

ಸತತವಾಗಿ ಒಂಬತ್ತನೇ ಬಾರಿಯೂ ದೇಶದ ನಂ.1 ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಎಂಬ ಗೌರವಕ್ಕೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಅತ್ಯಂತ ಜನಪ್ರಿಯ ವಾಹನವಾಗಿರುವ ಬೊಲೆರೊ ಪಾತ್ರವಾಗಿದೆ. 2015ನೇ ಆರ್ಥಿಕ ಸಾಲಿನಲ್ಲೂ ಒಂದು ಲಕ್ಷ ಮಾರಾಟ ಸಂಖ್ಯೆಯನ್ನು ದಾಟಿರುವ ಬೊಲೆರೊ ಸತತವಾಗಿ ನಾಲ್ಕನೇ ಬಾರಿ ಇಂತಹದೊಂದು ಸಾಧನೆ ಮಾಡಿದೆ.

ಹೀಗೆ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಸಾಗುತ್ತಿರುವ ದೇಶದ ನಂ.1 ಎಸ್ ಯುವಿ ವಾಹನ ಪ್ರೇಮಿಗಳ ನೆಚ್ಚಿನ ಕಾರೆನಿಸಿಕೊಳ್ಳಲಿರುವ ಕಾರಣಗಳೇನು? ಬೊಲೆರೊದಲ್ಲಿ ಅಂತದ್ದೇನಿದೆ? ಈ ಕುರಿತಾಗಿ ಒಂಬತ್ತು ಅಂಶಗಳ ಕುರಿತಾಗಿ ನಿಖರ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿದ್ದೇವೆ. ಮಿಸ್ ಮಾಡದೇ ಓದಿ...

09. 2000ನೇ ಇಸವಿಯಲ್ಲಿ ಬಿಡುಗಡೆ

09. 2000ನೇ ಇಸವಿಯಲ್ಲಿ ಬಿಡುಗಡೆ

ಐಕಾನಿಕ್ ಬೊಲೆರೊ ಕ್ರೀಡಾ ಬಳಕೆಯ ವಾಹನವು 200ನೇ ಇಸವಿಯಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಿತ್ತು. ಇದು ಬಳಿಕ ದೇಶದ ವಾಹನ ಪ್ರೇಮಿಗಳ ಜೀವನ ಶೈಲಿಯನ್ನೇ ಬದಲಾಯಿಸಿತ್ತು.

08.2008ರಲ್ಲಿ ಸಿಆರ್‌ಡಿಎ ತಂತ್ರಜ್ಞಾನ

08.2008ರಲ್ಲಿ ಸಿಆರ್‌ಡಿಎ ತಂತ್ರಜ್ಞಾನ

2008ರಲ್ಲಿ ಮಹೀಂದ್ರ ಬೊಲೆರೊ ವಿಎಲ್ ಎಕ್ಸ್ ಮಾದರಿಯಲ್ಲಿ ಸಿಆರ್ ಡಿಇ ತಂತ್ರಜ್ಞಾನ ಆಳವಡಿಸಲಾಗಿತ್ತು. ಅಲ್ಲದೆ ದಿಟ್ಟ ಹಾಗೂ ಹೆಚ್ಚು ಸೊಗಸಾದ ಬೊಲೆರೊ ವಾಹನ ಪ್ರೇಮಿಗಳ ಆಕರ್ಷಣೆಗೆ ಪಾತ್ರವಾಗಿತ್ತು.

07. 2011ರಲ್ಲಿ ನ್ಯೂ ಬೊಲೆರೊ

07. 2011ರಲ್ಲಿ ನ್ಯೂ ಬೊಲೆರೊ

ಎಲ್ಲ ಹೊಸತನದ ಎಂ2ಡಿಐಸಿಆರ್ (m2DiCR) ಎಂಜಿನ್ ನೊಂದಿಗೆ ನೂತನ ಬೊಲೆರೊ 2011ರಲ್ಲಿ ಬಿಡುಗಡೆಯಾಗಿತ್ತು. ಇದು ಅತ್ಯುತ್ತಮ ಚಾಲನಾ ಅನುಭವದ ಜೊತೆಗೆ ಗರಿಷ್ಠ ಇಂಧನ ಕ್ಷಮತೆಯನ್ನು ನೀಡುವಲ್ಲಿ ಯಶಸ್ವಿಯಾಗಿತ್ತು.

 06. ಮೂಲ ವಿನ್ಯಾಸ

06. ಮೂಲ ವಿನ್ಯಾಸ

ಮಹೀಂದ್ರ ಅರ್ಮಡಾ ಗ್ರಾಂಡ್‌ನಿಂದ ಮೂಲ ವಿನ್ಯಾಸ ಪಡೆದುಕೊಂಡಿರುವ ಮೊದಲ ತಲೆಮಾರಿನ ಬೊಲೆರೊದಲ್ಲಿ ಪ್ಯೊಜೊದ 2.5 ಲೀಟರ್ ಐಡಿಐ ಎಂಜಿನ್ (75 ಅಶ್ವಶಕ್ತಿ) ಆಳವಡಿಕೆಯಾಗಿತ್ತು. ಬಳಿಕ ಕೆಲವೊಂದು ಬದಲಾವಣೆಗಳೊಂದಿಗೆ ಎರಡನೇ ತಲೆಮಾರಿನ ಮಹೀಂದ್ರ ಬೊಲೆರೊ ಪರಿಚಯಿಸಲಾಗಿತ್ತು. ಇದರಲ್ಲಿ ಪ್ರಮುಖವಾಗಿಯೂ ಎಂಜಿನ್ ಮಾರ್ಪಾಡು ಕಂಡುಬಂದಿತ್ತು. ಇದರಲ್ಲಿ 72 ಅಶ್ವಶಕ್ತಿ ಉತ್ಪಾದಿಸುವ 2,523 ಸಿಸಿ ಟರ್ಬೊ ಚಾರ್ಜ್ಡ್ ಡೈರಕ್ಟ್ ಡೀಸೆಲ್ ಎಂಜಿನ್ ಬಳಕೆಯಾಗಿತ್ತು.

05. ಇಂಧನ ಕ್ಷಮತೆ

05. ಇಂಧನ ಕ್ಷಮತೆ

ಮೈಲೇಜ್ ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇಂಧನ ಕ್ಷಮತೆ. ಇದು ಎಸಿ ಆನ್ ಮಾಡಿದರೂ ನಗರ ಪ್ರದೇಶದಲ್ಲಿ ಪ್ರತಿ ಲೀಟರ್‌ಗೆ 12.2 ಕೀ.ಮೀ. ಹಾಗೆಯೇ ಹೆದ್ದಾರಿಗಳಲ್ಲಿ ಲೀಟರ್‌ಗೆ 14 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇನ್ನುಳಿದಂತೆ ಮ್ಯಾನುವಲ್ ಫೋರ್ ವೀಲ್ ಡ್ರೈವ್ ಲಭ್ಯವಿರುತ್ತದೆ.

04. ವಿಶೇಷತೆ

04. ವಿಶೇಷತೆ

ಇದರ ಶಕ್ತಿಶಾಲಿ ಫ್ರಂಟ್ ಬಂಪರ್, ಎಂ2ಡಿಐಸಿಆರ್ ಎಂಜಿನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಕರ್ಷಕ ಇಂಟಿರಿಯರ್ ಹಾಗೂ ರಿಯರ್ ವಾಶ್ ಆಂಡ್ ವೈಪ್ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

03 ವಿನ್ಯಾಸ

03 ವಿನ್ಯಾಸ

ಹೊರಮೈ

ಹೊಸತಾದ ಹಾಕ್ ಐ ಹೆಡ್‌ಲ್ಯಾಂಪ್, ಆಕ್ರಮಣಕಾರಿ ನೋಟ, ಕ್ಲಾಸಿಕ್ ಫ್ರಂಟ್ ಗ್ರಿಲ್, ಶಕ್ತಿಶಾಲಿ ಮಸಲ್ ಬಂಪರ್, ಆಕರ್ಷಕ ಗೇರ್ ಶಿಫ್ಟ್, ಸಮಕಾಲೀನ ದೇಹ ವಿನ್ಯಾಸ, ಔಟ್‌ಸೈಡ್ ರಿಯರ್ ವ್ಯೂ ಮಿರರ್, ಸ್ಪೇರ್ ವೀಲ್ ಕವರ್

ಒಳಮೈ

ಸುಧಾರಿತ ಡಿಜಿಟಲ್ ಡಿಸ್‌ಪ್ಲೇ, ವಾಯ್ಸ್ ಮೆಸೇಜ್ ಸಿಸ್ಟಂ, ಚಾಲಕ ಮಾಹಿತಿ ವ್ಯವಸ್ಥೆ, ಮೈಕ್ರೋ ಹೈಬ್ರಿಡ್ ಸಿಸ್ಟಂ, ಎಂಜಿನ್ ಇಂಮೊಬಿಲೈಜರ್

 02. ಅನುಕೂಲ, ಆರಾಮದಾಯಕ

02. ಅನುಕೂಲ, ಆರಾಮದಾಯಕ

ಪವರ್ ಸ್ಟೀರಿಂಗ್, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ವಾಯ್ಸ್ ಮೆಸೇಜ್ ವ್ಯವಸ್ಥೆ, ಕೀಲೆಸ್ ಎಂಟ್ರಿ, ರಿಮೋಟ್ ಫ್ಯೂಯಲ್ ಲಿಡ್ ಓಪನರ್, ರಿಯರ್ ವಾಶ್ ಆಂಡ್ ವೈಪ್

ಆರಾಮದಾಯಕ

ಹೆಡ್ ರೆಸ್ಟ್, ಹಿಂದುಗಡೆ ಪ್ರಯಾಣಿಕರಿಗೂ ಸೆಂಟರ್ ಆರ್ಮ್ ರೆಸ್ಟ್ ವಿಶಾಲವಾದ ಕ್ಯಾಬಿನ್, ಎಸಿ

01. ಬೊಲೆರೊ ಮಾದರಿಗಳು, ಸುರಕ್ಷತೆ

01. ಬೊಲೆರೊ ಮಾದರಿಗಳು, ಸುರಕ್ಷತೆ

ವೆರಿಯಂಟ್

ಝಡ್‌ಎಲ್‌ಎಕ್ಸ್, ಎಸ್‌ಎಲ್‌ಎಕ್ಸ್, ಎಸ್‌ಎಲ್‌ಇ, ಇಎಕ್ಸ್, ಡಿಐ, ಪ್ಲಸ್, ಪ್ಲಸ್ ಬಿಎಸ್4, ಅಂಬ್ಯುಲನ್ಸ್, ಬೊಲೆರೊ ಸ್ಪೆಷಲ್ ಎಡಿಷನ್

ಸುರಕ್ಷತೆ

ರಿಯರ್ ವಾಶ್ ಆಂಡ್ ವೈಪ್, ಚೈಲ್ಡ್ ಲಾಕ್, ನ್ಯೂ ಮಸಲರ್ ಬಂಪರ್, ಇಂಜಿನ್ ಇಂಮೊಬಿಲೈಜರ್, ಹೆಡ್‌ರೈಸ್ಟ್

ಬಣ್ಣಗಳು

ಜಾವಾ ಬ್ರೌನ್, ಟೊರೆಡೋರ್ ರೆಡ್, ಡೈಮಂಡ್ ವೈಟ್, ಫಿರಿ ಬ್ಲ್ಯಾಕ್, ರಾಕಿ ಬೀಜ್

ಎಂಜಿನ್

ಎಂಜಿನ್

2523 ಸಿಸಿ ಎಂ2ಡಿಐಸಿಆರ್ (m2DiCR),

ಎಂಜಿನ್ ಮ್ಯಾಕ್ಸಿಮಮ್ ಪವರ್ : 46.3 kW @ 3200rpm,

ಮ್ಯಾಕ್ಸಿಮಮ್ ಟಾರ್ಕ್: 195 NM @ 1400-2200RPM,

ಆಯಾಮ: ಉದ್ದ 4107 X ಅಗಲ 1745 X ಎತ್ತರ 1880 ವೀಲ್‌ಬೇಸ್ 2680,

ಕ್ಲಚ್ - ಹೈಡ್ರಾಲಿಕ್

ಬ್ರೇಕ್ - ಫ್ರಂಟ್ - ಡಿಸ್ಕ್, ರಿಯರ್ - ಡ್ರಮ್,

ಗ್ರೌಂಡ್ ಕ್ಲಿಯರನ್ಸ್ - 180 ಎಂಎಂ,

ಗೇರ್ ಬಾಕ್ಸ್ - ಎನ್‌ಜಿಟಿ 520, 5 ಸ್ಪೀಡ್

ದರ ಮಾಹಿತಿ (ಬೆಂಗಳೂರು ಎಕ್ಸ್ ಶೋ ರೂಂ)

ದರ ಮಾಹಿತಿ (ಬೆಂಗಳೂರು ಎಕ್ಸ್ ಶೋ ರೂಂ)

ಅಂದ ಹಾಗೆ ಮಹೀಂದ್ರ ಬುಲೆರೊ ಅಂಬುಲೆನ್ಸ್ ನಾನ್ ಎಸಿ ಬಿಎಸ್‌3 ವೆರಿಯಂಟ್ ದರ 5.44 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ಝಡ್‌ಎಲ್‌ಎಕ್ಸ್ ಬಿಎಸ್4 ವೆರಿಯಂಟ್‌ 7.54 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಆನ್ ರೋಡ್ ಬೆಲೆ ತಿಳಿಯಿರಿ

7.5 ಲಕ್ಷ ಮಾರಾಟ

7.5 ಲಕ್ಷ ಮಾರಾಟ

ಆಫ್ ರೋಡ್ ಚಾಲನಾ ಸಾಮರ್ಥ್ಯ ಹೊಂದಿರುವ ಬೊಲೆರೊ ಇದುವರೆಗೆ ಒಟ್ಟು 7.5 ಲಕ್ಷ ಯುನಿಟ್ ಗಳ ಮಾರಾಟ ಸಂಖ್ಯೆಯನ್ನು ದಾಟಿದ್ದು, ನಿಕಟ ಭವಿಷ್ಯದಲ್ಲೇ ಒಂದು ಮಿಲಿಯನ್ ಮೈಲುಗಲ್ಲನ್ನು ತಲುಪುವುದು ಖಚಿತವೆನಿಸಿದೆ.

ಸೆಲೆಬ್ರಿಟಿಗಳ ನೆಚ್ಚಿನ ಕಾರು

ಸೆಲೆಬ್ರಿಟಿಗಳ ನೆಚ್ಚಿನ ಕಾರು

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್, ಸ್ಟೈಲಿಷ್ ರಾಬಿನ್ ಉತ್ತಪ್ಪ ಹಾಗೂ ಲಂಡನ್ ಒಲಿಂಪಿಕ್ ಕಂಚಿನ ಹಾಗೂ ಐದು ಬಾರಿಯ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಮುಂತಾದ ತಾರೆಗಳು ಬೊಲೆರೊ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

Most Read Articles

Kannada
English summary
9 Interesting facts about India’s best-selling SUV Mahindra Bolero
Story first published: Tuesday, April 14, 2015, 12:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X