ನಿಸ್ಸಾನ್ ಮೈಕ್ರಾ ಎಕ್ಸ್-ಶಿಫ್ಟ್ ಬಿಡುಗಡೆ: ಮೊದಲ ಚಾಲನೆ, ಬೆಲೆ, ವೈಶಿಷ್ಟ್ಯಗಳು

By Nagaraja

ಇತ್ತೀಚೆಗಷ್ಟೇ 2015 ನಿಸ್ಸಾನ್ ಜಿಟಿ ಅಕಾಡೆಮಿ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದ್ದ ನೂತನ ಮೈಕ್ರಾ ಸೀಮಿತ ಆವೃತ್ತಿ ಭರ್ಜರಿ ಬಿಡುಗಡೆ ಕಂಡಿದೆ. ನಿಸ್ಸಾನ್ ಮೈಕ್ರಾ ಸಣ್ಣ ಕಾರಿನ ನೂತನ ವೆರಿಯಂಟ್ ಎಕ್ಸ್-ಶಿಫ್ಟ್ ಎಂದೆನಿಸಿಕೊಳ್ಳಲಿದೆ. ಭಾರತಕ್ಕೆ ಪ್ರವೇಶಿಸಿದ ಐದನೇ ವರ್ಷಾಚರಣೆಯ ಭಾಗವಾಗಿ ನೂತನ ಮೈಕ್ರಾ ಆವೃತ್ತಿಯು ದೇಶಕ್ಕೆ ಪರಿಚಯವಾಗಿದೆ.

ಈ ಸಂದರ್ಭದಲ್ಲಿ ನೂತನ ಮೈಕ್ರಾ ಎಕ್ಸ್ ಶಿಫ್ಟ್ ಮೊದಲ ಚಾಲನೆ ಮಾಡುವ ಅವಕಾಶವನ್ನು ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಪಡೆದುಕೊಂಡಿತ್ತು. 1.2 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ಮೈಕ್ರಾ, ಹೊಸ ತಲೆಮಾರಿನ ಸಿವಿಟಿ ಗೇರ್ ಬಾಕ್ಸ್ ಸಹ ಪಡೆದುಕೊಂಡಿದೆ. ಬೆಲೆ ಇತ್ಯಾದಿ ಪ್ರಮುಖ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಫೋಟೊ ಸ್ಲೈಡ್ ನತ್ತ ಭೇಟಿ ಕೊಡಿರಿ...

ಬೆಲೆ ಮಾಹಿತಿ

ಬೆಲೆ ಮಾಹಿತಿ

ಎಕ್ಸ್ ಶೋ ರೂಂ ದೆಹಲಿ - 6,39,990 ರು.

ಮೊದಲ ಚಾಲನಾ ಪರೀಕ್ಷೆ

ಮೊದಲ ಚಾಲನಾ ಪರೀಕ್ಷೆ

ಚೆನ್ನೈ ಶ್ರೀಪೆರುಂಬುದೂರ್ ಎಂಎಂಎಸ್‌ಸಿಐ ರೇಸ್ ಟ್ರ್ಯಾಕ್ ನಲ್ಲಿ ಮೊದಲ ಚಾಲನಾ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದು ಅತ್ಯುತ್ತಮ ಚಾಲನೆಯ ಜೊತೆಗೆ ಉತ್ತಮ ಇಂಧನ ಕ್ಷಮತೆಯನ್ನು ಕಾಯ್ದುಕೊಂಡಿದೆ.

ನಿಸ್ಸಾನ್ ಮೈಕ್ರಾ ಎಕ್ಸ್-ಶಿಫ್ಟ್ ಬಿಡುಗಡೆ: ಮೊದಲ ಚಾಲನೆ, ಬೆಲೆ, ವೈಶಿಷ್ಟ್ಯಗಳು

ನಗರದ ಪ್ರದೇಶದವರಿಗೆ ನಿಸ್ಸಾನ್ ಮೈಕ್ರಾ ಅತ್ಯುತ್ತಮ ಆಯ್ಕೆಯಾಗಿರಲಿದ್ದು, ಉತ್ತಮ ವೇಗವರ್ಧನೆಯನ್ನು ಕಾಪಾಡಿಕೊಂಡಿದೆ. ತಿರುವುಗಳಲ್ಲಿ ಇದರ ನಿರ್ವಹಣೆ ಗರಿಷ್ಠ ಮಟ್ಟದಲ್ಲಿದೆ. ಅಲ್ಲದೆ ಹ್ಯಾಂಡ್ಲಿಂಗ್, ಬ್ರೇಕ್ ಪರಿಣಾಮಕಾರಿಯೆನಿಸಿದ್ದು, ಚೆನ್ನೈ ರೇಸ್ ಟ್ರ್ಯಾಕ್ ನಲ್ಲಿ ಗಂಟೆಗೆ ಗರಿಷ್ಠ 125 ಕೀ.ಮೀ. ವೇಗದಲ್ಲಿ ಸಂಚರಿಸುವಲ್ಲಿ ಯಶಸ್ವಿಯಾಗಿದ್ದೇವೆ.

ನಿಸ್ಸಾನ್ ಮೈಕ್ರಾ ಎಕ್ಸ್-ಶಿಫ್ಟ್ ಬಿಡುಗಡೆ: ಮೊದಲ ಚಾಲನೆ, ಬೆಲೆ, ವೈಶಿಷ್ಟ್ಯಗಳು

ಸಿವಿಟಿ ಗೇರ್ ಬಾಕ್ಸ್ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಲಿದೆ. ಇದು ಅತ್ಯುತ್ತಮ ಚಾಲನಾ ಸಾಮರ್ಥ್ಯದ ಜೊತೆಗೆ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ರಿವರ್ಸ್ ಪಾರ್ಕ್ ಅಸಿಸ್ಟ್,
  • ಎಕ್ಸಾಸ್ಟ್ ಫಿನಿಷರ್,
  • ಸಿಲ್ವರ್ ಫಿನಿಷರ್,
  • ಡೋರ್ ಗ್ರಾಫಿಕ್ಸ್,
  • ರೂಫ್ ವ್ರಾಪ್,
  • ಫ್ಲೋರ್ ಮ್ಯಾಟ್ಸ್,
  • ಎಲ್ಇಡಿ ಸ್ಕಫ್ ಪ್ಲೇಟ್,
  • ಎಬಿಎಸ್,
  • ಪಿಯಾನೊ ಬ್ಲ್ಯಾಕ್ ಡಿಟೈಲಿಂಗ್ ಒಳಮೈ
  • ನಿಸ್ಸಾನ್ ಮೈಕ್ರಾ ಎಕ್ಸ್-ಶಿಫ್ಟ್ ಬಿಡುಗಡೆ: ಮೊದಲ ಚಾಲನೆ, ಬೆಲೆ, ವೈಶಿಷ್ಟ್ಯಗಳು

    ಇನ್ನು ಸಂಸ್ಥೆಯ ಪ್ರಕಾರ ನೂತನ ಎಕ್ಸ್ ಶಿಫ್ಟ್ ಮೈಕ್ರಾ ಸಿವಿಟಿ ಹಾಗೂ ಮ್ಯಾನುವಲ್ ಮಾದರಿಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 19.34 ಹಾಗೂ 18.44 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

Most Read Articles

Kannada
English summary
The new Nissan Micra X-Shift was launched in the country today, at a price of INR lakh. We were invited by Nissan to test drive the new CVT variant on the MMSCI circuit in Chennai, during the Nissan GT Academy event. The X-Shift comes with new features and an improved version of the CVT transmission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X