ದುಬೈ ಮರುಭೂಮಿಗೆ ನಿಸ್ಸಾನ್ ಪೆಟ್ರೋಲ್ ಡೆಸರ್ಟ್ ಎಡಿಷನ್ ಎಂಟ್ರಿ

By Nagaraja

ಜಪಾನ್ ಮೂಲದ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, 2015 ದುಬೈ ಮೋಟಾರು ಶೋದಲ್ಲಿ ಪೆಟ್ರೋಲ್ ಡೆಸರ್ಟ್ ಎಡಿಷನ್ ಪರಿಚಯಪಡಿಸಿದೆ. ಈ ಮೂಲಕ ನಿಸ್ಸಾನ್ ಸಂಸ್ಥೆಯು ಇಲ್ಲಿನ ಮರುಭೂಮಿಯ ಮಾಯಾನಗರಿ ಮೇಲಿನ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

Also Read: ಭವಿಷ್ಯದ ಕ್ರಾಸೋವರ್: ನಿಸ್ಸಾನ್ ಗ್ರಿಪ್ಜ್ ಅನಾವರಣ

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಸ್ಸಾನ್ ಮಧ್ಯ ಪೂರ್ವ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಚೆರ್ಫಾನ್, "ನೂತನ ನಿಸ್ಸಾನ್ ಪೆಟ್ರೋಲ್ ಡೆಸರ್ಟ್ ಎಡಿಷನ್ ತತ್ ಕ್ಷಣದಿಂದಲೇ ಮಾರಾಟಕ್ಕೆ ಲಭ್ಯವಾಗಲಿದೆ" ಎಂದಿದ್ದಾರೆ.

ದುಬೈ ಮರುಭೂಮಿಗೆ ನಿಸ್ಸಾನ್ ಪೆಟ್ರೋಲ್ ಡೆಸರ್ಟ್ ಎಡಿಷನ್ ಎಂಟ್ರಿ

ದುಬೈನಲ್ಲಿ ನಿಸ್ಸಾನ್ ಪೆಟ್ರೋಲ್ 69,430 ಅಮೆರಿಕನ್ ಡಾಲರುಗಳಷ್ಟು ಬೆಲೆ ಬಾಳುತ್ತದೆ. ಆದರೆ ದುಡ್ಡು ಸಂಪಾದಿಸುವುದು ನಮ್ಮ ಇರಾದೆಯಲ್ಲ ಎಂದು ನಿಸ್ಸಾನ್ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ.

ದುಬೈ ಮರುಭೂಮಿಗೆ ನಿಸ್ಸಾನ್ ಪೆಟ್ರೋಲ್ ಡೆಸರ್ಟ್ ಎಡಿಷನ್ ಎಂಟ್ರಿ

ವಿಶ್ವದ ಅತ್ಯಂತ ಕಠಿಣ ಹಾಗೂ ಒರಟಿನಿಂದ ಕೂಡಿರುವ ಮರುಭೂಮಿಯ ಸವಾಲನ್ನು ಎದುರಿಸಲು ಪೆಟ್ರೋಲ್ ಸರ್ವ ರೀತಿಯಲ್ಲೂ ಸಜ್ಜಾಗಿ ನಿಂತಿದೆ.

ದುಬೈ ಮರುಭೂಮಿಗೆ ನಿಸ್ಸಾನ್ ಪೆಟ್ರೋಲ್ ಡೆಸರ್ಟ್ ಎಡಿಷನ್ ಎಂಟ್ರಿ

ಮಧ್ಯ ಪೂರ್ವ ಮೋಟಾರು ಕ್ರೀಡೆಯ ಹೆಸರಾಂತ ವ್ಯಕ್ತಿ ಡಾ. ಮೊಹಮ್ಮದ್ ಬೆನ್ ಸುಲಯಾಮ್ ಅವರ ಸಹಕಾರದೊಂದಿದೆ ಪೆಟ್ರೋಲ್ ಡೆಸರ್ಟ್ ಎಡಿಷನ್ ಅಭಿವೃದ್ಧಿಪಡಿಸಲಾಗಿದೆ.

ದುಬೈ ಮರುಭೂಮಿಗೆ ನಿಸ್ಸಾನ್ ಪೆಟ್ರೋಲ್ ಡೆಸರ್ಟ್ ಎಡಿಷನ್ ಎಂಟ್ರಿ

ನಿಸ್ಸಾನ್ ಪೆಟ್ರೋಲ್ ಎಲ್‌ಇ ತಳಹದಿಯಲ್ಲಿ ನಿರ್ಮಾಣವಾಗಿರುವ ಡೆಸರ್ಟ್ ಎಡಿಷನ್ 5.6 ಲೀಟರ್ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ದುಬೈ ಮರುಭೂಮಿಗೆ ನಿಸ್ಸಾನ್ ಪೆಟ್ರೋಲ್ ಡೆಸರ್ಟ್ ಎಡಿಷನ್ ಎಂಟ್ರಿ

ಪ್ರಸ್ತುತ ಎಂಜಿನ್ 560 ಎನ್‌ಎಂ ತಿರುಗುಬಲದಲ್ಲಿ 400 ಅಶ್ವಶಕ್ತಿ ಉತ್ಪಾದಿಸಲಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಇರಲಿದೆ.

ದುಬೈ ಮರುಭೂಮಿಗೆ ನಿಸ್ಸಾನ್ ಪೆಟ್ರೋಲ್ ಡೆಸರ್ಟ್ ಎಡಿಷನ್ ಎಂಟ್ರಿ

ನಿಸ್ಸಾನ್ ಹಾಗೂ ಸುಲಯಾಮ್ ಅವರ ಸಾರಥ್ಯದಲ್ಲಿ ಹಲವು ಹಂತದ ಪರೀಕ್ಷೆಗಳನ್ನು ನಡೆಸಿದ ಬಳಿಕ ಇದರ ಸಸ್ಪೆನ್ಷನ್ ಅಭಿವೃದ್ಧಿಪಡಿಸಲಾಗಿದೆ. ಯಾಕೆಂದರೆ ಮರುಭೂಮಿಯಲ್ಲಿ ಇದರ ನಿರ್ವಹಣೆಯು ಅತಿ ಮುಖ್ಯವೆನಿಸುತ್ತದೆ.

ದುಬೈ ಮರುಭೂಮಿಗೆ ನಿಸ್ಸಾನ್ ಪೆಟ್ರೋಲ್ ಡೆಸರ್ಟ್ ಎಡಿಷನ್ ಎಂಟ್ರಿ

ನೂತನ ಪೆಟ್ರೋಲ್ ಕಾರಿನಲ್ಲಿ "ಬೀಟ್ ಲಾಕ್" ಎಂಬ ಹೆಚ್ಚುವರಿ ಆಫ್ ರೋಡ್ ವೈಶಿಷ್ಟ್ಯವನ್ನು ಕೊಡಲಾಗಿದೆ. ಇದು ಅತಿ ಕಡಿಮೆ ಒತ್ತಡದಲ್ಲೂ ಚಕ್ರವು ಚಲಿಸುವಂತೆ ಮಾಡಲಿದೆ. ಅಲ್ಲದೆ ಒಮ್ಮೆ ರಸ್ತೆಗೆ ಪ್ರವೇಶಿಸಿದ ಬಳಿಕ ಹಿಂದಿನಂತೆ ಕೆಲಸ ಕೆಲಸ ಮುಂದುವರಿಸಲಿದೆ.

ದುಬೈ ಮರುಭೂಮಿಗೆ ನಿಸ್ಸಾನ್ ಪೆಟ್ರೋಲ್ ಡೆಸರ್ಟ್ ಎಡಿಷನ್ ಎಂಟ್ರಿ

ಇನ್ನುಳಿದಂತೆ ಹೊಸ ಡೆಸರ್ಟ್ ಎಡಿಷನ್ ಕಾರಿನಲ್ಲಿ ನೇವಿಗೇಷನ್ ಸಿಸ್ಟಂ, ಫಾರ್ವರ್ಡ್ ಫೇಸಿಂಗ್, ರಿವರ್ಸಿಂಗ್ ಕ್ಯಾಮೆರಾ, ಬ್ಲೂಟೂತ್, ಇನ್ಮೋಟೈನ್ಮೆಂಟ್ ಸಿಸ್ಟಂ ಹಾಗೂ ಬ್ಲೂಟೂತ್ ಹ್ಯಾಂಡ್ಸ್ ಫ್ರಿ ಇತ್ಯಾದಿ ಸೌಲಭ್ಯಗಳಿರಲಿದೆ.

Most Read Articles

Kannada
English summary
Nissan Patrol Desert Editon Makes Global Debut At Dubai Motor Show
Story first published: Thursday, November 12, 2015, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X