ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

By Nagaraja

ಹೌದು, ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದಿರುವ ದೇಶದ ಮೊದಲ ಮಾರುತಿ 800 ಕಾರು ತುಕ್ಕು ಹಿಡಿಯುತ್ತಿದೆ. 1983ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ ದೇಶದ ಜನಸಾಮಾನ್ಯ ಕಾರು ಮಾರುತಿ 800 ಈಗ ಆಶ್ರಯದಾತರಿಲ್ಲದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಕೋ ಎನ್ನುತ್ತಿದೆ.

ಮೂರು ದಶಕಗಳಷ್ಟು ಕಾಲ ದೇಶದ ಮಧ್ಯಮ ವರ್ಗದ ಕಾರೆನಿಸಿಕೊಂಡಿದ್ದ ಮಾರುತಿ 800 ಕಾರಿನ ಮೊದಲ ಮಾಲಿಕರನ್ನು ಲಕ್ಕಿ ಡ್ರಾ ಮೂಲಕ ಆರಿಸಲಾಗಿತ್ತು. ಇದರಂತೆ ಸರ್ದಾರ್ ಹರ್ಪಾಲ್ ಸಿಂಗ್ ಎಂಬವರಿಗೆ ಮೊದಲ ಮಾಲಿಕರಾಗುವ ಅದೃಷ್ಟ ಒಲಿದು ಬಂದಿತ್ತು. ಆದರೆ 2010ರಲ್ಲಿ ಹರ್ಪಾಲ್ ಸಿಂಗ್ ಇಹಲೋಕ ತ್ಯಜಿಸಿದ ಬಳಿಕ ಮಾರುತಿ 800 ಕಾರಿಗೆ ರಕ್ಷಣೆ ಇಲ್ಲದಂತಾಗಿದೆ.

ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

ದಿವಂಗತ ಹರ್ಪಾಲ್ ಸಿಂಗ್ ಅವರಿಗೆ ಇಬ್ಬರು ಹೆಣ್ಮಕ್ಕಳು. ಇಬ್ಬರ ವಿವಾಹಿತರಾಗಿದ್ದು, ತಮ್ಮ ತಮ್ಮ ಫ್ಯಾಮಿಲಿ ಜೊತೆ ಜೀವನ ಸಾಗಿಸುತ್ತಿದ್ದಾರೆ. ಇನ್ನು ಹರ್ಪಾಲ್ ಸಿಂಗ್ ಪತ್ನಿ 2012ರಲ್ಲೇ ಮೃತಪಟ್ಟಿದ್ದರು.

ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ದಿವ್ಯ ಹಸ್ತಗಳಿಂದ ಮೊದಲ ಮಾರುತಿ 800 ಕೀಲಿ ಪಡೆದಿದ್ದ ಹರ್ಪಾಲ್ ಸಿಂಗ್ ತಮ್ಮ ಕುಟುಂಬದ ಸದಸ್ಯರಂತೆ ಮಾರುತಿ ಕಾರನ್ನು ಲಾಲನೆ ಪಾಲನೆ ಮಾಡಿದ್ದರು.

ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

ಪುತ್ರಿ ಗೋವಿಂಧರ್ ಪಾಲ್ ಕೌರ್ ಹೇಳುವ ಪ್ರಕಾರ, ತಂದೆಯ ಮರಣಾಂತರ ಕಾರಿನ ನಿರ್ವಹಣೆ ಕಷ್ಟವೆನಿಸಿದೆ. ಇದರಿಂದಾಗಿ ಪಾಳು ಬಿದ್ದಿರುವುದಾಗಿ ತಿಳಿಸಿದ್ದಾರೆ.

ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

ಈ ಬಗ್ಗೆ ತಮ್ಮ ವ್ಯಥೆ ತೋಡಿಕೊಂಡಿರುವ ಹರ್ಪಾಲ್ ಸಿಂಗ್ ಅಳಿಯ ತೆಜಿಂಧರ್ ಅಹ್ಲುವಾಲಿಯಾ, ದೇಶದ ಮೊದಲ ಮಾರುತಿ 800 ಕಾರಿನ ರಕ್ಷಣೆಗೆ ಮಾರುತಿ ಸುಜುಕಿ ಮುಂದೆ ಬರಬೇಕಾಗಿ ವಿನಂತಿಸಿದ್ದಾರೆ.

ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

ನಾವು ಯಾವುದೇ ರೀತಿ ಹಣಕಾಸು ನೆರವನ್ನು ಯಾಚಿಸುತ್ತಿಲ್ಲ. ಬದಲಾಗಿ ಐಕಾನಿಕ್ ಮಾರುತಿ 800 ಕಾರನ್ನು ಸಂಗ್ರಹಾಲಯದಲ್ಲಿರಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

ದೇಶದ ಮಧ್ಯಮ ವರ್ಗದ ಕಾರು ಎಂದು ಗುರುತಿಸಿಕೊಂಡಿದ್ದ ಮಾರುತಿ 800 ಅಂದಿನ ಅತ್ಯುತ್ತಮ ಮಾಡೆಲ್ ಗಳಾದ ಅಂಬಾಸಿಡರ್ ಹಾಗೂ ಫಿಯೆಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಹೊರಬಂದಿತ್ತು.

ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

ಸಾಮಾನ್ಯ ಜನರಿಗೆ ಕೈಗೆಟುಕುವ ದರಗಳಲ್ಲಿ ಕಾರೊಂದನ್ನು ತುಲುಪಿಸುವುದು ಅಂದಿನ ಪ್ರಧಾನಿ ಇಂಧಿರಾ ಗಾಂಧಿ ಇರಾದೆಯಾಗಿತ್ತು. ಇದರಂತೆ ಜಪಾನ್ ಮೂಲದ ಸುಜುಕಿ ಜೊತೆ ಕೈಜೋಡಿಸಿಕೊಂಡಿದ್ದ ಮಾರುತಿ ಅಗ್ಗದ ಕಾರನ್ನು ಬಿಡುಗಡೆಗೊಳಿಸಲಾಗಿತ್ತು.

ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

ಇಷ್ಟೆಲ್ಲ ಆದರೂ ಕಂಪನಿಯ ಮಧ್ಯ ಪ್ರವೇಶವನ್ನು ಬಯಸುವುದಕ್ಕಿಂತ ಮೊದಲು ಕನಿಷ್ಠ ಪಕ್ಷ ತುಕ್ಕು ಹಿಡಿಯುತ್ತಿರುವ ಮಾರುತಿ 800 ಕಾರನ್ನು ರಕ್ಷಿಸುವ ಪ್ರಾಮಾಣಿಕ ಪ್ರಯತ್ನವನ್ನು ತೆಜಿಂಧರ್ ಮಾಡಬಹುದಿತ್ತು ಎಂಬುದು ನಮ್ಮ ಅಭಿಮತವಾಗಿದೆ.

ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

ತೆಜಿಂಧರ್ ಮಾತಿನಲ್ಲೇ ಹೇಳುವ ಪ್ರಕಾರ ತಮ್ಮ ಪಾಲಿಗೆ ವರದಾನವಾಗಿರುವ ಮಾರುತಿ 800 ಓರ್ವ ಕುಟುಂಬ ಸದಸ್ಯನ ರೀತಿಯಲ್ಲಿ ನೋಡಿಕೊಂಡಿದ್ದಾರಂತೆ. ಹಾಗಿದ್ದರೆ ಹಾಳು ಬಿದ್ದಿರುವ ಕಾರಿಗೆ ಕನಿಷ್ಠ ಪಕ್ಷ ಒಂದು ಕವರ್ ಕೂಡಾ ಹಾಕಬಹುದಿತ್ತಲ್ಲವೇ? ಅಥವಾ ನಿರಂತರ ಅಂತರಾಳದಲ್ಲಿ ಶುಚಿಯಾಗಿಡಬಹುದಿತ್ತಲ್ಲವೇ? ಎಂಬ ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಇಲ್ಲದಂತಾಗಿದೆ.

ಹೇಳುವವರು ಕೇಳುವವರಿಲ್ಲದೆ ಹಾಳು ಬಿದ್ದ ಮೊದಲ ಮಾರುತಿ 800

ಒಟ್ಟಿನಲ್ಲಿ ಮಾರುತಿ ಸಂಸ್ಥೆಯಾದರೂ ಈ ನಿಟ್ಟಿನಲ್ಲಿ ಮುಂದೆ ಬಂದು ಉಚಿತ ಕ್ರಮ ಕೈಗೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ.

Most Read Articles

Kannada
English summary
No takers for India's first maruti 800 Car
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X