1238 ಕೋಟಿಗೆ ಟ್ಯಾಕ್ಸಿ ಫಾರ್ ಶೂರ್ ಖರೀದಿಸಿದ ಓಲಾ

By Nagaraja

ದೇಶದ ಅಗ್ರಗಣ್ಯ ಟ್ಯಾಕ್ಸಿ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ಓಲಾ ಕ್ಯಾಬ್ಸ್ ತನ್ನ ನಿಕಟ ಪ್ರತಿಸ್ಪರ್ಧಿ ಟ್ಯಾಕ್ಸಿ ಫಾರ್ ಶೂರ್ ಅನ್ನು ಬರೋಬ್ಬರಿ 1238 ಕೋಟಿ ರು.ಗಳನ್ನು (200 ಮಿಲಿಯನ್ ಅಮೆರಿಕನ್ ಡಾಲರ್) ನೀಡಿ ಖರೀದಿಸಿದೆ.

ಇತ್ತೀಚೆಗಿನ ಕೆಲವು ಸಮಯಗಳಿಂದ ಕಡಿಮೆ ದರದಲ್ಲಿ ಸೇವೆ ನೀಡುತ್ತಿರುವ ಟ್ಯಾಕ್ಸಿ ಫಾರ್ ಶೂರ್ ಹೆಚ್ಚು ಸುದ್ದಿ ಮಾಡುತ್ತಿದೆ. ನ್ಯಾನೋದಂತಹ ಕಾರುಗಳನ್ನು ಹೊಂದಿರುವ ಟ್ಯಾಕ್ಸಿ ಫಾರ್ ಶೂರ್ ಸಾಮಾನ್ಯ ಆಟೋ ರಿಕ್ಷಾಗಿಂತಲೂ ಕಡಿಮೆ ದರದಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

taxiforsure

ಈಗ ಎಚ್ಚೆತ್ತುಕೊಂಡಿರುವ ಓಲಾ ಕ್ಯಾಬ್ಸ್, ಭವಿಷ್ಯದಲ್ಲಿ ಎದುರಾಗುವ ಸಂಭವನೀಯ ಅಪಾಯವನ್ನು ಅರಿತುಕೊಂಡು ಪ್ರತಿಸ್ಪರ್ಧಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ನಿರ್ಧರಿಸಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಓಲಾ ಹಾಗೂ ಟ್ಯಾಕ್ಸಿ ಫಾರ್ ಶೂರ್ ಕ್ಯಾಬ್‌ಗಳು ಈಗಿನ ಹಾಗೆಯೇ ಮುಂದುವರಿಯಲಿದೆ. ಟ್ಯಾಕ್ಸಿ ಫಾರ್ ಶೂರ್‌ನಲ್ಲಿ ಕೆಲಸ ಮಾಡುತ್ತಿರುವ 1,7000 ಸಿಬ್ಬಂದಿಗಳೂ ಕೆಲಸದಲ್ಲಿ ಮುಂದುವರಿಯಲಿದ್ದಾರೆ. ಸಂಸ್ಥೆಯು ದೇಶದ 47 ನಗರಗಳಲ್ಲಾಗಿ 15 ಸಾವಿರಗಳಷ್ಟು ವಾಹನಗಳನ್ನು ಹೊಂದಿದೆ.

ದೇಶದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯವನ್ನು ಇನ್ನಷ್ಟು ಬಲಪಡಿಸುವ ಮೂಲಕ ಉತ್ತಮ ಸೇವೆ ಒದಗಿಸುವ ಇರಾದೆಯನ್ನು ಓಲಾ ಕ್ಯಾಬ್ಸ್ ಹೊಂದಿದೆ.

Most Read Articles

Kannada
English summary
TaxiForSure had recently announced it moving into a new workspace. Now the fleet taxi service provider is in the news once again, as it has been purchased by Ola. The deal has been struck for USD 200 million and employees will be allowed to keep their jobs.
Story first published: Tuesday, March 3, 2015, 14:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X