ಚಾಲಕ ನೋಡಿದ ಕಡೆ ಬೆಳಕು ಚೆಲ್ಲುವ ಹೆಡ್‌ಲೈಟ್

By Nagaraja

ನೀವು ಹಲವು ವಿಧದ ತಂತ್ರಜ್ಞಾನಗಳನ್ನು ನೋಡಿರಬಹುದು. ಈಗ ಜನರಲ್ ಮೋಟಾರ್ಸ್ ಅಂಗಸಂಸ್ಥೆಯಾಗಿರುವ ಜರ್ಮನಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಓಪೆಲ್, ವಿನೂತನ ಹೆಡ್ ಲೈಟ್ ತಂತ್ರಗಾರಿಕೆಯನ್ನು ಅವಿಷ್ಕರಿಸಿದೆ.

ಅಡಾಪ್ಟಿವ್ ಹೆಡ್ ಲೈಟ್ ತಂತ್ರಜ್ಞಾನದ ಮೂಲಕ ತನ್ನ ಗುರಿ ಮುಟ್ಟುವುದು ಓಪೆಲ್ ಇರಾದೆಯಾಗಿದೆ. ಸಂಸ್ಥೆಯ ಪ್ರಕಾರ ನೂತನ ತಂತ್ರಗಾರಿಕೆಯು ಚಾಲನೆ ಮಾಡುವಾಗ ಚಾಲಕ ವೀಕ್ಷಣೆಗೆ ಅನುಗುಣವಾಗಿ ಹೆಡ್ ಲೈಟ್ ತನ್ನ ಬೆಳಕನ್ನು ಆ ನಿರ್ದಿಷ್ಟ ಕೇಂದ್ರಬಿಂದುವಿನತ್ತ ಚೆಲ್ಲಲಿದೆ.

opel adaptive control

ಈ ಮೂಲಕ ರಾತ್ರಿ ಪಯಣವನ್ನು ಹೆಚ್ಚು ಸುರಕ್ಷಿತವಾಗಿಸುವುದು ಓಪೆಲ್ ಗುರಿಯಾಗಿದೆ. ಇದಕ್ಕಾಗಿ ಈ ವ್ಯವಸ್ಥೆಯಲ್ಲಿ ಕ್ಯಾಮೆರಾ ಹಾಗೂ ಸೆನ್ಸಾರ್‌ಗಳನ್ನು ಬಳಕೆ ಮಾಡಲಾಗುವುದು. ಇದು ಸೆಕೆಂಡುಗೆ 50ಕ್ಕೂ ಹೆಚ್ಚು ಬಾರಿ ಚಾಲಕನ ಕಣ್ಣನ್ನು ಸ್ಕ್ಯಾನ್ ಮಾಡಲಿದೆ.

ಇವೆಲ್ಲದರ ಮೂಲಕ ಹೆಡ್ ಲೈಟ್ ಆಟೋಮ್ಯಾಟಿಕ್ ಆಗಿ ಚಾಲಕನ ಗುರಿಯತ್ತ ಬೆಳಕು ಚೆಲ್ಲಲಿದೆ. ಅಷ್ಟಕ್ಕೂ ಪ್ರಯೋಗಿಕವಾಗಿ ಇದು ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದು ಪ್ರಶ್ನೆಯ ವಿಷಯ.

opel adaptive headlight

ಒಟ್ಟಾರೆಯಾಗಿ ಓಪೆಲ್ ಅಡಾಪ್ಟಿವ್ ಹೆಡ್ ಲೈಟ್ ತಂತ್ರಜ್ಞಾನವು ಕೊನೆಯ ಹಂತದಲ್ಲಿದ್ದು ಮುಂದಿನ 18 ತಿಂಗಳಲ್ಲಿ ತನ್ನ ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲೈಟ್‌ನಲ್ಲಿ ಇದನ್ನು ಹೊರ ತರುವ ಭರವಸೆಯಿದೆ.
Most Read Articles

Kannada
English summary
Opel Developing Adaptive Headlights That Shine Where The Driver Looks
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X