ಮತ್ತೆ ದುಬಾರಿಯಾಯ್ತು ಪೆಟ್ರೋಲ್, ಡೀಸೆಲ್; ಕಾರಣ ಏನು?

By Nagaraja

ಕೇಂದ್ರ ಬಜೆಟ್ ಮಂಡಿಸಿರುವ ಬೆನ್ನಲ್ಲೇ ದೇಶದಲ್ಲಿ ಇಂಧನ ಬೆಲೆಗಳು ಮಗದೊಮ್ಮೆ ದುಬಾರಿಯಾಗಿದೆ. 2014 ಆಗಸ್ಟ್ ತಿಂಗಳ ಬಳಿಕ ಸತತವಾಗಿ 10 ಬಾರಿ ಬೆಲೆ ಇಳಿಕೆ ಕಂಡುಬಂದಿದ್ದರೆ ಕಳೆದ ಫೆಬ್ರವರಿ ತಿಂಗಳಲ್ಲಿ ಬ್ರೇಕ್ ಬಿದ್ದಿತ್ತು.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ನಿಧಾನವಾಗಿ ವರ್ಧಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಚುನಾವಣಾ ಫಲಿತಾಂಶದ ಬೆನ್ನಲ್ಲೇ 15 ದಿನಗಳ ಹಿಂದೆಯಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಗೊಳಿಸಿತ್ತು.

petrol

ಇದೀಗ ಫೆಬ್ರವರಿ 28 ಶನಿವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಮೂರು ರು.ಗಿಂತಲೂ ಹೆಚ್ಚು ಹೆಚ್ಚಳಗೊಳಿಸಲಾಗಿದೆ. ಹೊಸ ದರ ನೀತಿ ಈಗಾಗಲೇ ಜಾರಿಗೆ ಬಂದಿದೆ.

ಪೆಟ್ರೋಲ್ ಬೆಲೆಯಲ್ಲಿ 3.18 ರು. ಹಾಗೂ ಡೀಸೆಲ್ ಬೆಲೆಯನ್ನು 3.09 ರು.ಗಳಷ್ಟು ಹೆಚ್ಚಳಗೊಳಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

2014 ಆಗಸ್ಟ್ ತಿಂಗಳ ಬಳಿಕೆ ಪೆಟ್ರೋಲ್ ಬೆಲೆಯಲ್ಲಿ 10 ಹಂತಗಳಲ್ಲಾಗಿ ಒಟ್ಟು ರು. 17.11ರಷ್ಟು ಇಳಿಕೆಯಾಗಿತ್ತು. ಅದೇ ರೀತಿ 2014 ಅಕ್ಟೋಬರ್ ತಿಂಗಳಲ್ಲಿ ಡೀಸೆಲ್ ಬೆಲೆ ಅನಿಯಂತ್ರಣಗೊಳಿಸಿದ ಬಳಿಕ ಡೀಸೆಲ್ ಬೆಲೆಯಲ್ಲಿ ಆರು ಬಾರಿಯಾಗಿ 12.96 ರು.ಗಳಷ್ಟು ಇಳಿಕೆಯಾಗಿತ್ತು.

Most Read Articles

Kannada
English summary
In the past few months petrol and diesel prices have been steadily on a decline. On Saturday, 28th February, 2015 post the Union Budget announcement, it was declared that the fuel prices will be raised as well by midnight.
Story first published: Monday, March 2, 2015, 10:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X