ದೆಹಲಿ ಚುನಾವಣೆ ಮುಗಿದ ಬೆನ್ನಲ್ಲೇ ಇಂಧನ ಬೆಲೆ ಏರಿಕೆ ಶಾಕ್

By Nagaraja

ನವದೆಹಲಿ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕೇಂದ್ರ ಸರಕಾರವು ಇಂಧನ ಬೆಲೆ ಏರಿಕೆ ಚಾಟಿ ಬೀಸಿದೆ. ಇದರೊಂದಿಗೆ ಕಳೆದ 10 ಬಾರಿ ಸತತವಾಗಿ ಬೆಲೆ ಇಳಿಕೆಯ ಪ್ರವೃತ್ತಿಗೆ ಕೊನೆಗೂ ಬ್ರೇಕ್ ಬಿದ್ದಂತಾಗಿದೆ.

ಜಾಗತಿಕವಾಗಿ ಕಚ್ಚಾ ತೈಲ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಇಂಧನ ಬೆಲೆಗಳನ್ನು ಕಡಿತಗೊಳಿಸಲಾಗಿತ್ತು. ಆದರೆ ಈಗ ಕೇಂದ್ರ ಸರಕಾರವು ಸೋಮವಾರದಿಂದಲೇ ಜಾರಿಗೆ ಬರುವಂತೆಯೇ ಪೆಟ್ರೋಲ್ ಬೆಲೆಯಲ್ಲಿ 82 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು 61 ಪೈಸೆಗಳಷ್ಟು ಏರಿಕೆಗೊಳಿಸಿದೆ.

fuel price hike

ದೇಶದ್ಯಾಂತ ಬೆಲೆ ಏರಿಕೆ ಸಮಾನವಾಗಿದ್ದರೂ ಸ್ಥಳೀಯ ತೆರಿಗೆ ಅನ್ವಯದಲ್ಲಿ ಬೆಲೆಏರಿಕೆಯಲ್ಲಿ ವ್ಯತ್ಯಾಸ ಕಂಡುಬರಲಿದೆ ಎಂದು ತೈಲ ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ. ಪರಿಷ್ಕೃತ ದರದಂತೆ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 57.31 ಮತ್ತು ಡೀಸೆಲ್ 46.62 ರು.ಗಳಷ್ಟು ದುಬಾರಿಯೆನಿಸಲಿದೆ.

ದೆಹಲಿ ಚುನಾವಣಾ ಬೆನ್ನಲ್ಲೇ ಇಂತಹದೊಂದು ನೀತಿ ಅನುಸರಿಸಿರುವುದು ಜನ ಸಾಮಾನ್ಯರಿಗೆ ಶಾಕ್ ನೀಡಿದಂತಾಗಿದೆ. ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಂಡುಬಂದಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

ಇದಕ್ಕೂ ಮೊದಲು 2014 ಆಗಸ್ಟ್ ತಿಂಗಳ ಬಳಿಕ ಸತತ 10ನೇ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಈ ಮೂಲಕ 17.11 ರು.ಗಳಷ್ಟು ಬೆಲೆ ಇಳಿಕೆಯಾಗಿತ್ತು. ಇನ್ನೊಂದೆಡೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಡೀಸೆಲ್ ಬೆಲೆ ಅನಿಯಂತ್ರಣಗೊಳಿಸಿದ ಬಳಿಕ ಆರನೇ ಬಾರಿ ಇಳಿಕೆಯಾಗಿತ್ತು. ಇದರಿಂದಾಗಿ ಡೀಸೆಲ್ ಬೆಲೆಯಲ್ಲಿ 12.96 ರು.ಗಳಷ್ಟು ಕಡಿತವಾಗಿತ್ತು. ಇವೆಲ್ಲವೂ ಜಾಗತಿಕ ಕಚ್ಚಾ ತೈಲ ಬೆಲೆ ಕಳೆದ ಆರು ವರ್ಷಗಳಲ್ಲೇ ಕನಿಷ್ಠ 46 ಡಾಲರ್‌ಗೆ ತಲುಪಿದ ಪರಿಣಾಮ ಸಂಭವಿಸಿತ್ತು.

Most Read Articles

Kannada
English summary
Petrol and diesel prices hiked by 82 and 61 paisa per litre respectively
Story first published: Monday, February 16, 2015, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X