ಏರ್ ಬ್ಯಾಗ್ ಸಮಸ್ಯೆ; ಗ್ಯಾರೇಜ್‌ನತ್ತ ರೆನೊ ಕಾರುಗಳು

By Nagaraja

ಏರ್ ಬ್ಯಾಗ್ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ ಇಂಡಿಯಾವು, ಪಲ್ಸ್, ಸ್ಕಾಲಾ, ಫ್ಲೂಯನ್ಸ್, ಡಸ್ಟರ್ ಹಾಗೂ ಕೋಲಿಯಸ್ ಸೇರಿದಂತೆ 646 ವಾಹಗಳಿಗೆ ಹಿಂದಕ್ಕೆ ಕರೆ ನೀಡಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ 2014ನೇ ಸಾಲಿನಲ್ಲಿ ಏರ್ ಬ್ಯಾಗ್ ಸಮಸ್ಯೆಯಿಂದಾಗಿಯೇ ಟೊಯೊಟಾ, ಹೋಂಡಾ ಹಾಗೂ ಫೋರ್ಡ್‌ಗಳಂತಹ ಸಂಸ್ಥೆಗಳು ಭಾರಿ ರಿಕಾಲ್‌ಗೆ ಆದೇಶ ನೀಡಿತ್ತು. ಈಗ ರೆನೊದಿಂದಲೂ ಇಂತಹದೊಂದು ನಡೆ ಕಂಡುಬಂದಿದೆ.

renualt pulse

ಪ್ರಸ್ತುತ ಸಮಸ್ಯೆಯು ಕಾರಿನ ಸುರಕ್ಷತೆಗೆ ಸಂಬಂಧಪಟ್ಟಿದ್ದಾಗಿರುವುದರಿಂದ ಯಾವುದೇ ಅಪಾಯ ಆಹ್ವಾನಿಸಲು ತಯಾರಾಗದಿರುವ ರೆನೊ ಸಂಸ್ಥೆಯು ಮುಂಜಾಗ್ರತಾ ಕ್ರಮವಾಗಿ ನಿರ್ದಿಷ್ಟ ಮಾದರಿಗಳಿಗೆ ಹಿಂದಕ್ಕೆ ಕರೆ ನೀಡಿದೆ.

ವರದಿಗಳ ಪ್ರಕಾರ 20111 ಸೆಪ್ಟೆಂಬರ್ ತಿಂಗಳಿಂದ 2012 ಜುಲೈ ತಿಂಗಳ ಅವಧಿಯಲ್ಲಿ ನಿರ್ಮಾಣವಾಗಿರುವ ರೆನೊ ಕಾರುಗಳನ್ನು ವಾಪಾಸ್ ಕರೆಯಿಸಿಕೊಳ್ಳಲಾಗುತ್ತಿದೆ. ಅಲ್ಲದೆ ಸಂಪೂರ್ಣ ಉಚಿತವಾಗಿ ಏರ್ ಬ್ಯಾಗ್ ತೊಂದರೆಯನ್ನು ಸರಿಪಡಿಸಿಕೊಡಲಾಗುವುದು ಎಂದು ರೆನೊ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬಂಧ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ.

renault scala

ಜಪಾನ್ ಮೂಲದ ಟಕಟ ಸಂಸ್ಥೆಯೇ ರೆನೊಗೆ ಏರ್ ಬ್ಯಾಗ್ ಪೂರೈಸುತ್ತಿದೆ. ಈ ಹಿಂದೆಯೂ ಬಾಹ್ಯ ಸಂಸ್ಥೆ ಟಕಟ ಒದಗಿಸುತ್ತಿದ್ದ ಏರ್ ಬ್ಯಾಗ್‌ನಿಂದಾಗಿಯೇ ಇತರ ಸಂಸ್ಥೆಗಳು ತೊಂದರೆಯನ್ನು ಎದುರಿಸಿದ್ದವು. ಹೀಗಾಗಿ ಮಗದೊಮ್ಮೆ ಭಾರಿ ಟೀಕೆಗೆ ಒಳಗಾಗುತ್ತಿದೆ.

ಇಲ್ಲಿ ಗಮನಾರ್ಹ ವಿಷಯವೆಂದರೆ ರೆನೊ ಹಾಗೂ ನಿಸ್ಸಾನ್ ಸಂಸ್ಥೆಗಳು ಬ್ಯಾಡ್ಜ್ ಬದಲಾಯಿಸಿಕೊಂಡು ಪಲ್ಸ್ ಹಾಗೂ ಸ್ಕಾಲಾ ಮಾದರಿಗಳನ್ನು ಮೈಕ್ರಾ ಹಾಗೂ ಸನ್ನಿ ರೂಪದಲ್ಲಿ ಮಾರಾಟ ಮಾಡುತ್ತಿದೆ. ಈಗ ಇದಕ್ಕೆ ಸಮಾನವಾದ ಸಮಸ್ಯೆ ಮೈಕ್ರಾ ಹಾಗೂ ಸನ್ನಿ ಮಾದರಿಗಳಿಗೂ ತಟ್ಟಿದೆಯೇ ಎಂಬುದು ಆತಂತಕ್ಕೆ ಕಾರಣವಾಗಿದೆ.

Most Read Articles

Kannada
English summary
French automobile manufacturer Renault offers several vehicles in India. They currently offer five vehicles in India Pulse, Scala, Fluence, Duster and Koleos. Their products are priced from INR 4,46,100 to INR 21,99,999 ex-showroom, Delhi.
Story first published: Tuesday, January 20, 2015, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X