ಸಣ್ಣ ಕಾರುಗಳಿಗೆ ತಾಜಾತನ ತುಂಬಿದ 'ರೆನೊ ಕ್ವಿಡ್'

By Nagaraja

ರೆನೊ ಕ್ವಿಡ್ ಕಾರನ್ನು ಬರಮಾಡಿಕೊಳ್ಳುವರಿಗಾಗಿ ಇಗೊ ಬಂದಿದೆ ಖುಷಿ ಸುದ್ದಿ. ಬಹುನಿರೀಕ್ಷಿತ ಕ್ವಿಡ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು ಬುಕ್ಕಿಂಗ್ ಪ್ರಕ್ರಿಯೆಯನ್ನು ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಆರಂಭಿಸಿದೆ. ಆಸಕ್ತ ಗ್ರಾಹಕರು 25,000 ರು.ಗಳನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ನೂತನ ರೆನೊ ಕ್ವಿಡ್ ಹಬ್ಬದ ಆವೃತ್ತಿಯ ಪ್ರಯುಕ್ತ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದು ಮೂರು ಲಕ್ಷ ರು.ಗಳಿಂದ ನಾಲ್ಕು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದ್ದು, ದೇಶದ ನಂ.1 ಮಾರುತಿ ಆಲ್ಟೊಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಸಣ್ಣ ಕಾರುಗಳಿಗೆ ತಾಜಾತನ ತುಂಬಿದ 'ರೆನೊ ಕ್ವಿಡ್'

ಸಣ್ಣ ಕಾರುಗಳ ವಿಭಾಗದಲ್ಲಿ ಇದೇ ಮೊದಲ ಬಾರಿಯೆಂಬಂತೆ ರೆನೊ-ನಿಸ್ಸಾನ್ ನ ಸಿಎಂಎಫ್-ಎ ಮೊಡ್ಯುಲರ್ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣವಾಗಿರುವ ಕ್ವಿಡ್ ಸಣ್ಣ ಕಾರಿನಲ್ಲಿ ಟಚ್ ಸ್ಕ್ರೀನ್ ಮೀಡಿಯಾ-ನೇವ್ ನೇವಿಗೇಷನ್ ಸಿಸ್ಟಂ ಜೊತೆ ಏಳು ಇಂಚಿನ ಪರದೆ, ಡಿಜಿಟಲ್ ಇನ್ಸ್ಟುಮೆಂಟ್ ಕನ್ಸೋಲ್, ಅಲಾಯ್ ವೀಲ್, ಕ್ರೋಮ್ ಡೋರ್ ಹ್ಯಾಂಡಲ್, ಕ್ರೋಮ್ ಸ್ಪರ್ಶದ ಟೈಲ್ ಲೈಟ್, ರೂಫ್ ರೈಲ್ ಮತ್ತು ಬದಿಯಲ್ಲಿ ಬಾಡಿ ಕ್ಲಾಡಿಂಗ್ ನೀಡಲಾಗುತ್ತದೆ.

ಸಣ್ಣ ಕಾರುಗಳಿಗೆ ತಾಜಾತನ ತುಂಬಿದ 'ರೆನೊ ಕ್ವಿಡ್'

800 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ರೆನೊ ಕ್ವಿಡ್ 57 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಫೈವ್ ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಎಎಂಟಿ ಆಯ್ಕೆಯೂ ಲಭ್ಯವಿರುವ ಸಾಧ್ಯತೆಯಿದೆ. ಇವೆಲ್ಲಕ್ಕೂ ನಿಖರ ಮಾಹಿತಿಗಾಗಿ ಬಿಡುಗಡೆಯ ವರೆಗೂ ಕಾದು ಕುಳಿತುಕೊಳ್ಳಬೇಕಾಗಿದೆ.

ಸಣ್ಣ ಕಾರುಗಳಿಗೆ ತಾಜಾತನ ತುಂಬಿದ 'ರೆನೊ ಕ್ವಿಡ್'

ಒಂದು ಸಣ್ಣ ಕಾರು ಆಗಿರುವ ಹೊರತಾಗಿಯೂ ಎಸ್ ಯುವಿ ಶೈಲಿಯ ವಿನ್ಯಾಸ ಮೈಗೂಡಿಸಿಕೊಂಡಿರುವ ರೆನೊ, ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾದ್ದಲ್ಲಿ ಜನಪ್ರಿಯ ಮಾರುತಿ ಆಲ್ಟೊ ಹಾಗೂ ಹ್ಯುಂಡೈ ಇಯಾನ್ ಮಾದರಿಗಳನ್ನು ಹಿಂದಿಕ್ಕಲಿದೆ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ.

ಸಣ್ಣ ಕಾರುಗಳಿಗೆ ತಾಜಾತನ ತುಂಬಿದ 'ರೆನೊ ಕ್ವಿಡ್'

ಅತ್ಯುತ್ತಮ ಇಂಧನ ಕ್ಷಮತೆಯೊಂದಿಗೆ ದೇಶದ ರಸ್ತೆಗೆ ಎಂಟ್ರಿ ಕೊಡಲಿರುವ ರೆನೊ ಕ್ವಿಡ್ ಪರಿಣಾಮಕಾರಿ 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹೊಂದಿರಲಿದೆ.

ಸಣ್ಣ ಕಾರುಗಳಿಗೆ ತಾಜಾತನ ತುಂಬಿದ 'ರೆನೊ ಕ್ವಿಡ್'

2014ನೇ ಆಟೋ ಎಕ್ಸ್ ಪೋದಲ್ಲೇ ಭರ್ಜರಿ ಪ್ರದರ್ಶನ ಕಂಡಿರುವ ಕ್ವಿಡ್ ಕಾರನ್ನು ಸಂಪೂರ್ಣ ಪೂರ್ವ ಯೋಜನೆಗಳೊಂದಿಗೆ ರೆನೊ ತಯಾರಿಸಿದೆ. ಅಲ್ಲದೆ ತನ್ನನ್ನು ತಾನೇ ಹ್ಯಾಚ್ ಬ್ಯಾಕ್ ಎಂದು ಹೆಸರಿಸಿಕೊಳ್ಳಲು ನಿರಾಕರಿಸುವ ಮೂಲಕ ಮಾರಾಟ ತಂತ್ರವನ್ನು ಅನುಸರಿಸಿದೆ.

Most Read Articles

Kannada
English summary
Renault Kwid Bookings Opened
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X