ಬಹುನಿರೀಕ್ಷಿತ ರೆನೊ ಕ್ವಿಡ್ ನಾಳೆ ಬಿಡುಗಡೆ

By Nagaraja

ಸಣ್ಣ ಕಾರು ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆಗೆ ಕಾರಣವಾಗಿರುವ ಈಗಾಗಲೇ ಜಾಗತಿಕ ಅನಾವರಣ ಕಂಡಿರುವ ಬಹುನಿರೀಕ್ಷಿತ ರೆನೊ ಕ್ವಿಡ್ ಹ್ಯಾಚ್ ಬ್ಯಾಕ್ ನಾಳೆ (ಸೆಪ್ಟೆಂಬರ್ 23) ಭಾರತದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜರಗಲಿರುವ ಭವ್ಯ ಸಮಾರಂಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ರೆನೊ ಕ್ವಿಡ್ ಎಂಟ್ರಿ ಕೊಡಲಿದೆ. ಇದು ಪ್ರಮುಖವಾಗಿಯೂ ಮಾರುತಿ ಜನಪ್ರಿಯ ಆಲ್ಟೊ ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ.

ರೆನೊ ಕ್ವಿಡ್

ಮೂರರಿಂದ ನಾಲ್ಕು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿರುವ ರೆನೊ ಕ್ವಿಡ್ ತಾಜಾತನದ ವಿನ್ಯಾಸ ಮೈಗೂಡಿಸಿ ಬಂದಿದ್ದು, ಅದಕ್ಕೆ ತಕ್ಕುದಾದ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಓದುಗರ ಗಮನಕ್ಕಾಗಿ, ರೆನೊ ಕ್ವಿಡ್ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆಸಕ್ತ ಗ್ರಾಹಕರು 5,000 ರುಪಾಯಿಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಕ್ವಿಡ್ ವಿಶಿಷ್ಟ ಆಪ್ ಕೂಡಾ ರೆನೊ ಬಿಡುಗಡೆಗೊಳಿಸಿದೆ.

ಎಂಜಿನ್

  • 799 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್
  • 72 ಎನ್‌ಎಂ ತಿರುಗುಬಲ, 54 ಅಶ್ವಶಕ್ತಿ
  • ಮೈಲೇಜ್ 25.17

ತಳಹದಿ: ಸಿಎಂಎಫ್-ಎ ಮೊಡ್ಯುಲರ್

ವೆರಿಯಂಟ್: ಸ್ಟ್ಯಾಂಡರ್ಡ್, ಆರ್‌ಎಕ್ಸ್‌ಇ, ಆರ್‌ಎಕ್ಸ್ಎಲ್ ಮತ್ತು ಆರ್‌ಎಕ್ಸ್‌ಟಿ.

ಐದು ಆಕರ್ಷಕ ಬಣ್ಣಗಳು: ಫಿಯರಿ ರೆಡ್, ಐಸ್ ಕೂಲ್ ವೈಟ್, ಪ್ಲಾನೆಟ್ ಗ್ರೇ, ಮೂನ್ ಲೈಟ್ ಸಿಲ್ವರ್ ಮತ್ತು ಔಟ್ ಬ್ಯಾಗ್ ಬ್ರೋನ್ಸ್.

ಅಂದಾಜು ಬೆಲೆ: 2.9 ಲಕ್ಷ ರು.ಗಳಿಂದ 4.5 ಲಕ್ಷ ರು.

ವೈಶಿಷ್ಟ್ಯ

  • ಟಚ್ ಸ್ಕ್ರೀನ್ ಮೀಡಿಯಾ-ನೇವ್ ನೇವಿಗೇಷನ್ ಸಿಸ್ಟಂ ಜೊತೆ ಏಳು ಇಂಚಿನ ಪರದೆ,
  • ಡಿಜಿಟಲ್ ಇನ್ಸ್ಟುಮೆಂಟ್ ಕನ್ಸೋಲ್,
  • ಅಲಾಯ್ ವೀಲ್,
  • ಕ್ರೋಮ್ ಡೋರ್ ಹ್ಯಾಂಡಲ್,
  • ಕ್ರೋಮ್ ಸ್ಪರ್ಶದ ಟೈಲ್ ಲೈಟ್,
  • ರೂಫ್ ರೈಲ್,
  • ಬಾಡಿ ಕ್ಲಾಡಿಂಗ್
Most Read Articles

Kannada
Read more on ರೆನೊ renault
English summary
Renault Kwid Launching On 24th September
Story first published: Wednesday, September 23, 2015, 12:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X