ರೆನೊ ಕ್ವಿಡ್ ಸೆಮಿ ಆಟೋಮ್ಯಾಟಿಕ್ ಎಂಜಿನ್‌ನಲ್ಲೂ ಬರುತ್ತಾ?

By Nagaraja

ಭಾರತ ಮಾರುಕಟ್ಟೆಯಲ್ಲಿ ಭರ್ಜರಿ ಅನಾವರಣಗೊಳ್ಳುವ ಮೂಲಕ ವಾಹನ ಪ್ರೇಮಿಗಳಲ್ಲಿ ಭಾರಿ ಸಂಚಲನ ಮೂಡಿಸಿರುವ ರೆನೊ ಕ್ವಿಡ್ ಸಣ್ಣ ಕಾರು 800ಸಿಸಿ ಎಂಜಿನ್ ಪಡೆದುಕೊಳ್ಳುವುದು ಖಚಿತವಾಗಿದೆ. ಈಗ ಲಭ್ಯವಾಗಿರುವ ತಾಜಾ ಮಾಹಿತಿಯ ಪ್ರಕಾರ ನೂತನ ಕ್ವಿಡ್, ಒಂದು ಲೀಟರ್ ಎಂಜಿನ್ ನೊಂದಿಗೆ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆಯ್ಕೆಯೂ ಲಭ್ಯವಾಗಲಿದೆ.

ಇತ್ತೀಚೆಗಿನ ಸಮಯಗಳಿಂದ ಭಾರತದಲ್ಲಿ ಸೆಮಿ ಆಟೋಮ್ಯಾಟಿಕ್ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಇದರಂತೆ 2016ರಲ್ಲಿ ಬಿಡುಗಡೆ ಸಾಧ್ಯತೆಯಿರುವ ಕ್ವಿಡ್ ಕಾರಲ್ಲೂ ಇದೇ ಆಯ್ಕೆ ಕಂಡುಬರುವ ಸಾಧ್ಯತೆಯಿದೆ.

ರೆನೊ ಕ್ವಿಡ್

ವಾಹನ ವಿಶ್ಲೇಷಕರು ಹಾಗೂ ತಜ್ಞರ ಪ್ರಕಾರ ರೆನೊ ಕ್ವಿಡ್ ಭಾರತ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಹಾಗೊಂದು ವೇಳೆ ಸೆಮಿ ಆಟೋಮ್ಯಾಟಿಕ್ ಆಯ್ಕೆಯೂ ಲಭ್ಯವಾದ್ದಲ್ಲಿ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ.

ರೆನೊ-ನಿಸ್ಸಾನ್ ಸಿಎಂಎಫ್-ಎ ತಳಹದಿಯಲ್ಲಿ ನೂತನ ಕಾರು ನಿರ್ಮಾಣವಾಗುತ್ತಿದೆ. ಮುಂದೆ ಇದೇ ತಳಹದಿಯಲ್ಲಿ ದಟ್ಸನ್ ರೆಡಿ ಗೊ ಕಾರು ಸಹ ನಿರ್ಮಾಣವಾಗಲಿದೆ.

Most Read Articles

Kannada
English summary
Renault has taken into consideration that more Indian automobile buyers are leaning towards AMT options. Now post Kwid launch in India the manufacturer will be introducing a 1.0-litre AMT variant.
Story first published: Wednesday, July 22, 2015, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X