ರೆನೊದಿಂದ ಭಾರತಕ್ಕೆ ಏಳು ಸೀಟುಗಳ ಎಸ್‌ಯುವಿ

By Nagaraja

ಫ್ರಾನ್ಸ್‌ನ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳಲ್ಲಿ ಏಳು ಸೀಟುಗಳ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಬಿಡುಗಡೆ ಮಾಡಲು ಯೋಜನೆ ಹೊಂದಿದೆ.

ಪ್ರಸ್ತುತ ರೆನೊ ಸಂಸ್ಥೆಯು ಭಾರತದಲ್ಲಿ ಕೊಲಿಯೊಸ್ ಎಸ್‌ಯುವಿ ಕಾರನ್ನು ಮಾರಾಟ ಮಾಡುತ್ತಿದೆ. ಈಗ ಯೋಜನೆ ಮಾಡಿರುವ ನೂತನ ಎಸ್‌ಯುವಿ ಕೊಲಿಯಾಸ್‌ಗಿಂತಲೂ ದೊಡ್ಡದಾಗಿರಲಿದ್ದು, ಎಸ್ಕೇಪ್ ಬಹು ಬಳಕೆಯ ವಾಹನಗಿಂತಲೂ ಸಣ್ಣದಾಗಿರಲಿದೆ.

renault kadjar

ಪ್ರಾಥಮಿಕವಾಗಿ ಚೀನಾ ಮಾರುಕಟ್ಟೆಯಲ್ಲಿ ನಿರ್ಮಾಣವಾಗಲಿರುವ ನೂತನ ಏಳು ಸೀಟುಗಳ ಎಂಪಿವಿ ಏಷ್ಯಾದ ವಿವಿಧ ರಾಷ್ಟ್ರಗಳಲ್ಲಿ ಸ್ಥಳೀಯವಾಗಿ ಜೋಡಣೆಯಾಗಲಿದೆ.

ರೆನೊ ಲೊಡ್ಜಿ ಎಂಪಿವಿ ಭಾರತದಲ್ಲಿ ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಅಂದರೆ ನೂತನ ಎಸ್‌ಯುವಿ ಮುಂದಿನ ವರ್ಷದಲ್ಲಷ್ಟೇ ಭಾರತ ಪ್ರವೇಶ ಕಾಣುವ ಸಾಧ್ಯತೆಯಿದೆ.

ಹೊಸ ಎಸ್‌ಯುವಿ ಹೆಸರು ಇನ್ನು ಅಂತಿಮಗೊಂಡಿಲ್ಲ. ಹೆಚ್ಚು ಸ್ಥಳಾವಕಾಶ, ಉಪಯುಕ್ತತೆ ಹಾಗೂ ಪ್ರಾಯೋಗಿಕವಾಗಿಯೂ ಅತ್ಯುತ್ತಮ ಚಾಲನಾ ಅನುಭವ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ.

Most Read Articles

Kannada
English summary
The French manufacturer Renault has confirmed that they are developing an all-new 7-seater SUV for Asia.
Story first published: Monday, March 16, 2015, 12:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X