ಭಾರತಕ್ಕೆ ಬರಲಿದೆ ಹೊಸ ಸ್ಯಾಂಗ್ಯೊಂಗ್ ರೆಕ್ಸ್ಟಾನ್

By Nagaraja

ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಅಧೀನತೆಯಲ್ಲಿರುವ ಸ್ಯಾಂಗ್ಯೊಂಗ್ ತವರೂರಾದ ದಕ್ಷಿಣ ಕೊರಿಯಾದಲ್ಲಿ ಹೊಸ ರೆಕ್ಸ್ಟಾನ್ ಮಾದರಿಯನ್ನು ಅನಾವರಣಗೊಳಿಸಿದೆ. ಪ್ರಸ್ತುತ ಮಾದರಿಯು ನಿಕಟ ಭವಿಷ್ಯದಲ್ಲೇ ಭಾರತದಲ್ಲೂ ಬಿಡುಗಡೆಯಾಗಲಿದೆ.

ಭಾರತದಲ್ಲೂ ಪ್ರೀಮಿಂಯ ಐಷಾರಾಮಿ ಕ್ರೀಡಾ ಬಳಕೆಯ ವಾಹನಗಳಿಗೆ ಉತ್ತಮ ಬೇಡಿಕೆಯಿದೆ. ಹೊಸ ರೆಕ್ಸ್ಟಾನ್ ಮಾದರಿಯು ಭಾರತದಲ್ಲಿ ಈಗಿರುವ ಮಾದರಿಯ ಸ್ಥಾನವನ್ನು ತುಂಬಲಿದೆ.

ssangyong rexton

ಹೊಸ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಮಾದರಿಯು ಕಾರಿನ ಒಳಮೈ ಜೊತೆಗೆ ಹೊರಮೈಯಲ್ಲಿ ಬದಲಾವಣೆಗಳನ್ನು ಪಡೆಯಲಿದೆ. ಮುಂಭಾಗದಲ್ಲಿ ಪರಿಷ್ಕೃತ ಗ್ರಿಲ್ ಜೊತೆ ಸ್ಯಾಂಗ್ಯೊಂಗ್ ಲಾಂಛನ ಹೆಚ್ಚಿನ ಆಕರ್ಷಕತೆಯನ್ನು ಪಡೆಯಲಿದೆ.

ಇನ್ನು ಹೆಡ್‌ಲೈಟ್‌ಗೂ ಆಧುನಿಕ ಸ್ಪರ್ಶ ನೀಡಲಾಗಿದ್ದು, ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಎಚ್‌ಐಡಿ ಪ್ರೊಜೆಕ್ಟರ್‌ಗಳು ಸ್ಟ್ಯಾಂಡರ್ಡ್ ಆಗಿ ಲಭಿಸಲಿದೆ. ಇನ್ನು ತಾಜಾತನದ ನೋಟಕ್ಕಾಗಿ ಹೊಸ ಅಲಾಯ್ ವೀಲ್ ಸಹ ಪಡೆಯಲಿದೆ.

ssangyong rexton

ಕಾರಿನೊಳಗೆ ಲೆಥರ್ ಅನುಭವ ನಿಮ್ಮದಾಗಲಿದೆ. ಸೆಂಟ್ರಲ್ ಕನ್ಸಾಲ್, ಸ್ಟೀರಿಂಗ್ ವೀಲ್ ಹಾಗೂ ಕ್ಯಾಬಿನ್ ಲೈಟ್ಸ್ ಪರಿಷ್ಕೃತಗೊಳಿಸಲಾಗಿದ್ದು ಹೆಚ್ಚು ಪ್ರೀಮಿಯಂ ಲುಕ್ ನೀಡುತ್ತದೆ. ಹಾಗೆಯೇ ಸ್ಮಾರ್ಟ್ ಕೀ, ರೈನ್ ಸೆನ್ಸಿಂಗ್ ವೈಪರ್, ಕ್ರೂಸ್ ಕಂಟ್ರೋಲ್, ಆಡಿಯೋ, ನೇವಿಗೇಷನ್ ಸಿಸ್ಟಂ ಹಾಗೂ ಬ್ಲೂಟೂತ್ ಸೌಲಭ್ಯಗಳಿರಲಿದೆ.

ಅಂತಿಮವಾಗಿ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಕಾರಿನಡಿಯಲ್ಲಿ ಒಂದು ಡೀಸೆಲ್ ಎಂಜಿನ್ ಇರಲಿದ್ದು, ಎರಡು ವಿಧದ ಟ್ಯೂನಿಂಗ್ ಪಡೆಯಲಿದೆ. ಇದರ 2696 ಸಿಸಿ ಡೀಸೆಲ್ ಎಂಜಿನ್ 162 (340 ಎನ್‌ಎಂ ಟಾರ್ಕ್) ಹಾಗೂ 184 ಅಶ್ವಶಕ್ತಿ (402 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಮ್ಯಾನುವಲ್ ಆಲ್ ವೀಲ್ ಡ್ರೈವ್ ಅಥವಾ ಆಟೋಮ್ಯಾಟಿಕ್ ಆಲ್ ವೀಲ್ ಡ್ರೈವ್ ವ್ಯವಸ್ಥೆಗಳನ್ನು ಪಡೆಯಲಿದೆ.

Most Read Articles

Kannada
English summary
For 2015, Ssangyong has already revealed its refreshed Rexton SUV, which has been launched in Korea. The manufacturer will get this updated model to India as well and replace their older generation model. It gets several changes to both exterior as well as interior of the SUV.
Story first published: Monday, January 19, 2015, 16:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X