ಏಕಕಾಲಕ್ಕೆ 20 ಲಕ್ಷ ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದ ಸುಜುಕಿ

By Nagaraja

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾರುತಿ ಸುಜುಕಿ ಜೊತೆಗಾರನಾಗಿರುವ ಜಪಾನ್ ಮೂಲದ ಸುಜುಕಿ ಸಂಸ್ಥೆಯು ಜಾಗತಿಕವಾಗಿ 20 ಲಕ್ಷ ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದೆ. ಪ್ರಸ್ತುತ ಈ ವಿಭಾಗದಲ್ಲಿ ಭಾರತೀಯ ಮಾದರಿಗಳು ಇವೆಯೇ ಎಂಬುದು ಆಂತಕಕ್ಕೆ ಕಾರಣವಾಗಿದೆ.

ದೇಶದ ಜನಪ್ರಿಯ ಮಾದರಿಗಳಾದ ಆಲ್ಟೊ, ಸ್ವಿಫ್ಟ್, ವ್ಯಾಗನಾರ್ ಸೇರಿದಂತೆ ಒಂಬತ್ತು ಮಾದರಿಗಳಿಗೆ ಸುಜುಕಿ ಸಂಸ್ಥೆಯು ವಾಪಾಸ್ ಕರೆ ನೀಡಿದೆ. ಅಷ್ಟಕ್ಕೂ ಏನಿದು ಸಮಸ್ಯೆ? ಮುಂದಕ್ಕೆ ಓದಿರಿ...

ಏಕಕಾಲಕ್ಕೆ 20 ಲಕ್ಷ ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದ ಸುಜುಕಿ

ನಿಖರವಾಗಿ ಹೇಳಬೇಕಾದರೆ ತಾಯ್ನಾಡಿನಲ್ಲಿ 18,72,903 ವಾಹನಗಳಿಗೆ ಸುಜುಕಿ ಮೋಟಾರು ಕಂಪನಿಯು ಹಿಂದಕ್ಕೆ ಕರೆ ನೀಡಿದೆ. ಇದನ್ನು ಜಪಾನ್ ಸಾರಿಗೆ ಸಚಿವಾಲಯ ಸಹ ಖಚಿತಪಡಿಸಿದೆ.

ಸಮಸ್ಯೆ ಏನು?

ಸಮಸ್ಯೆ ಏನು?

ಪ್ರಾಥಮಿಕ ವರದಿಗಳ ಪ್ರಕಾರ ಕಾರು ಇಗ್ನಿಷನ್ ಸ್ವಿಚ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಕಿ ಅಥವಾ ಹೊಗೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಏಕಕಾಲಕ್ಕೆ ಭಾರಿ ರಿಕಾಲ್ ಗೆ ಕರೆ ನೀಡಲಾಗಿದೆ.

ಮಾದರಿಗಳು ಯಾವುವು?

ಮಾದರಿಗಳು ಯಾವುವು?

ಒಟ್ಟು ಒಂಬತ್ತು ಮಾದರಿಗಳಲ್ಲಿ ಸಮಸ್ಯೆ ಕಂಡುಬಂದಿದೆ. ಇವುಗಳಲ್ಲಿ ಸುಜುಕಿಯ ವ್ಯಾಗನಾರ್, ಆಲ್ಟೊ, ಕೀ, ಸ್ವಿಫ್ಟ್, ಟ್ವಿನ್, ಸೇರಿದಂತೆ ಮಾಜ್ದಾ ಮೋಟಾರು ಸಂಸ್ಥೆಗೆ ಸೇರಿದ ಮೂರು (ಎಝಡ್ ವ್ಯಾಗನ್, ಕ್ಯಾರೋಲ್, ಲ್ಯಾಪುಟ) ಹಾಗೂ ಜನರಲ್ ಮೋಟಾರ್ಸ್ ನ ಷೆವರ್ಲೆ ಕ್ರೂಝ್ ಮಾದರಿಗಳು ಸೇರಿವೆ.

ಯಾವಾಗ ನಿರ್ಮಾಣ?

ಯಾವಾಗ ನಿರ್ಮಾಣ?

1998 ಆಗಸ್ಟ್ ತಿಂಗಳಿಂದ 2009 ಆಗಸ್ಟ್ ತಿಂಗಳ ವರೆಗೆ ನಿರ್ಮಾಣವಾದ ಮಾದರಿಗಳಲ್ಲಿ ತೊಂದರೆ ಕಂಡುಬಂದಿರುವುದಾಗಿ ತಿಳಿದು ಬಂದಿದೆ.

ಸಮಸ್ಯೆ

ಸಮಸ್ಯೆ

ಈಗಾಗಲೇ 89 ಮಾದರಿಗಳಲ್ಲಿ ತೊಂದರೆ ಪತ್ತೆ ಹಚ್ಚಲಾಗಿದ್ದು, ಇನ್ನು 67 ಮಾದರಿಗಳಲ್ಲಿ ಹೊಗೆ ಎದ್ದಿರುವ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೆ ಯಾರಿಗೂ ಗಾಯಗಳಾಗಿಲ್ಲ ಎಂದು ಸಂಸ್ಥೆಯು ತಿಳಿಸಿದೆ.

ಏಕಕಾಲಕ್ಕೆ 20 ಲಕ್ಷ ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದ ಸುಜುಕಿ

ನಿಮ್ಮ ಮಾಹಿತಿಗಾಗಿ ಕಳೆದ ಮಾರ್ಚ್ ತಿಂಗಳಿನಲ್ಲಷ್ಟೇ ಇದಕ್ಕೆ ಸಮಾನವಾದ ತೊಂದರೆಗೆ ಸಂಬಂಧಿಸಿದಂತೆ ಪೊಲೀಸ್ ಕಾರು ಸೇರಿದಂತೆ 120,000 ವಾಹನಗಳನ್ನು ಸಜುಕಿ ಹಿಂಪಡೆಯಲಾಗಿತ್ತು. ಈಗ ಮತ್ತೆ 1290 ಪೊಲೀಸ್ ಕಾರುಗಳಿಗೆ ವಾಪಾಸ್ ಕರೆ ನೀಡಲಾಗಿದೆ.

ಏಕಕಾಲಕ್ಕೆ 20 ಲಕ್ಷ ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದ ಸುಜುಕಿ

ಈಗ ಉಚಿತವಾಗಿ ಸಮಸ್ಯೆ ಬಗೆಹರಿಸಿ ಕೊಡಲಾಗುವುದು. ಅಲ್ಲದೆ ತೊಂದರೆಗೊಳಗಾಗಿರುವ 130,000ದಷ್ಟು ರಫ್ತು ವಾಹನಗಳಲ್ಲೂ ಇದಕ್ಕೆ ಸಮಾನವಾದ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕಟ್ಟುನಿಟ್ಟಿನ ಗುಣಮಟ್ಟ ನಿರ್ವಹಣೆ ಪರೀಕ್ಷೆಗೆ ಸಂಸ್ಥೆ ಬದ್ಧವಾಗಿದೆ ಎಂದು ಸುಜುಕಿ ತಿಳಿಸಿದೆ.


Most Read Articles

Kannada
English summary
Suzuki is one of the leading automobile manufacturers across the globe. They have now issued a recall, which accounts for approximately two million vehicles.
Story first published: Thursday, April 23, 2015, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X