ಟಾಟಾ ಹೊಸ ಹ್ಯಾಚ್‌ಬ್ಯಾಕ್ ಕಾರಿನ ಹೆಸರೇನು ಗೊತ್ತೇ?

By Nagaraja

ಪುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರನ್ನು ಸಂಸ್ಥೆಯ ಮುಖ್ಯ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿದ ಬಳಿಕ ತನ್ನ ಮಾರಾಟ ನೀತಿಯನ್ನು ಮತ್ತಷ್ಟು ಚುರುಕುಗೊಳಿಸಿರುವ ದೇಶದ ಅತಿ ದೊಡ್ಡ ಟಾಟಾ ಮೋಟಾರ್ಸ್ ಸಂಸ್ಥೆಯು, ತನ್ನ ನೂತನ ಹ್ಯಾಚ್ ಬ್ಯಾಕ್ ಕಾರಿಗೆ ನಾಮಕರಣ ಮಾಡಿದೆ.

Also Read: ನಮಸ್ತೆ ಇಂಡಿಯಾ ಟಾಟಾ ಮೆಸ್ಸಿ ಜುಗಲ್ ಬಂಧಿ

ಇತ್ತೀಚೆಗಿನ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಹಾಗೂ 'ಕೈಟ್' ಎಂಬ ಕೋಡ್ ಪಡೆದುಕೊಂಡಿರುವ ನೂತನ ಟಾಟಾ ಹ್ಯಾಚ್ ಬ್ಯಾಕ್ ಕಾರಿಗೆ ಲಿಯೊನೆಲ್ ಮೆಸ್ಸಿ ಜೊತೆಗಿನ ಆಕರ್ಷಕ ವಿಡಿಯೋ ಮುಖಾಂತರ ನಾಮಕರಣ ಮಾಡಲಾಗಿದೆ. ಹಾಗಿದ್ದರೆ ಟಾಟಾದ ಹೊಸ ಜಾಗತಿಕ ಉತ್ಪನ್ನದ ಹೆಸರೇನು ಬಲ್ಲೀರಾ ? ಸ್ವಲ್ಪ ತಡೆಯಿರಿ, ಬನ್ನಿ ಕೆಳಗಡೆ ಕೊಟ್ಟಿರುವ ಚಿತ್ರಪುಟದಲ್ಲಿ ಈ ಬಗ್ಗೆ ಸಮಗ್ರ ವಿವರವನ್ನು ಕೊಡಲಾಗಿದೆ.

ಟಾಟಾ ಹೊಸ ಹ್ಯಾಚ್‌ಬ್ಯಾಕ್ ಕಾರು 'ಝಿಕಾ'

ಹೌದು, ಟಾಟಾದ ಹೊಸ ಹ್ಯಾಚ್ ಬ್ಯಾಕ್ ಕಾರು 'ಝಿಕಾ' (Zica) ಎಂದೆನಿಸಿಕೊಳ್ಳಲಿದೆ. ಹೊಸ ತಂತ್ರಜ್ಞಾನ ಹಾಗೂ ವಿನ್ಯಾಸದೊಂದಿಗೆ ಟಾಟಾ ಸಂಸ್ಥೆಯು ಕಾರು ಮಾರುಕಟ್ಟೆಗೆ ಭರ್ಜರಿ ಪುನರಾಗಮನ ಮಾಡಿಕೊಳ್ಳುವ ಇರಾದೆಯಲ್ಲಿದೆ.

ಟಾಟಾ ಹೊಸ ಹ್ಯಾಚ್‌ಬ್ಯಾಕ್ ಕಾರು 'ಝಿಕಾ'

ಇದುವರೆಗೆ ಕೈಟ್ ಎಂಬ ಕೋಡ್ ಪಡೆದುಕೊಂಡಿದ್ದ ಟಾಟಾದ ಹೊಸ ಉತ್ಪನ್ನವನ್ನು ಮೆಸ್ಸಿ ಜೊತೆಗಿನ ಆಕರ್ಷಕ ಜಾಹೀರಾತಿನ ಮುಖಾಂತರ ಪರಿಚಯಿಸಲಾಗಿದೆ. [ಕೊನೆಯ ಪುಟದಲ್ಲಿ ಕೊಟ್ಟಿರುವ ವಿಡಿಯೋ ನೋಡಲು ಮರೆಯದಿರಿ].

ಟಾಟಾ ಹೊಸ ಹ್ಯಾಚ್‌ಬ್ಯಾಕ್ ಕಾರು 'ಝಿಕಾ'

ನೂತನ ಝಿಕಾ ಹ್ಯಾಚ್ ಬ್ಯಾಕ್ ಕಾರು ಎಲ್ಲ ಹೊಸತನದ 1.05 ಲೀಟರ್ 3 ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 140 ಎನ್ ಎಂ ತಿರುಗುಬಲದಲ್ಲಿ 64 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅದೇ ಹೊತ್ತಿಗೆ 84 ಅಶ್ವಶಕ್ತಿ ಉತ್ಪಾದಿಸುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಇದರಲ್ಲಿರದೆ.

ಟಾಟಾ ಹೊಸ ಹ್ಯಾಚ್‌ಬ್ಯಾಕ್ ಕಾರು 'ಝಿಕಾ'

ಟಾಟಾದ ನೂತನ ಹೊರಿಝೋನೆಕ್ಸ್ಟ್ ಸಿದ್ಧಾಂತದಡಿಯಲ್ಲಿ ಝಿಕಾ ನಿರ್ಮಾಣವಾಗಲಿದೆ. ಇದೇ ತಂತ್ರಗಾರಿಕೆಯಲ್ಲಿ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಹಾಗೂ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರು ನಿರ್ಮಾಣವಾಗಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಟಾಟಾ ಹೊಸ ಹ್ಯಾಚ್‌ಬ್ಯಾಕ್ ಕಾರು 'ಝಿಕಾ'

ವರ್ಷಾಂತ್ಯದೊಳಗೆ ಬಿಡುಗಡೆ ಭಾಗ್ಯ ಕಾಣಲಿರುವ ನಿರೀಕ್ಷೆ ಹೊಂದಿರುವ ಝಿಕಾ ಭಾರತೀಯ ಮಾರುಕಟ್ಟೆಯಲ್ಲಿ 3.5 ಲಕ್ಷ ರು.ಗಳಿಂದ 5.5 ಲಕ್ಷ ರು.ಗಳ ಅಂದಾಜು ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಟಾಟಾ ಹೊಸ ಹ್ಯಾಚ್‌ಬ್ಯಾಕ್ ಕಾರು 'ಝಿಕಾ'

ನೈಜ ಇಂಡಿಕಾದ 'ಎಕ್ಸ್0' ತಳಹದಿಯಲ್ಲಿ ನಿರ್ಮಾಣವಾಗಲಿರುವ ಝಿಕಾ ಭವಿಷ್ಯದಲ್ಲಿ ಕಾಂಪಾಕ್ಟ್ ಸೆಡಾನ್ ಸ್ವರೂಪವನ್ನೂ ಪಡೆಯಲಿದೆ. ಇದಕ್ಕಾಗಿ ವಾಹನ ಪ್ರೇಮಿಗಳು ಮತ್ತಷ್ಟು ಸಮಯ ಕಾಯಬೇಕಾಗಿದೆ.

ಟಾಟಾ ಹೊಸ ಹ್ಯಾಚ್‌ಬ್ಯಾಕ್ ಕಾರು 'ಝಿಕಾ'

ಮಾರುಕಟ್ಟೆಯಲ್ಲಿ ಹೊಸ ಟಾಟಾ ಝಿಕಾ ಕಾರಿಗೆ ಯಾವುದೇ ನೇರ ಪ್ರತಿಸ್ಪರ್ಧಿಗಳಿರುವುದಿಲ್ಲ. ಹಾಗಿದ್ದರೂ ಈಗಾಗಲೇ ನೆಲೆಯೂರಿರುವ ಮಾರುತಿ ಸುಜುಕಿ ಆಲ್ಟೊ, ಹ್ಯುಂಡೈ ಇಯಾನ್ ಹಾಗೂ ನೂತನ ರೆನೊ ಕ್ವಿಡ್ ಮಾದರಿಗಳಿಗೆ ಎದುರಾಳಿಯಾಗಲಿದೆ.

ಟಾಟಾ 'ಝಿಕಾ' ಎಂಟ್ರಿ - ವಿಡಿಯೋ ವೀಕ್ಷಿಸಿ

Most Read Articles

Kannada
English summary
Official: Tata Kite Named 'Tata Zica'
Story first published: Tuesday, November 24, 2015, 12:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X