ವರ್ಷಾಂತ್ಯದೊಳಗೆ ಟಾಟಾ-ಮಾರ್ಕೊಪೊಲೊ ಲಗ್ಷುರಿ ಬಸ್ ರಸ್ತೆಗೆ

By Nagaraja

ಬ್ರೆಜಿಲ್‌ನ ಪ್ರಖ್ಯಾತ ವಾಹನ ಸಂಸ್ಥೆ ಮಾರ್ಕೊಪೊಲೊ ಸಹಯೋಗದಲ್ಲಿ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ವರ್ಷಾಂತ್ಯದೊಳಗೆ 'ಮ್ಯಾಗ್ನಾ' ಐಷಾರಾಮಿ ಬಸ್ಸುಗಳನ್ನು ಬಿಡುಗಡೆ ಮಾಡಲಿದೆ ಎಂಬುದನ್ನು ವರದಿಗಳು ತಿಳಿಸಿವೆ.

ಘನ ವಾಹನ ವಿಭಾಗದಲ್ಲಿ ವಿಸ್ತಾರವಾದ ಮಾರಾಟ ಜಾಲವನ್ನು ಹೊಂದಿರುವ ಟಾಟಾ, ಮಾರ್ಕೊಪೊಲೊ ಜೊತೆ ಸೇರಿ ನೂತನ ಮ್ಯಾಗ್ನಾ ಬಸ್ಸುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಐಸಿವಿ ಹಾಗೂ ಎಂಸಿವಿಗಳೆಂಬ ಎರಡು ವಿಭಾಗಗಳಲ್ಲಿ ಬಿಡುಗಡೆಯಾಗಲಿದೆ.

ಟಾಟಾ ಮಾರ್ಕೊಪೊಲೊ

ಟಾಟಾ-ಮಾರ್ಕೊಪೊಲೊ ಲಗ್ಷುರಿ ಬಸ್ಸುಗಳಲ್ಲಿ 30ರಿಂದ 50 ಪ್ರಯಾಣಿಕರಿಗೆ ಕುಳಿತುಕೊಳ್ಳಬಹುದಾಗಿದೆ. ಅಲ್ಲದೆ ಬಸ್ಸಿನೊಳಗೆ ಪ್ರಯಾಣಿಕರಿಗೆ ಗರಿಷ್ಠ ಸ್ಥಳಾವಕಾಶವನ್ನು ಒದಗಿಸಲಾಗಿದೆ ಎಂದು ವಿವರಿಸಲಾಗಿದೆ.

ಎಲ್‌ಸಿವಿ ಕ್ಲಾಸ್ ಬಸ್ಸುಗಳು 120ರಿಂದ 150 ಅಶ್ವಶಕ್ತಿ ಅಂತೆಯೇ ಎಂಸಿವಿ ಶ್ರೇಣಿಯ ಬಸ್ಸುಗಳು 150ರಿಂದ 230 ವರೆಗಿನ ಅಶ್ವಶಕ್ತಿಯ ಎಂಜಿನ್ ಗಳನ್ನು ಪಡೆಯಲಿದೆ. ಅಲ್ಲದೆ ಮುಂದಿನ ವರ್ಷ ಯೋಜಿತ ಎಚ್‌ಸಿವಿ ವಾಹನಗಳು ಗರಿಷ್ಠ 230ರಿಂದ 280 ಅಶ್ವಶಕ್ತಿಯ ವರೆಗಿನ ಮೋಟಾರುಗಳನ್ನು ಪಡೆಯಲಿದೆ.

Most Read Articles

Kannada
English summary
Tata Marcopolo Magna luxury bus to be launched India soon
Story first published: Friday, September 4, 2015, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X