ಹೊಸ ನ್ಯಾನೋ ಎಎಂಟಿ ಹೇಂಗಿದೆ ನೋಡಿ ವಿಶೇಷತೆಗಳನ್ನು ತಿಳಿಯಿರಿ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ತೆಯಾಗಿರುವ ಟಾಟಾ ಮೋಟಾರ್ಸ್, ಅತಿ ಶೀಘ್ರದಲ್ಲೇ ನ್ಯಾನೋ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಕಾರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಈ ಸಂಬಂಧ ಕೆಲವು ದಿನಗಳ ಹಿಂದೆ ಟೀಸರ್ ಚಿತ್ರ ಬಿಡುಗಡೆಗೊಳಿಸಿದ್ದ ಸಂಸ್ಥೆಯೀಗ ಅಧಿಕೃತವಾಗಿ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಅಷ್ಟಕ್ಕೂ ಹೊಸ ನ್ಯಾನೋ ಸೆಮಿ ಆಟೋಮ್ಯಾಟಿಕ್ ಕಾರಲ್ಲಿರುವ ವಿಶೇಷತೆಗಳೇನು? ಇದರಿಂದ ನಿಮಗೆ ದೊರಕುವ ಪ್ರಯೋಜನಗಳೇನು? ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗುವುದು.

08. ಟಾಟಾ GenX Nano

08. ಟಾಟಾ GenX Nano

ಮುಂದಿನ ಜನಾಂಗದ ನ್ಯಾನೋ ಕಾರನ್ನು 'GenX Nano' ಎಂದು ಟಾಟಾ ಸಂಸ್ಥೆಯು ಗುರುತಿಸಿಕೊಂಡಿದೆ.

07. ಬುಕ್ಕಿಂಗ್ ಆರಂಭ

07. ಬುಕ್ಕಿಂಗ್ ಆರಂಭ

ಟಾಟಾ ಸಂಸ್ಥೆಯು ನೆಕ್ಸ್ಟ್ ಜನರೇಷನ್ ನ್ಯಾನೋ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ರು. 5000 ಪಾವತಿಸಿ ನೀವು ಸಹ ನಿಮ್ಮ ನೆಚ್ಚಿನ ನ್ಯಾನೋ ಕಾರನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.

06. ಮೈಲೇಜ್

06. ಮೈಲೇಜ್

ವರದಿಗಳ ಪ್ರಕಾರ ನ್ಯಾನೋ ಎಎಂಟಿ ಕಾರು ಪ್ರತಿ ಲೀಟರ್ ಗೆ 21.9 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ 24 ಲೀಟರ್ ಗಳ ಇಂಧನ ಟ್ಯಾಂಕ್ ಇದರಲ್ಲಿರಲಿದೆ. ಸಾಮಾನ್ಯ ನ್ಯಾನೋ ಕಾರು (4 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್) ಪ್ರತಿ ಲೀಟರ್ ಗೆ 24.35 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

05. ವಿನ್ಯಾಸ

05. ವಿನ್ಯಾಸ

ಈಗಾಗಲೇ ಟಾಟಾ ಸಂಸ್ಥೆಯು ಅಧಿಕೃತವಾಗಿ ಪ್ರಕಟಿಸಿರುವ ಚಿತ್ರಗಳನ್ನು ವೀಕ್ಷಿಸಿದಾಗ, 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿದ್ದ ನ್ಯಾನೋ ಎಫ್ ಟ್ರಾನಿಕ್ ಹಾಗೂ ನ್ಯಾನೋ ಆಕ್ಟಿವ್ ಕಾನ್ಸೆಪ್ಟ್ ಗಳಿಂದ ವಿನ್ಯಾಸವನ್ನು ಆಮದು ಮಾಡಲಾಗಿದೆ. ಇದರ ಮುಂಭಾಗದಲ್ಲಿ 'ಸ್ಮೈಲಿಂಗ್' ಏರ್ ಡ್ಯಾಮ್, ಫಾಗ್ ಲ್ಯಾಂಪ್ ಆವರಣ, ಸ್ಪೋಕ್ಡ್ ಹೆಡ್ ಲೈಟ್ ಕ್ಲಸ್ಟರ್ ಮತ್ತು ಕಪ್ಪು ಗ್ರಿಲ್ ಅಲಂಕಾರವನ್ನು ನೋಡಬಹುದಾಗಿದೆ. ಇನ್ನುಳಿದಂತೆ ರಿಯರ್ ಬಂಪರ್, ತೆರೆಯಬಹುದಾದ ಬೂಟ್ ಲಿಡ್, ರಿಯರ್ ವಿಂಡ್ ಸ್ಕ್ರೀನ್ ಮತ್ತು ಹೊಸತಾದ ಸಾಂಗ್ರಿಯಾ ಕೆಂಪು ಬಣ್ಣಗಳು ಪ್ರಮುಖ ಆಕರ್ಷಣೆಯಾಗಿರಲಿದೆ.

04. ಢಿಕ್ಕಿ ಜಾಗ

04. ಢಿಕ್ಕಿ ಜಾಗ

ಇದೇ ಮೊದಲ ಬಾರಿಗೆ ನ್ಯಾನೋ ಕಾರಿನಲ್ಲಿ ತೆರೆಯಬಹುದಾದ ಢಿಕ್ಕಿ ಜಾಗ ಲಭ್ಯವಾಗಲಿದೆ. ಇದರಂತೆ ನ್ಯಾನೋ ಎಎಂಟಿ ವರ್ಷನ್ ನಲ್ಲಿ 110 ಲೀಟರ್ ಬೂಟ್ ಸ್ಪೇಸ್ ಒದಗಿಸಲಾಗುವುದು.

03. ಎಎಂಟಿ

03. ಎಎಂಟಿ

ಮಾರುತಿ ಸೆಲೆರಿಯೊ, ಆಲ್ಟೊ ಕೆ10 ಮತ್ತು ಟಾಟಾ ಜೆಸ್ಟ್ ಡೀಸೆಲ್ ಕಾರಿನ ಬಳಿಕ ಇಟಲಿಯ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯೇ ಟಾಟಾ ನ್ಯಾನೋಗೆ ಅತಿ ಸರಳವಾದ ಎಎಂಟಿ ಗೇರ್ ಬಾಕ್ಸ್ ಒದಗಿಸಲಿದೆ. ಅಲ್ಲದೆ ಅತಿ ಅಗ್ಗದ ಎಎಂಟಿ ಕಾರೆಂಬ ಹೆಗ್ಗಳಿಕೆಗೂ ಪಾತ್ರವಾದಲಿ. ಇದು ವಾಹನಗಳಿಂದ ಕಿಕ್ಕಿರಿದು ತುಂಬಿದ ನಗರ ಪ್ರದೇಶದ ಚಾಲನೆಯನ್ನು ಇನ್ನಷ್ಟು ಸುಲಭಗೊಳಿಸಲಿದ್ದು, ಮಹಿಳೆಯರಿಗೆ ಹೆಚ್ಚಿನ ಅನುಕೂಲವನ್ನುಂಟು ಮಾಡಲಿದೆ.

02. ಎಂಜಿನ್

02. ಎಂಜಿನ್

ಹಾಗಿದ್ದರೂ ಎಂಜಿನ್ ಸ್ಥಾನಪಲ್ಲಟವಾಗಿಲ್ಲ. ಇದು ಹಿಂದುಗಡೆಯೇ ಲಗತ್ತಿಸಲಾದ 624 ಸಿಸಿ ಎಂಪಿಎಫ್ಐ ನೈಸರ್ಗಿಕ ಚೋಷಿತ ಪೆಟ್ರೋಲ್ ಎಂಜಿನ್ ಪಡೆಯಲಿದ್ದು, 37.5 ಅಶ್ವಶಕ್ತಿ (51 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

01. ವೆರಿಯಂಟ್, ಬೆಲೆ

01. ವೆರಿಯಂಟ್, ಬೆಲೆ

ಒಟ್ಟು ನಾಲ್ಕು ವೆರಿಯಂಟ್ ಗಳಲ್ಲಿ ನೆಕ್ಸ್ಟ್ ಜನರೇಷನ್ ನ್ಯಾನೋ ಕಾರು ಲಭ್ಯವಾಗಲಿದೆ. ಅವುಗಳೆಂದರೆ ಎಕ್ಸ್ ಇ, ಎಕ್ಸ್ ಎಂ, ಎಕ್ಸ್ ಟಿ ಮತ್ತು ಎಕ್ಸ್ ಟಿಎ. ಈ ಪೈಕಿ ಟಾಪ್ ಎಂಡ್ ಎಕ್ಸ್ ಟಿಎ ಮಾದರಿಯಲ್ಲಿ ಮಾತ್ರ ಎಎಂಟಿ ಸೌಲಭ್ಯ ಸಿಗಲಿದೆ. ಹೊಸ ಸ್ಟೀರಿಂಗ್ ವೀಲ್, ದೊಡ್ಡ ಇಂಧನ ಟ್ಯಾಂಕ್, ಆಡಿಯೋ ಸಿಸ್ಟಂ, ನಾಲ್ಕು ಸ್ಪೀಕರ್, ಬ್ಲೂಟೂತ್, ಆಕ್ಸ್-ಇನ್ ಮತ್ತು ಯುಎಸ್ ಬಿಗಳು ಇತರ ಪ್ರಮುಖ ವೈಶಿಷ್ಟ್ಯಗಳಾಗಿದ್ದು, ದೆಹಲಿ ಎಕ್ಸ್ ಶೋ 2.80 ಲಕ್ಷ ರು.ಗಳಿಂದ 3.20 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುವ ಸಾಧ್ಯತೆಯಿದೆ.

Most Read Articles

Kannada
English summary
Indian automobile manufacturer, Tata Motors is set to launch its Nano GenX Easy Shift in May, 2015. They have now revealed the images of their new model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X