ನವ ವಧುವಿನಂತೆ ಸಿಂಗಾರಗೊಂಡ ನ್ಯಾನೋ ಜೆನ್ ಎಕ್ಸ್

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಇತ್ತೀಚೆಗಷ್ಟೇ ಹೊಚ್ಚ ಹೊಸ ನ್ಯಾನೋ ಜೆನ್ ಎಕ್ಸ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಈಗ ಇದೇ ಕಾರನ್ನು ಟಾಟಾ ಸಂಸ್ಥೆಯು ನವ ವಧುವಿನಂತೆ ಸಿಂಗಾರಗೊಳಿಸಿದೆ.

ಹೌದು, ಸಂಪೂರ್ಣ ಹೆಚ್ಚುವರಿ ಆಕ್ಸೆಸರಿಗಳೊಂದಿಗೆ ನ್ಯಾನೋ ಜೆನ್ ಎಕ್ಸ್ ಮಾದರಿಯನ್ನು ಸಿಂಗಾರಗೊಳಿಸಲಾಗಿದೆ. ಇಲ್ಲಿ ಹೊಸ ಬಣ್ಣದ ಆಯ್ಕೆಯೊಂದಿಗೆ ನೂತನ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ. ಹಾಗಿದ್ದರೆ ಬನ್ನಿ ನೋಡೋಣ.

ನವ ವಧುವಿನಂತೆ ಸಿಂಗಾರಗೊಂಡ ನ್ಯಾನೋ ಜೆನ್ ಎಕ್ಸ್

ಇಲ್ಲಿದೆ ನೋಡಿ (ಚಿತ್ರದಲ್ಲಿ) ಸಂಪೂರ್ಣ ಆಕ್ಸೆಸರಿ ಭಾಗಗಳಿಂದ ಸಿಂಗಾರಗೊಂಡಿರುವ ನ್ಯಾನೋ ಜೆನ್ ಎಕ್ಸ್. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೊಸ ಜೆನ್ ಎಕ್ಸ್ ಎಎಂಟಿ ಅಥವಾ ಈಸಿ ಶಿಫ್ಟ್ ಕಾರಿನ ಪ್ರಮುಖ ವೈಶಿಷ್ಟ್ಯವಾಗಿದೆ.

ನವ ವಧುವಿನಂತೆ ಸಿಂಗಾರಗೊಂಡ ನ್ಯಾನೋ ಜೆನ್ ಎಕ್ಸ್

ಟಾಟಾ ನ್ಯಾನೋ ಜೆನ್ ಎಕ್ಸ್ ಮಾದರಿಯು ಹೊಸ ಸಾಂಗ್ರಿಯಾ ರೆಡ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಅಂತೆಯೇ ಹೊಸ ನ್ಯಾನೋ ಸಂಪೂರ್ಣ ಬಾಡಿ ಕಿಟ್ ನೊಂದಿಗೆ ಲಭ್ಯವಿರುತ್ತದೆ.

ನವ ವಧುವಿನಂತೆ ಸಿಂಗಾರಗೊಂಡ ನ್ಯಾನೋ ಜೆನ್ ಎಕ್ಸ್

ಇದಕ್ಕಾಗಿ ನೀವು ಹೆಚ್ಚುವರಿ 19,900 ರುಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದು ಕಾರಿಗೆ ಹೆಚ್ಚಿನ ಕ್ರೀಡಾತ್ಮಕ ವಿನ್ಯಾಸ ನೀಡುತ್ತದೆ.

ನವ ವಧುವಿನಂತೆ ಸಿಂಗಾರಗೊಂಡ ನ್ಯಾನೋ ಜೆನ್ ಎಕ್ಸ್

ಗ್ರಾಹಕರು ಬೇಕಿದ್ದರೆ ಹಿಂದುಗಡೆ ಸ್ಪಾಯ್ಲರ್ ಜೋಡಣೆ ಮಾಡಿಕೊಳ್ಳಬಹುದಾಗಿದೆ. ಇದು 5,695 ರು. ಗಳಷ್ಟು ದುಬಾರಿಯೆನಿಸಲಿದೆ. ಇನ್ನು ಇದೇ ಮೊದಲ ಬಾರಿಗೆ ಸನ್ ರೂಫ್ ಸೇವೆಯನ್ನು ನೀಡಲಾಗುತ್ತದೆ. ಇದಕ್ಕಾಗಿ 15,775 ರು.ಗಳಷ್ಟು ಖರ್ಚು ತಗುಲಲಿದೆ.

ನವ ವಧುವಿನಂತೆ ಸಿಂಗಾರಗೊಂಡ ನ್ಯಾನೋ ಜೆನ್ ಎಕ್ಸ್

ಮಲ್ಟಿ ಸ್ಪೋಕ್ ಅಲಾಯ್ ವೀಲ್ ಮಗದೊಂದು ಆಕರ್ಷಣೆಯಾಗಿರಲಿದೆ. ಈ ನೂತನ ಆಯ್ಕೆಗಾಗಿ 12,000 ರು. ಖರ್ಚು ಮಾಡಬೇಕಾಗುತ್ತದೆ.

ನವ ವಧುವಿನಂತೆ ಸಿಂಗಾರಗೊಂಡ ನ್ಯಾನೋ ಜೆನ್ ಎಕ್ಸ್

ಇನ್ನು ನ್ಯಾನೋ ಜೆನ್ ಎಕ್ಸ್ ದೇಹದಲ್ಲಿ ವಿಶೇಷ ಗ್ರಾಫಿಕ್ಸ್ ಅಥವಾ ಕ್ರೀಡಾತ್ಮಕ ರೇಖೆಗಳನ್ನು ಕಾಣಬಹುದಾಗಿದೆ. ಇದು 1850 ರು.ಗಳಷ್ಟು ದುಬಾರಿಯೆನಿಸಲಿದೆ.

ನವ ವಧುವಿನಂತೆ ಸಿಂಗಾರಗೊಂಡ ನ್ಯಾನೋ ಜೆನ್ ಎಕ್ಸ್

ಅಂತೆಯೇ ನ್ಯಾನೋದಲ್ಲಿ ರಿಮೋಟ್ ನಿಯಂತ್ರಿತ ಬಾಗಿಲು ತೆರೆಯಲು ಅವಕಾಶ ಕೊಡಲಾಗಿದ್ದು, ಇದು 2,700 ರು.ಗಳಷ್ಟು ಬೆಲೆ ಬಾಳಲಿದೆ. ಇನ್ನು ಸೀಟು ಕವರ್, ಕುಷನ್, ಕಾರ್ಪೆಟ್ 5,400 ರು.ಗಳಷ್ಟು ದುಬಾರಿಯಾಗಲಿದೆ.

ನವ ವಧುವಿನಂತೆ ಸಿಂಗಾರಗೊಂಡ ನ್ಯಾನೋ ಜೆನ್ ಎಕ್ಸ್

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಗ್ರಾಹಕರು ಬೇಕಿದ್ದರೆ ಹೆಚ್ಚುವರಿ 9,500 ರು. ಖರ್ಚು ಮಾಡಿ ನೇವಿಗೇಷನ್ ಸಿಸ್ಟಂ ಖರೀದಿ ಮಾಡಬಹುದಾಗಿದೆ. ಇನ್ನು ವ್ಯಾಕ್ಯೂಂ ಕ್ಲೀನರ್ ಹಾಗೂ ಏರ್ ಫ್ರೆಶ್ನರ್ ಅನುಕ್ರಮವಾಗಿ 1,995 ಹಾಗೂ 90 ರು.ಗಳಷ್ಟು ದುಬಾರಿಯಾಗಲಿದೆ.

Most Read Articles

Kannada
English summary
Tata launched its Nano GenX in India on 19th May, 2015. They have provided this new model with new features and updates. The designers have also provided new colours and design philosophy.
Story first published: Saturday, May 23, 2015, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X