ನ್ಯಾನೋ ಸೆಮಿ ಆಟೋಮ್ಯಾಟಿಕ್ ಕಾರಿಗೆ ಏಕೆ ಪ್ರಾಮುಖ್ಯತೆ ಕೊಡಬೇಕು?

By Nagaraja

ವಾಹನೋದ್ಯಮದಿಂದ ಬಂದಿರುವ ತಾಜಾ ಮಾಹಿತಿಯಂತೆ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ಮಾದರಿಯಾಗಿರುವ ನ್ಯಾನೋ ಟ್ವಿಸ್ಟ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ ಎಎಂಟಿ (ಸೆಮಿ ಆಟೋಮ್ಯಾಟಿಕ್) ಮಾದರಿಯು ಮುಂದಿನ 2015 ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಇದರೊಂದಿಗೆ ವಾಹನ ತಜ್ಞರ ಜೊತೆ ಜೊತೆಗೆ ವಾಹನ ಪ್ರೇಮಿಗಳಲ್ಲೂ ಬಹಳಷ್ಟು ಕುತೂಹಲ ಮೂಡಿದೆ. ಅಷ್ಟಕ್ಕೂ ನೀವು ಏಕೆ ನ್ಯಾನೋ ಟ್ವಿಸ್ಟ್ ಎಎಂಟಿ ಮಾದರಿಗೆ ಪ್ರಾಮುಖ್ಯತೆ ಕೊಡಬೇಕು. ಬನ್ನಿ ಒಂದು ರೌಂಡಪ್ ನೋಡಿ ಬರೋಣವೇ...

10. ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸಮಿಷನ್ (ಎಎಂಟಿ)

10. ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸಮಿಷನ್ (ಎಎಂಟಿ)

ಟಾಟಾದಲ್ಲಿ ಆಳವಡಿಸಲಾಗುವ ನೂತನ ಎಎಂಟಿ ತಂತ್ರಜ್ಞಾನವು ದೇಶದ ಸಣ್ಣ ಕಾರು ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಈಗಾಗಲೇ ಮಾರುತಿ ಸುಜುಕಿ ಸೆಲೆರಿಯೊ ಹಾಗೂ ಆಲ್ಟೊ ಕೆ10 ಮಾದರಿಗಳಲ್ಲಿ ನಾವಿದನ್ನು ನೋಡಿರುತ್ತೇವೆ. ಇಂತಹದೊಂದು ತಂತ್ರಜ್ಞಾನ ಟಾಟಾ ಜೆಸ್ಟ್ ಡೀಸೆಲ್ ಕಾರಿನಲ್ಲೂ ಬಳಕೆಯಾಗಿದೆ. ಆದರೆ ಅತಿ ಕಡಿಮೆ ದರಗಳಲ್ಲಿ ಬರುತ್ತಿರುವ ಎಎಂಟಿ ಮಾದರಿ ಇದಾಗಿರಲಿದೆ.

09. ಮ್ಯಾಗ್ನೆಟ್ಟಿ ಮರೆಲ್ಲಿ

09. ಮ್ಯಾಗ್ನೆಟ್ಟಿ ಮರೆಲ್ಲಿ

ಇಟಲಿಯ ಮ್ಯಾಗ್ನೆಟ್ಟಿ ಮರೆಲ್ಲಿ (Magneti Marelli) ಸಂಸ್ಥೆಯು ಟಾಟಾ ಸಂಸ್ಥೆಗೆ ಎಎಂಟಿ ತಂತ್ರಜ್ಞಾನವನ್ನು ಒದಗಿಸಲಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ ಪ್ರಸ್ತುತ ಸಂಸ್ಥೆಯೇ ಮಾರುತಿ ಕಾರುಗಳಿಗೂ ಇದೇ ತಂತ್ರಜ್ಞಾನವನ್ನು ಹಂಚಿಕೊಂಡಿದೆ. ಅಲ್ಲದೆ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ತನ್ನ ಈ ನೂತನ ತಂತ್ರಜ್ಞಾನಕ್ಕಾಗಿ "ಟೆಕ್ನಾಲಜಿ ಆಫ್ ದಿ ಇಯರ್ 2015" ಪ್ರಶಸ್ತಿಯನ್ನು ಬಾಚಿಕೊಂಡಿದೆ.

 08. ಎಂಜಿನ್

08. ಎಂಜಿನ್

ಟಾಟಾ ನ್ಯಾನೋ ಟ್ವಿಸ್ಟ್ ಎಎಂಟಿ ಕಾರಿನಲ್ಲಿ 624ಸಿಸಿ ಟ್ವಿನ್ ಸಿಲಿಂಡರ್ ಎಂಪಿಎಫ್ ಐ ಎಂಜಿನ್ ಬಳಕೆಯಾಗಲಿದೆ. ಇದು 37 ಅಶ್ವಶಕ್ತಿ (51 ತಿರುಗುಬಲ) ಉತ್ಪಾದಸಿಲಿದೆ. ಹಾಗೆಯೇ ಈಗಾಗಲೇ ತಿಳಿಸಿರುಂತೆಯೇ 5 ಸ್ಪೀಡ್ ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದರಲ್ಲಿರಲಿದೆ.

07. ಅಗ್ಗದ ಎಎಂಟಿ ಕಾರು

07. ಅಗ್ಗದ ಎಎಂಟಿ ಕಾರು

ಸಾಮಾನ್ಯ ನ್ಯಾನೋ ಕಾರಿಗಿಂತಲೂ ದುಬಾರಿಯೆನಿಸಿದರೂ ದೇಶದಲ್ಲಿ ಲಭ್ಯವಾಗಲಿರುವ ಅತಿ ಅಗ್ಗದ ಎಎಂಟಿ ಕಾರೆಂಬ ಗೌರವಕ್ಕೆ ಟ್ವಿಸ್ಟ್ ಪಾತ್ರವಾಗಲಿದ್ದು, 2.5 ಲಕ್ಷ ರು.ಗಳಿಂದ 2.65 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುವ ಸಾಧ್ಯತೆಯಿದೆ.

06. ಟಾಟಾದ ಮೊದಲ ಪೆಟ್ರೋಲ್ ಎಎಂಟಿ ಮಾದರಿ

06. ಟಾಟಾದ ಮೊದಲ ಪೆಟ್ರೋಲ್ ಎಎಂಟಿ ಮಾದರಿ

ದೇಶದಲ್ಲಿ ಟಾಟಾ ಭವಿಷ್ಯವನ್ನು ನ್ಯಾನೋ ಟ್ವಿಸ್ಟ್ ಎಎಂಟಿ ಮಾದರಿಯು ನಿರ್ಧರಿಸಲಿದೆ. ಯಾಕೆಂದರೆ ಇದು ಸಂಸ್ಥೆಯಿಂದ ಆಗಮನವಾಗುತ್ತಿರುವ ಮೊದಲ ಪೆಟ್ರೋಲ್ ಎಎಂಟಿ ಮಾದರಿಯಾಗಲಿದೆ. ಇದರ ಯಶಸ್ಸಿನ ಆಧಾರದಲ್ಲಿ ಟಾಟಾದ ಭವಿಷ್ಯ ನಿರ್ಧಾರವಾಗಲಿದೆ.

05. ಹಿಂಬದಿಯಲ್ಲಿ ತೆರೆಯಬಹುದಾದ ಬಾಗಿಲು

05. ಹಿಂಬದಿಯಲ್ಲಿ ತೆರೆಯಬಹುದಾದ ಬಾಗಿಲು

ಟಾಟಾ ನ್ಯಾನೋ ಟ್ವಿಸ್ಟ್ ಎಎಂಟಿ ಮಾದರಿಯಲ್ಲಿ ಹಿಂಬದಿಯಲ್ಲಿ ಡೋರ್ ವ್ಯವಸ್ಥೆ ಕಂಡುಬರಲಿದೆ. ಇದರೊಂದಿಗೆ ಬೂಟ್ ಜಾಗವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗಲಿದೆ.

04. ಮಹಿಳೆಯರಿಗೆ ಅತ್ಯುತ್ತಮ ಆಯ್ಕೆ

04. ಮಹಿಳೆಯರಿಗೆ ಅತ್ಯುತ್ತಮ ಆಯ್ಕೆ

ನೂತನ ಟಾಟಾ ಸೆಮಿ ಆಟೋಮ್ಯಾಟಿಕ್ ಕಾರು ಮಹಿಳಾ ಚಾಲಕಿಯರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಸಾಮಾನ್ಯವಾಗಿ ದೊಡ್ಡ ಗಾತ್ರದ ಕಾರುಗಳನ್ನು ನಿರ್ವಹಿಸಲು ಮಹಿಳೆಯರು ಸಂಕಷ್ಟಪಡುತ್ತಾರೆ. ಅಲ್ಲದೆ ಕ್ಲಚ್ ನಿರ್ವಹಣೆ ವೇಳೆ ತೊಂದರೆ ಅನುಭವಿಸುತ್ತಾರೆ. ಇಂತಹದೊಂದು ಸಮಸ್ಯೆಯು ನಿವಾರಣೆಯಾಗಲಿದೆ.

03. ಸಿಟಿ ರೈಡ್

03. ಸಿಟಿ ರೈಡ್

ಇನ್ನು ನಗರ ಪ್ರದೇಶದ ವಿಪರೀತ ವಾಹನ ದಟ್ಟಣೆಯಲ್ಲಿ ಹಾಗೂ ಕಿಕ್ಕಿರಿದ ಪಾರ್ಕಿಂಗ್ ಸಮಸ್ಯೆಯಿಂದ ಪಾರಾಗಲು ನ್ಯಾನೋ ಟ್ವಿಸ್ಟ್ ಎಎಂಟಿ ಕಾರು ಸೂಕ್ತ ಆಯ್ಕೆಯಾಗಿರಲಿದೆ.

02. ಮೈಲೇಜ್

02. ಮೈಲೇಜ್

ಇಷ್ಟೆಲ್ಲ ಆದ ಮೇಲೆ ಸೆಮಿ ಆಟೋಮ್ಯಾಟಿಕ್ ಆಗಿರುವ ಹೊರತಾಗಿಯೂ ಮೈಲೇಜ್ ನಲ್ಲಿ ಯಾವುದೇ ಕಡಿತವುಂಟಾಗುವುದಿಲ್ಲ ಎಂಬುದು ಅಷ್ಟೇ ಶ್ಲಾಘನೀಯ ಸಂಗತಿ.

01. ಇತರೆ ವೈಶಿಷ್ಟ್ಯಗಳು

01. ಇತರೆ ವೈಶಿಷ್ಟ್ಯಗಳು

ಇನ್ನು ತೆರೆಯಬಹುದಾದ ಬೂಟ್ ಜೊತೆಗೆ ಹನಿಕೊಂಬ್ ಗ್ರಿಲ್, ಸ್ಪೋಕ್ಡ್ ಹೆಡ್ ಲ್ಯಾಂಪ್ ಹಾಗೂ ಆಕರ್ಷಕ ಮೈಬಣ್ಣವನ್ನು ಹೊಸ ಟ್ವಿಸ್ಟ್ ಕಾರು ಪಡೆಯಲಿದೆ. ಇನ್ನು ಕಾರಿನೊಳಗೂ ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ ಹಾಗೂ ಹೊಸತಾದ ಹೋದಿಕೆ ಕಂಡುಬರಲಿದೆ. ಎಲ್ಲದಕ್ಕೂ ಡ್ರೈವ್ ಸ್ಪಾರ್ಕ್ ಓದುತ್ತಿರಿ.

Most Read Articles

Kannada
English summary
The Nano by Tata Motors has gone through several updates, it has also been tested in several avatars that could boost sales. They have now decided to provide it with an AMT option.
Story first published: Friday, April 17, 2015, 9:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X