ಆಲ್ಟೊ 800 vs ನ್ಯಾನೋ; ಒಂದು ಸಿಂಪಲ್ ಗೈಡ್

By Nagaraja

ದೇಶದ ಎಂಟ್ರಿ ಲೆವೆಲ್ ಮಾರುಕಟ್ಟೆಯನ್ನು ಮಾರುತಿ ಕಾರುಗಳು ಆಕ್ರಮಿಸಿಕೊಂಡಿದೆಯೆಂದರೆ ತಪ್ಪಾಗಲಾರದು. ಕಳೆದ ಮೂರು ದಶಕಗಳಿಂದ ದೇಶದ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಮಾರಾಟವಾದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾರುತಿ ಆಲ್ಟೊ ಸವಾಲೊಡ್ಡಲು ನ್ಯಾನೋಗೆ ಸಾಧ್ಯವೇ? ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸುತ್ತದೆ.

ನ್ಯಾನೋ ಡಿಸೈನ್ ಚೆನ್ನಾಗಿಲ್ಲ ಹಾಗೆ, ಹೀಗೆ ಅನೇಕ ಅಂಶಗಳನ್ನು ಬೊಟ್ಟು ಮಾಡಿ ಹೇಳಬಹುದು. ಆದರೂ ಗ್ರಾಹಕರ ನಿರೀಕ್ಷಿತ ಬಜೆಟ್ ನಲ್ಲೇ ಒಂದು ಉತ್ತಮ ಕಾರನ್ನು ತಲುಪುವಲ್ಲಿ ಟಾಟಾ ಸಂಸ್ಥೆ ಯಶಸ್ವಿಯಾಗಿರುವುದು ಒಪ್ಪಲೇಬೇಕಾದ ಸತ್ಯ. ಇದರಂತೆ ಒಂದು ಸುಲಭ ಮಾಹಿತಿಯ ಕಣಜದೊಂದಿಗೆ ನಿಮ್ಮ ನೆಚ್ಚಿನ ಕನ್ನಡ ಡ್ರೈವ್ ಸ್ಪಾರ್ಕ್ ಮುಂದೆ ಬಂದಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ)

ಟಾಟಾ ನ್ಯಾನೋ: 2.04 ಲಕ್ಷ ರು.ಗಳಿಂದ

ಮಾರುತಿ ಆಲ್ಟೊ 800: 2.46 ಲಕ್ಷ ರು.ಗಳಿಂದ

ನ್ಯಾನೋ ಬೆಂಗಳೂರು ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

ಆಲ್ಟೊ 800 ಬೆಂಗಳೂರು ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

ವಿನ್ಯಾಸ - ಟಾಟಾ ನ್ಯಾನೋ

ವಿನ್ಯಾಸ - ಟಾಟಾ ನ್ಯಾನೋ

ನಿರ್ಮಾಣ ವೆಚ್ಚ ಆದಷ್ಟು ಕಡಿಮೆ ಮಾಡುವುದು ಟಾಟಾ ಸಂಸ್ಥೆಯ ಇರಾದೆಯಾಗಿತ್ತು. ಇದರಂತೆ ಸಾಮಾನ್ಯಗಿಂತ ವಿರುದ್ಧವಾಗಿ ಮುಂಭಾಗದಲ್ಲೇ ಬೊನೆಟ್ ಒಳಗಡೆ ಇಂಧನ ಟ್ಯಾಂಕ್ ಹಾಗೂ ಹೆಚ್ಚುವರಿ ಚಕ್ರಗಳನ್ನು ಒದಗಿಸಿದೆ. ಇನ್ನು ಎಂಜಿನ್ ಹಿಂದುಗಡೆ ಕಂಡುಬರಲಿದೆ. ಅಲ್ಲದೆ ಕಾರಿನೊಳಗೂ ಹೆಚ್ಚಿನ ಸ್ಥಳಾವಕಾಶವನ್ನು ಕಾಯ್ದುಕೊಳ್ಳಲಾಗಿದೆ.

ವಿನ್ಯಾಸ - ಆಲ್ಟೊ 800

ವಿನ್ಯಾಸ - ಆಲ್ಟೊ 800

ಇನ್ನೊಂದೆಡೆ ಸಾಂಪ್ರಾದಾಯಿಕ ವಿನ್ಯಾಸವನ್ನು ಹೊಂದಿರುವ ಆಲ್ಟೊ 800, ಐದು ಬಾಗಿಲುಗಳ ಹ್ಯಾಚ್ ಬ್ಯಾಕ್ ಕಾರಾಗಿದೆ. ಇನ್ನು ಸಾಮಾನ್ಯದಂತೆ ಕಾರಿನ ಮುಂಭಾಗದಲ್ಲಿ ಎಂಜಿನ್ ಇರಲಿದೆ.

ಎಂಜಿನ್ ತಾಂತ್ರಿಕತೆ - ಟಾಟಾ ನ್ಯಾನೋ

ಎಂಜಿನ್ ತಾಂತ್ರಿಕತೆ - ಟಾಟಾ ನ್ಯಾನೋ

ಎಂಜಿನ್: 624 ಸಿಸಿ, ಟು ಸಿಲಿಂಡರ್, ಲಿಕ್ವಿಡ್ ಕೂಲ್ಡ್

ಅಶ್ವಶಕ್ತಿ: 37

ತಿರುಗುಬಲ: 51

ಗೇರ್ ಬಾಕ್ಸ್: ಫೋರ್ ಸ್ಪೀಡ್ ಮ್ಯಾನುವಲ್

ಭಾರ: 615 ಕೆ.ಜಿ

ಗ್ರೌಂಡ್ ಕ್ಲಿಯರನ್ಸ್: 180 ಎಂಎಂ

ಚಕ್ರ: 12 ಇಂಚುಗಳ ಟ್ಯೂಬ್ ಲೆಸ್ ವೀಲ್

ಮೈಲೇಜ್: 15.4 kpl

ಎಂಜಿನ್ ತಾಂತ್ರಿಕತೆ - ಆಲ್ಟೊ 800

ಎಂಜಿನ್ ತಾಂತ್ರಿಕತೆ - ಆಲ್ಟೊ 800

ಎಂಜಿನ್: 796 ಸಿಸಿ, ತ್ರಿ ಸಿಲಿಂಡರ್, ಲಿಕ್ವಿಡ್ ಕೂಲ್ಡ್

ಅಶ್ವಶಕ್ತಿ: 48

ತಿರುಗುಬಲ: 69

ಗೇರ್ ಬಾಕ್ಸ್: ಫೈವ್ ಸ್ಪೀಡ್ ಮ್ಯಾನುವಲ್

ಭಾರ: 695 ಕೆ.ಜಿ

ಗ್ರೌಂಡ್ ಕ್ಲಿಯರನ್ಸ್: 160 ಎಂಎಂ

ಚಕ್ರ: 12 ಇಂಚುಗಳ ಟ್ಯೂಬ್ ಲೆಸ್ ವೀಲ್

ಮೈಲೇಜ್: 22.74 kpl

ವೈಶಿಷ್ಟ್ಯಗಳು - ನ್ಯಾನೋ

ವೈಶಿಷ್ಟ್ಯಗಳು - ನ್ಯಾನೋ

ಸೆಂಟ್ರಲ್ ಲಾಕಿಂಗ್, ಎಸಿ, ಡಿಸ್ಟಾನ್ಸ್ ಟು ಎಮ್ಟಿ, ಇಂಧನ ಸರಾಸರಿ ಬಳಕೆ ಮೀಟರ್, ಕಡಿಮೆ ಇಂಧನ ಎಚ್ಚರಿಕೆ, ಎಂಪಿ3, ಫಾಗ್ ಲ್ಯಾಂಪ್, 4 ಸ್ಪೀಕರ್ ಮತ್ತು ಮುಂಭಾಗದಲ್ಲಿ ಪವರ್ ವಿಂಡೋ ಕಂಡುಬರಲಿದೆ.

ವೈಶಿಷ್ಟ್ಯಗಳು - ಆಲ್ಟೊ 800

ವೈಶಿಷ್ಟ್ಯಗಳು - ಆಲ್ಟೊ 800

ನ್ಯಾನೋಗೆ ಸಮಾನವಾದ ವೈಶಿಷ್ಟ್ಯಗಳನ್ನು ಹೊಂದಿರುವ ಆಲ್ಟೊದಲ್ಲಿ ಡಿಸ್ಟಾನ್ಸ್ ಟು ಎಮ್ಟಿ ಮತ್ತು ಇಂಧನ ಸರಾಸರಿ ಬಳಕೆ ಡಿಸ್ ಪ್ಲೇಯ ಕೊರತೆ ಕಾಡಲಿದೆ. ಆದರೆ ವಿದ್ಯುನ್ಮಾನವಾಗಿ ಹೊಂದಾಣಿಸಬದುಹದಾದ ಔಟ್ ಸೈಡ್ ವ್ಯೂ ರಿಯರ್ ಮಿರರ್, 2 ಡಿನ್ ಎಂಪಿ3 ಪ್ಲೇಯರ್, ಕೀಲೆಸ್ ಸೆಂಟ್ರಲ್ ಲಾಕಿಂಗ್, 2 ಸ್ಪೀಕರ್ ಮತ್ತು ಸೀಟು ಪಾಕೆಟ್ ನಿಂದ ಕೂಡಿರಲಿದೆ.

ಸುರಕ್ಷತೆ

ಸುರಕ್ಷತೆ

ಸುರಕ್ಷತೆ ವಿಚಾರ ಬಂದಾಗ ನ್ಯಾನೋ ಹಿಂದಿಕ್ಕುವಲ್ಲಿ ಆಲ್ಟೊ 800 ಯಶಸ್ವಿಯಾಗಿದೆ. ಆಲ್ಟೊ 800 ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಏರ್ ಬ್ಯಾಗ್ ಸೌಲಭ್ಯಗಳಿರಲಿದೆ. ಅದೇ ಹೊತ್ತಿಗೆ ನ್ಯಾನೋದಲ್ಲಿ ಇಂತಹದೊಂದು ಸೌಲಭ್ಯದ ಅಲಭ್ಯತೆ ಕಾಡಲಿದೆ. ಇನ್ನು ಎರಡು ಕಾರಿನಲ್ಲೂ ಸೀಟು ಬೆಲ್ಟ್ ಗಳಿದ್ದರೂ ಸೀಟ್ ಬೆಲ್ಟ್ ವಾರ್ನಿಂಗ್ ಲೈಟ್ ನ ಕೊರತೆ ಕಾಡಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ನೋಡಲು ಚಿಕ್ಕದಾಗಿದರೂ ಆಲ್ಟೊ 800 ಮಾದರಿಗೆ ಹೋಲಿಸಿದಾಗ ನ್ಯಾನೋ ಕಾರಿನಲ್ಲಿ ಹೆಚ್ಚಿನ ಸ್ಥಳಾವಕಾಶ ಕಂಡುಬರಲಿದೆ. ಆದರೆ ಕಾರ್ಯನಿರ್ವಹಿಸಬಹುದಾದ ಬೂಟ್ ಸ್ಪೇಸ್ ಮಾರುತಿಗೆ ಪ್ಲಸ್ ಪಾಯಿಂಟ್ ಆಗಿರಲಿದೆ. ಇನ್ನು ತ್ರಿ ಸಿಲಿಂಡರ್ ಎಂಜಿನ್ ಸಹ ಅತ್ಯುತ್ತಮ ಚಾಲನೆಗೆ ಸಹಕಾರಿಯಾಗಲಿದೆ. ಒಟ್ಟಿನಲ್ಲಿ ನ್ಯಾನೋಗಿಂತಲೂ ಸ್ವಲ್ಪ ದುಬಾರಿಯೆನಿಸಿದರೂ ದೇಶದ ಜನಸಾಮಾನ್ಯ ಎಂಬ ಬಿರುದನ್ನು ಆಲ್ಟೊ ಉಳಿಸಿಕೊಂಡಿದೆ.

ನಿಮ್ಮ ಅಭಿಮತ

ನಿಮ್ಮ ಅಭಿಮತ

ಕಳೆದ ಹಲವಾರು ವರ್ಷಗಳಿಂದ ದೇಶದ ಅಗ್ರ ಮಾರಾಟದ ಕಾರೆಂಬ ಪಟ್ಟವನ್ನು ಮಾರುತಿ ಆಲ್ಟೊ ಆಲಂಕರಿಸಿಕೊಂಡಿದೆ. ಹಾಗಿರುವಾಗ ನಿಮ್ಮ ಪ್ರಕಾರ ಭವಿಷ್ಯದಲ್ಲಾದರೂ ಆಲ್ಟೊವನ್ನು ಹಿಮ್ಮೆಟ್ಟಿಸಲು ಶಕ್ತಿ ನ್ಯಾನೋಗಿದೆಯೇ? ಈ ಬಗ್ಗೆ ಎರಡು ಕಾರುಗಳನ್ನು ರೇಟಿಂಗ್ ಮಾಡಿ.


Most Read Articles

Kannada
English summary
Tata Nano Vs Alto 800: The entry level segment of cars in India sees a mighty battle between two automotive giants in the country—Maruti Suzuki and Tata Motors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X