ಆಗಲೇ ಭಾರತ ಪ್ರವೇಶಿಸಬೇಕಾಗಿದ್ದ 10 ಜನಪ್ರಿಯ ಕಾರುಗಳು

By Nagaraja

ಇಡೀ ಜಗತ್ತಿನ ವಾಹನೋದ್ಯಮವನ್ನು ಪರಿಗಣಿಸಿದಾಗ ಭಾರತದ ಸ್ಥಾನ ಈಗಲೂ ವಾಹನಗಳ ಕೂಸು ಆಗಿದೆ. ಕೆಲವು ದಶಕಗಳ ಹಿಂದೆಯಷ್ಟೇ ದೇಶದಲ್ಲಿ ವಾಹನಗಳು ಹೆಚ್ಚೆಚ್ಚು ಜನಪ್ರಿಯವಾಗತೊಡಗಿದೆ. ಇನ್ನೊಂದೆಡೆ ವಿದೇಶಗಳಲ್ಲಿ ವಾಹನೋದ್ಯಮ ಹೇಳಲಾರದಷ್ಟು ಅಭಿವೃದ್ಧಿಯನ್ನು ಸಾಧಿಸಿದೆ.

ಉದಾಹರಣೆಗೆ ಭಾರತದಲ್ಲಿ ಈಗಲೂ ಎಂಟ್ರಿ ಲೆವೆಲ್ ಬಜೆಟ್ ಕಾರುಗಳು ರಾರಾಜಿಸುತ್ತದೆ. ಅದೇ ಹೊತ್ತಿಗೆ ವಿದೇಶಗಳಲ್ಲಿ ಐಷಾರಾಮಿ ಜೊತೆ ಜೊತೆಗೆ ಪರಿಸರ ಸ್ನೇಹಿ ವಾಹನಗಳ ಪ್ರವೇಶವಾಗುತ್ತಿದೆ. ಹಾಗಿರುವಾಗ ಆಗಲೇ ದೇಶ ಪ್ರವೇಶವಾಗಬೇಕಾಗಿದ್ದ ಕೆಲವು ಜನಪ್ರಿಯ ಮಾದರಿಗಳು ಯಾವುವು? ಒಂದು ವೇಳೆ ಇಂತಹ ಮಾದರಿಗಳು ದೇಶದ ರಸ್ತೆ ಪ್ರವೇಶಿಸಿದರೆ ಚೆನ್ನಾಗಿರುತ್ತಿತ್ತು ಎಂಬಭಾವನೆಯನ್ನುಂಟು ಮಾಡುವ ಮಾದರಿಗಳನ್ನು ಪಟ್ಟಿ ಮಾಡಿ ಕೊಡುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

10. ಹೋಂಡಾ ಸಿಆರ್-ವಿ ಡೀಸೆಲ್

10. ಹೋಂಡಾ ಸಿಆರ್-ವಿ ಡೀಸೆಲ್

ಪ್ರೀಮಿಯಂ ಕ್ರೀಡಾ ಬಳಕೆಯ ವಾಹನಗಳಲ್ಲಿ ಹೋಂಡಾ ಸಿಆರ್-ವಿ ಒಂದಾಗಿದೆ. ಹೋಂಡಾ ಸಿಆರ್-ವಿ ಈಗಾಗಲೇ ಭಾರತ ಪ್ರವೇಶಿಸಿದರೂ ಪೆಟ್ರೋಲ್ ಮಾದರಿಯಿಂದ ಭಾರತೀಯರು ವಂಚಿತವಾಗಿದ್ದಾರೆ. ಅಂದ ಹಾಗೆ ಹೋಂಡಾ ಸಿಆರ್-ವಿ ಭಾರತದಲ್ಲಿ 20 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ) ದುಬಾರಿಯೆನಿಸಿದೆ.

09. ನಿಸ್ಸಾನ್ ಕ್ಯಾಶ್ ಕಿ (Qashqai)

09. ನಿಸ್ಸಾನ್ ಕ್ಯಾಶ್ ಕಿ (Qashqai)

ಕ್ರಾಸೋವರ್ ಉಪಯುಕ್ತ ವಾಹನ ಬಯಸುವವರಿಗೆ ನಿಸ್ಸಾನ್ ಕ್ವಾಶ್ ಕಿ ಅತ್ಯುತ್ತಮ ಆಯ್ಕೆಯಾಗಿರಲಿದೆ. ಆದರೆ ಹಲವಾರು ಕಾರಣಾಂತರಗಳಿಂದಾಗಿ ಭಾರತ ಬಿಡುಗಡೆ ಮಾತ್ರ ವಿಳಂಬವಾಗುತ್ತಿದೆ. ಈ ಪ್ರೀಮಿಯಂ ಕಾರು ಮುಂದಿನ ದಿನಗಳಲ್ಲಿ ಭಾರತ ಪ್ರವೇಶಿಸಿದರೆ ಅಚ್ಚರಿಪಡಬೇಕಾಗಿಲ್ಲ.

08. ರೆನೊ ಕ್ಲಿಯೊ

08. ರೆನೊ ಕ್ಲಿಯೊ

ಅತಿ ಸುಂದರ ಕಾರುಗಳಲ್ಲಿ ರೆನೊ ಕ್ಲಿಯೊ ಒಂದಾಗಿದೆ. ಈ ಸೂಪರ್ ಮಿನಿ ಕಾರನ್ನು ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಉತ್ಪಾದಿಸುತ್ತಿದೆ. 1990ರ ದಶಕದಲ್ಲೇ ಮಾರುಕಟ್ಟೆ ಪ್ರವೇಶಿಸಿರುವ ರನೊ ಕ್ಲಿಯೊ 2012ರಲ್ಲಿ ನಾಲ್ಕನೇ ತಲೆಮಾರಿನ ರೂಪವನ್ನು ಪಡೆದುಕೊಂಡಿತ್ತು. ಆದರೆ ಭಾರತ ಪ್ರವೇಶ ಮಾತ್ರ ಇನ್ನು ಕನಸಾಗಿಯೇ ಉಳಿದಿದೆ.

07. ಆಡಿ ಎ1

07. ಆಡಿ ಎ1

ದೇಶದಲ್ಲಿರುವ ಇತರ ಐಷಾರಾಮಿ ಕಾರುಗಳನ್ನು ಹೋಲಿಸಿದಾಗ ಆಡಿ ಎ1 ಎಂಟ್ರಿ ಲೆವೆಲ್ ಲಗ್ಷುರಿ ಹ್ಯಾಚ್ ಬ್ಯಾಕ್ ಪೈಪೋಟಿಯಲ್ಲಿ ಆಡಿ ಹಿಂದೆ ಬಿದ್ದಿರುವುದಕ್ಕೆ ಇದು ಮಹತ್ತರ ಕಾರಣವಾಗಿದೆ. ಬೆಂಝ್ ಬಳಿ ಎ ಹಾಗೂ ಬಿ ಕ್ಲಾಸ್ ಶ್ರೇಣಿ ಮತ್ತು ಬಿಎಂಡಬ್ಲ್ಯು ಬಳಿ 1 ಸಿರೀಸ್ ಕಾರುಗಳಿರುವಾಗ ಆಡಿ ಬಳಿ ತಕ್ಕ ಉತ್ತರವಿಲ್ಲ. ಒಟ್ಟಿನಲ್ಲಿ ಅತ್ಯುತ್ತಮ ವಿನ್ಯಾಸದ ಆಡಿ ಎ1 ಕಾರು ಪಡೆಯುವುದರಿಂದ ಭಾರತೀಯರು ವಂಚಿತರಾಗಿದ್ದಾರೆ.

06. ಫೋಕ್ಸ್ ವ್ಯಾಗನ್ ಅಪ್

06. ಫೋಕ್ಸ್ ವ್ಯಾಗನ್ ಅಪ್

ಜಾಗತಿಕವಾಗಿ ಅತಿ ಹೆಚ್ಚು ಯಶಸ್ಸು ಕಂಡ ಹಾಗೂ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿರುವ ಫೋಕ್ಸ್ ವ್ಯಾಗನ್ ಅಪ್ ಇದುವರೆಗೆ ಭಾರತ ಪ್ರವೇಶ ಭಾಗ್ಯ ಕಂಡಿಲ್ಲ. ಒಂದು ವೇಳೆ ಫೋಕ್ಸ್ ವ್ಯಾಗನ್ ಅಪ್ ಭಾರತ ಪ್ರವೇಶಿಸಿದ್ದಲ್ಲಿ ಕಥೆ ಬೇರೆಯೇ ಆಗುತ್ತಿತ್ತೆನೋ?

05. ಜೀಪ್ ವ್ರ್ಯಾಂಗ್ಲರ್

05. ಜೀಪ್ ವ್ರ್ಯಾಂಗ್ಲರ್

ಭಾರತ ಬಿಡುಗಡೆಗೆ ಮೀನಾಮೇಷ ಎದುರಿಸುತ್ತಿರುವ ಮಾದರಿಗಳಲ್ಲಿ ಜೀಪ್ ವ್ರ್ಯಾಂಗ್ಲರ್ ಮುಂಚೂಣಿಯಲ್ಲಿದೆ. ಯಾಕೋ ಜೀಪ್ ಬ್ರಾಂಡ್ ಭಾರತ ಪ್ರವೇಶಕ್ಕೆ ಕಾಲ ಕೂಡಿ ಬರುತ್ತಿಲ್ಲ. ಒಟ್ಟಾರೆಯಾಗಿ ಜೀಪ್ ವ್ರ್ಯಾಂಗ್ಲರ್ ಭಾರತ ಪ್ರವೇಶ ವಿಳಂಬದಿಂದಾಗಿ ಅಭಿಮಾನಿಗಳಿದ್ದ ಉತ್ಸಾಹ ಸಹ ಕಡಿಮೆಯಾಗಿದೆ.

04. ಹ್ಯುಂಡೈ ಐಎಕ್ಸ್25

04. ಹ್ಯುಂಡೈ ಐಎಕ್ಸ್25

ಸ್ವಲ್ಪ ವಿಳಂಬವಾಗಿಯಾದರೂ ಹ್ಯುಂಡೈ ಐಎಕ್ಸ್25 ಭಾರತ ಪ್ರವೇಶ ಕೊನೆಗೂ ಖಚಿತಗೊಂಡಿದೆ. ಕ್ರೀಡಾ ಬಳಕೆಯ ವಾಹನಗಳ ವಿಭಾಗವು ದೇಶದಲ್ಲಿ ಶಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವುದರಿಂದ ಹ್ಯುಂಡೈ ಐಎಕ್ಸ್25 ಆಗಲೇ ಭಾರತ ಪ್ರವೇಶಿಸಿದ್ದರೆ ಚೆನ್ನಾಗಿರುತ್ತಿತು.

03. ಷೆವರ್ಲೆ ಟ್ರಾಕ್ಸ್

03. ಷೆವರ್ಲೆ ಟ್ರಾಕ್ಸ್

ಎರಡು ವರ್ಷಗಳ ಹಿಂದೆಯೇ ಷೆವರ್ಲೆ ಟ್ರಾಕ್ಸ್ ಭಾರತ ಪ್ರವೇಶಿಸುವ ಬಗ್ಗೆ ಊಹಾಪೋಹಗಳಿದ್ದವು. ಆದರೆ ಭಾರತ ಪ್ರವೇಶ ಮಾತ್ರ ಇನ್ನು ಕನಸಾಗಿಯೇ ಉಳಿದಿದೆ. ಆಗಲೇ ದೇಶದಲ್ಲಿ ತನ್ನ ಸಾನಿಧ್ಯವನ್ನು ಹೊಂದಿರುವ ಷೆವರ್ಲೆಗೆ ಟ್ರಾಕ್ಸ್ ಮಾದರಿಯನ್ನು ಭಾರತಕ್ಕೆ ತರುವುದು ದೊಡ್ಡ ವಿಷಯವೇನಲ್ಲ. ಆದರೆ ಸ್ಮರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ. ಇದು ಷೆವರ್ಲೆ ಟ್ರಾಕ್ಸ್ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ.

02. ಫೋರ್ಡ್ ಕಾ

02. ಫೋರ್ಡ್ ಕಾ

ನೆಕ್ಸ್ಟ್ ಜನರೇಷನ್ ಫಿಗೊ ಕಾನ್ಸೆಫ್ಟ್ ಫೋರ್ಡ್ ಕಾ ಮಾದರಿಯು ಈಗಾಗಲೇ ಬ್ರೆಜಿಲ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದು ಇಕೊಸ್ಪೋರ್ಟ್ ಕಾರಿನಲ್ಲಿರುವುದಕ್ಕೆ ಸಮಾನವಾದ ಹನಿಕಾಂಬ್ ಗ್ರಿಲ್ ಪಡೆದುಕೊಂಡಿದ್ದು, ಸಣ್ಣ ಕಾರು ಖರೀದಿಗಾರರಿಗೆ ಹೆಚ್ಚಿನ ಆಯ್ಕೆ ಒದಗಿಸುತ್ತಿದೆ. ಇನ್ನು ಫೋರ್ಡ್ ಕಾ ಭಾರತವನ್ನು ಪ್ರಸಕ್ತ ಸಾಲಿನಲ್ಲೇ ಪ್ರವೇಶಿಸುವ ಸಾಧ್ಯತೆಯಿದೆ.

01. ಟೊಯೊಟಾ ವೈಯೊಸ್

01. ಟೊಯೊಟಾ ವೈಯೊಸ್

ಟೊಯೊಟಾ ವೈಯೊಸ್ ಸೆಡಾನ್ ಕಾರು ಆಗಲೇ ಭಾರತ ಪ್ರವೇಶಿಸಿದರೆ ಚೆನ್ನಾಗಿರುತ್ತಿತ್ತು. ಇದು ಮಾರುತಿ ಸುಜುಕಿ ಸಿಯಾಝ್ ಹಾಗೂ ಹ್ಯುಂಡೈ ವೆರ್ನಾಗಳಂತಹ ಮಾದರಿಗಳನ್ನು ಖರೀದಿ ಮಾಡುವವರಿಗೆ ಇನ್ನು ಹೆಚ್ಚಿನ ಆಯ್ಕೆ ಒದಗಿಸುತ್ತಿತ್ತು. ಪ್ರಸ್ತುತ ಭಾರತದತ್ತ ದೃಷ್ಟಿ ನೆಟ್ಟಿರುವ ಅಂದಾಜು 10 ಲಕ್ಷ ರು.ಗಳಷ್ಟು ದುಬಾರಿಯ ಟೊಯೊಟಾ ವೈಯೊಸ್ 2015 ವರ್ಷಾಂತ್ಯ ಅಥವಾ 2016 ವರ್ಷಾರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಆಗಲೇ ಭಾರತ ಪ್ರವೇಶಿಸಬೇಕಾಗಿದ್ದ 10 ಜನಪ್ರಿಯ ಕಾರುಗಳು

ಈಗ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.

Most Read Articles

Kannada
English summary
What is the next car you think the Indian auto market should have? Here is a list of cars we think that should be in India by now.
Story first published: Wednesday, March 25, 2015, 11:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X