ಅಪಾಯದ ಗಂಟೆ ಬಾರಿಸಿದರೂ ಎಚ್ಚೆತ್ತುಕೊಳ್ಳದ ವಾಹನೋದ್ಯಮ

By Nagaraja

ಹೌದು, ಇಡೀ ವಾಹನ ಜಗತ್ತೇ ಬದಲಾವಣೆಯ ಪರ್ವದಲ್ಲಿದೆ. ಸಾಂಪ್ರಾದಾಯಿಕ ಇಂಧನ ಚಾಲಿತ ಕಾರುಗಳ ಸ್ಥಾನವನ್ನು ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳು ತುಂಬಿಕೊಳ್ಳುತ್ತಿದೆ. ಆದರೆ ನಮ್ಮ ಭವ್ಯ ಭಾರತದ ಪರಿಸ್ಥಿತಿ ಹೇಗಿದೆ? ನಮ್ಮ ಸರಕಾರ ಹಾಗೂ ವಾಹನೋದ್ಯಮ ಎಚ್ಚೆತ್ತುಕೊಳ್ಳುವುದಾದರೂ ಯಾವಾಗ? ದೇಶದ ಗಾಡಿಗಳು ವಾಯು ಮಾಲಿನ್ಯದ ಹೊಗೆ ಉಗುಳುವುದನ್ನು ನಿಲ್ಲಿಸುವುದಾದರೂ ಎಂದು? ಇವೆಲ್ಲವನ್ನು ಗಮನಿಸಿದಾಗ ಅಪಾಯದ ಗಂಟೆ ಮೊಳಗುತ್ತಿದ್ದರೂ ಈ ಬಗ್ಗೆ ಸಕರಾತ್ಮಕ ಚಿಂತನೆಯೇ ನಡೆಯುತ್ತಿಲ್ಲ ಎಂಬುದು ಖೇದಕರ ಸಂಗತಿ.

ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯದ ಕೊರತೆ, ಬೆಲೆ ದುಬಾರಿ ಹಾಗೂ ಜನಪ್ರಿಯತೆಯ ಅಭಾವ ಭಾರಿ ಹಿನ್ನೆಡೆಗೆ ಕಾರಣವಾಗುತ್ತಿದೆ. ಬಹುಶ: ಅಲ್ಲಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಗಳ ತಲೆಯೆತ್ತಿದರೆ ಇಂಹಹ ಬಹುನಿರೀಕ್ಷಿತ ಮಾದರಿಗಳು ಈಗಾಗಲೇ ಭಾರತೀಯ ವಾಹನ ಮಾರುಕಟ್ಟೆಯನ್ನು ತಲುಪುತ್ತಿದ್ದವು ಎಂಬುದರಲ್ಲಿ ಸಂದೇಹವೇ ಇಲ್ಲ.

10. ಹ್ಯುಂಡೈ ಐ10 ಎಲೆಕ್ಟ್ರಿಕ್

10. ಹ್ಯುಂಡೈ ಐ10 ಎಲೆಕ್ಟ್ರಿಕ್

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಸಂಸ್ಥೆಗೆ ದೇಶದಲ್ಲಿ ಎಲೆಕ್ಟ್ರಿಕ್ ಕಾರೊಂದನ್ನು ಬಿಡುಗಡೆ ಮಾಡುವುದು ಅಷ್ಟು ದೊಡ್ಡ ವಿಷಯವೇನಲ್ಲ. ಈಗಗಾಲೇ ವಿಸ್ತಾರದ ಮಾರುಕಟ್ಟೆ ಹೊಂದಿರುವ ಹ್ಯುಂಡೈ ಇಂತಹದೊಂದು ವಿಚಾರದಲ್ಲಿ ಮನಸ್ಸು ಮಾಡಿದರೆ ಸಹಜವಾಗಿಯೇ ಸರಕಾರದಿಂದಲೂ ಸಬ್ಸಿಡಿ ರೂಪದಲ್ಲಿ ನೆರವು ಸಿಗಲಿದೆ ಎಂಬುದು ನಮ್ಮ ನಂಬಿಕೆಯಾಗಿದೆ.

ಹ್ಯುಂಡೈ ಐ10 ಎಲೆಕ್ಟ್ರಿಕ್

ಹ್ಯುಂಡೈ ಐ10 ಎಲೆಕ್ಟ್ರಿಕ್

ಶೂನ್ಯ ಹೊಗೆ ಹೊರಸೂಸುವ ಹ್ಯುಂಡೈ ಐ10 ಎಲೆಕ್ಟ್ರಿಕ್ ಕಾರಿನಲ್ಲಿ 49 ಗಾದೂ 16ಕೆಡಬ್ಲ್ಯುಎಚ್ ಎಲೆಕ್ಟ್ರಿಕ್ ಮೋಟಾರು ಹೊಂದಿದೆ. ಇದರಲ್ಲಿ ಹಗರುಭಾರದ ಲಿ-ಪೊಲಿ ಎಲೆಕ್ಟ್ರಿಕ್ ಮೋಟಾರನ್ನು ಬಳಕೆ ಮಾಡಲಾಗಿದೆ. ಅಲ್ಲದೆ 220 ವಾಟ್ ಔಟ್ಲೆಟ್ ನಲ್ಲಿ ರೀಚಾರ್ಜ್ ಮಾಡಿಸಬಹುದಾಗಿದೆ. ಅಂತೆಯೇ 160 ಕೀ.ಮೀ. ವ್ಯಾಪ್ತಿ ಹಾಗೂ ಗಂಟೆಗೆ ಗರಿಷ್ಠ 130 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

09. ಷೆವರ್ಲೆ ಎಲೆಕ್ಟ್ರಿಕ್ ಸ್ಪಾರ್ಕ್

09. ಷೆವರ್ಲೆ ಎಲೆಕ್ಟ್ರಿಕ್ ಸ್ಪಾರ್ಕ್

ವಿಪರ್ಯಾಸವೆಂದರೆ ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳೆಲ್ಲ ವಿದ್ಯುತ್ ಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿದರೂ ಸಹ ಇಂತಹ ಕಾರುಗಳ ಪ್ರವೇಶವಾಗಲಿ ಅಥವಾ ಕನಿಷ್ಠ ಪಕ್ಷ ಟೆಸ್ಟಿಂಗ್ ಪ್ರಕ್ರಿಯೆಯಾಗಲಿ ಭಾರತದಲ್ಲಿ ನಡೆಯುತ್ತಿಲ್ಲ ಎಂಬುದು ದು:ಖಕರ ವಿಷವಾಗಿದೆ.

 ಷೆವರ್ಲೆ ಎಲೆಕ್ಟ್ರಿಕ್ ಸ್ಪಾರ್ಕ್

ಷೆವರ್ಲೆ ಎಲೆಕ್ಟ್ರಿಕ್ ಸ್ಪಾರ್ಕ್

ಈ ನಿಟ್ಟಿನಲ್ಲಿ ಷೆವರ್ಲೆ ಎಲೆಕ್ಟ್ರಿಕ್ ಸ್ಪಾರ್ಕ್ ಎಚ್ಚೆತ್ತುಕೊಳ್ಳಬೇಕಾಗಿದೆ. ಅಮೆರಿಕದ ಪ್ರಖ್ಯಾತ ಜನರಲ್ ಮೋಟಾರ್ಸ್ ಸಂಸ್ಥೆಯಿಂದ ನಿರ್ಮಿಸಲ್ಪಟ್ಟಿರುವ ಷೆವರ್ಲೆಯ ಈ ವಿದ್ಯುತ್ ಚಾಲಿತ ಕಾರು ಇ ಸ್ಪಾರ್ಕ್ ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

08. ನಿಸ್ಸಾನ್ ಲೀಫ್

08. ನಿಸ್ಸಾನ್ ಲೀಫ್

ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು ತನ್ನ ಜನಪ್ರಿಯ ನಿಸ್ಸಾನ್ ಲೀಫ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ. ಈಗಾಗಲೇ ನವದಹೆಲಿಯಲ್ಲಿ ನಡೆದ ನಿಸ್ಸಾನ್ 10 ವರ್ಷಗಳ ಸಂಭ್ರಮದ ವೇಳೆಯಲ್ಲೂ ಇದನ್ನು ಪ್ರದರ್ಶಿಸಿರುವುದು ಶುಭಕರ ಬೆಳವಣಿಗೆಯಾಗಿದೆ.

ನಿಸ್ಸಾನ್ ಲೀಫ್

ನಿಸ್ಸಾನ್ ಲೀಫ್

ಹ್ಯಾಚ್ ಬ್ಯಾಕ್ ಶ್ರೇಣಿಯ ನಿಸ್ಸಾನ್ ಲೀಫ್ ಕಾರಿನಲ್ಲಿ 80 ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರು ಹೊಂದಿರಲಿದೆ. ಅಲ್ಲದೆ ಏಕ ಚಾರ್ಜ್ ನಲ್ಲಿ 150 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಇದೊಂದು ಉತ್ತಮ ಫ್ಯಾಮಿಲಿ ಕಾರೆನಿಸಿಕೊಳ್ಳಲಿದೆ.

07. ಫೋಕ್ಸ್ ವ್ಯಾಗನ್ ಇ-ಅಪ್

07. ಫೋಕ್ಸ್ ವ್ಯಾಗನ್ ಇ-ಅಪ್

ಫೋಕ್ಸ್ ವ್ಯಾಗನ್ ಇ-ಅಪ್ ಕಾರು ಭಾರತ ಪ್ರವೇಶಿಸಿದರೆ ದೊಡ್ಡ ಪ್ಲಸ್ ಪಾಯಿಂಟ್ ಆಗಿರಲಿದೆ. ಯಾಕೆಂದರೆ ಸಂಸ್ಥೆಯ ಪ್ರಕಾರ ಸಾಂಪ್ರಾದಾಯಿಕ ಚಾಲನಾ ಸಿಸ್ಟಂಗಿಂತಲೂ ಫೋಕ್ಸ್ ವ್ಯಾಗನ್ ಅಪ್ ಕಡಿಮೆ ವೆಚ್ಚದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 11.7 ಕೆಡಬ್ಲ್ಯುಎಚ್ ವ್ಯಯ ಮಾಡಿದರೆ 100 ಕೀ.ಮೀ. ತನಕ ಸಾಗಬಹುದಾಗಿದೆ.

ಫೋಕ್ಸ್ ವ್ಯಾಗನ್ ಇ-ಅಪ್

ಫೋಕ್ಸ್ ವ್ಯಾಗನ್ ಇ-ಅಪ್

ಅತ್ಯುತ್ತಮ ವಿನ್ಯಾಸಿತ ಕಾರುಗಳಲ್ಲಿ ಒಂದಾಗಿರುವ ಪೋಕ್ಸ್ ವ್ಯಾಗನ್ ಅಪ್ ಗಂಟೆಗೆ 130 ಕೀ.ಮೀ. ಹಾಗೂ 12.4 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

06. ಮಹೀಂದ್ರ ವೆರಿಟೊ

06. ಮಹೀಂದ್ರ ವೆರಿಟೊ

ಮಹೀಂದ್ರ ಎಲೆಕ್ಟ್ರಿಕ್ ಕಾರಿನ ಕುರಿತಾಗಿ ಯೋಚಿಸುವಾಗ ಏನು ಮಾಡಲು ಹೋಗಿ ಏನು ಮಾಡಿದೇ ನೀನು ಎಂಬ ಪದ್ಯ ನೆನಪಿಗೆ ಬರುತ್ತದೆ. ಹೌದು ಕಡಿಮೆ ವೆಚ್ಚದಲ್ಲಿ ಕೈಗೆಟಕುವ ವಿದ್ಯುತ್ ಕಾರು ನಿರ್ಮಿಸುವ ಪ್ರಯತ್ನದಲ್ಲಿ ಮಹೀಂದ್ರ ಗ್ರಾಹಕರ ಬಯಕೆಗಳನ್ನು ಮರೆತಂತಿದೆ.

ಮಹೀಂದ್ರ ವೆರಿಟೊ

ಮಹೀಂದ್ರ ವೆರಿಟೊ

ಆದರೆ ಮಹೀಂದ್ರದ ಬಹುನಿರೀಕ್ಷಿತ ವೆರಿಟೊ ಎಲೆಕ್ಟ್ರಿಕ್ ಕಾರಿನಲ್ಲಿ ಈ ಎಲ್ಲ ಸಮಸ್ಯೆಗಳು ನಿವಾರಣೆಯಾಗುವ ನಂಬಿಕೆಯಿದೆ. ಆದಷ್ಟು ಬೇಗನೇ ವೆರಿಟೊ ಮಾರುಕಟ್ಟೆ ಪ್ರವೇಶಿಸಲಿ ಎಂಬುದು ನಮ್ಮ ಆಶಯವಾಗಿದೆ.

05. ಟಾಟಾ ಇಂಡಿಕಾ ವಿಸ್ಟಾ ಎಲೆಕ್ಟ್ರಿಕ್

05. ಟಾಟಾ ಇಂಡಿಕಾ ವಿಸ್ಟಾ ಎಲೆಕ್ಟ್ರಿಕ್

79ನೇ ಜಿನೆವಾ ಮೋಟಾರು ಶೋದಲ್ಲಿ ಈಗಾಗಲೇ ಪ್ರದರ್ಶನ ಕಂಡಿರುವ ಟಾಟಾ ಇಂಡಿಯಾ ವಿಸ್ಟಾ ಎಲೆಕ್ಟ್ರಿಕ್ ಕಾರು ದೇಶದ ವಾಹನ ಖರೀದಿಗಾರರಿಗೆ ಸೂಕ್ತವಾದ ಕಾರೆನಿಸಿಕೊಳ್ಳಲಿದೆ.

ಟಾಟಾ ಇಂಡಿಕಾ ವಿಸ್ಟಾ ಎಲೆಕ್ಟ್ರಿಕ್

ಟಾಟಾ ಇಂಡಿಕಾ ವಿಸ್ಟಾ ಎಲೆಕ್ಟ್ರಿಕ್

ಟಾಟಾ ಇಂಡಿಕಾ ವಿಸ್ಟಾ ಎಲೆಕ್ಟ್ರಿಕ್ ಕಾರಿನಲ್ಲಿ ಸೂಪರ್ ಪೊಲಿಮರ್ ಲಿಥಿಯಂ ಇಯಾನ್ ಬ್ಯಾಟರಿ ಆಳವಡಿಕೆಯಾಗಲಿದೆ. ಅಲ್ಲದೆ ಎಂಟು ತಾಸಿನಲ್ಲಿ ಪೂರ್ಣವಾಗಿ ಚಾರ್ಜ್ ಮಾಡಬಹುದಲ್ಲದೆ 200 ಕೀ.ಮೀ. ದೂರವನ್ನು ತಲುಪಬಹುದಾಗಿದೆ.

04. ಸುಜುಕಿ ಎವ್ರಿ ಎಲೆಕ್ಟ್ರಿಕ್

04. ಸುಜುಕಿ ಎವ್ರಿ ಎಲೆಕ್ಟ್ರಿಕ್

ಮಾರುತಿ ಅಂಗಸಂಸ್ಥೆಯಾಗಿರುವ ಸುಜುಕಿ ಎವ್ರಿ ಎಲೆಕ್ಟ್ರಿಕ್ ಕಾರು ತವರೂರಾದ ಜಪಾನ್ ನಲ್ಲಿ ಓಡಾಟ ಆರಂಭಿಸಿದೆ. ವಿಶೇಷವೆಂದರೆ ಇದು ಸುಜುಕಿ ಕ್ಯಾರಿ ವ್ಯಾನ್ ನ ಎಲೆಕ್ಟ್ರಿಕ್ ಪ್ರತಿಯಾಗಿದೆ.

ಸುಜುಕಿ ಎವ್ರಿ ಎಲೆಕ್ಟ್ರಿಕ್

ಸುಜುಕಿ ಎವ್ರಿ ಎಲೆಕ್ಟ್ರಿಕ್

ಲಿಥಿಯಂ ಇಯಾನ್ ಬ್ಯಾಟರಿ ಪ್ರಯೋಗ ಇದರಲ್ಲಿ ಮಾಡಲಾಗಿದ್ದು ಕೇವಲ ಐದು ತಾಸಿನಲ್ಲೇ ಸಂಪೂರ್ಣವಾಗಿ ಚಾರ್ಜಿಂಗ್ ಮಾಡಬಹುದಾಗಿದೆ. ಅಲ್ಲದೆ 62 ಮೈಲು ದೂರವನ್ನು ಕ್ರಮಿಸಬಹುದಾಗಿದೆ.

03. ಹೋಂಡಾ ಜಾಝ್ ಎಲೆಕ್ಟ್ರಿಕ್

03. ಹೋಂಡಾ ಜಾಝ್ ಎಲೆಕ್ಟ್ರಿಕ್

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಭಾರತದಲ್ಲಿ ಬಹುನಿರೀಕ್ಷಿತ ಜಾಝ್ ಇಂಧನ ಚಾಲಿತ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಆದರೆ ಈ ಪಟ್ಟಿಯಲ್ಲಿ ಜಾಝ್ ಎಲೆಕ್ಟ್ರಿಕ್ ಕಾರು ಕಾಣಿಸಿಕೊಳ್ಳದೇ ಇರುವುದು ಬೇಸರದ ಸಂಗತಿ.

ಹೋಂಡಾ ಜಾಝ್ ಎಲೆಕ್ಟ್ರಿಕ್

ಹೋಂಡಾ ಜಾಝ್ ಎಲೆಕ್ಟ್ರಿಕ್

ಭವಿಷ್ಯದಲ್ಲೊಂದು ದಿನ ಜಾಝ್ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಎಂಟ್ರಿ ಕೊಡಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಬೇಡ. ಆದರೆ ಇಂತಹ ನಿಲುವನ್ನು ಈಗಿನಿಂದಲೂ ಅನುಸರಿಸಿದ್ದರೆ ಚೆನ್ನಾಗಿರುತ್ತಿತ್ತು.

02. ಫೋರ್ಡ್ ಫೋಕಸ್ ಎಲೆಕ್ಟ್ರಿಕ್

02. ಫೋರ್ಡ್ ಫೋಕಸ್ ಎಲೆಕ್ಟ್ರಿಕ್

ಅಮೆರಿಕದ ಪ್ರಖ್ಯಾತ ಫೋರ್ಡ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಐದು ಬಾಗಿಲುಗಳ ಎಲೆಕ್ಟ್ರಿಕ್ ಕಾರು ಇದಾಗಿದೆ. ಇದರಲ್ಲಿ 107 ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರು ಆಳವಡಿಸಲಾಗಿದೆ.

 ಫೋರ್ಡ್ ಫೋಕಸ್ ಎಲೆಕ್ಟ್ರಿಕ್

ಫೋರ್ಡ್ ಫೋಕಸ್ ಎಲೆಕ್ಟ್ರಿಕ್

ಇದರಲ್ಲಿ 240 ವಾಟ್ ಚಾರ್ಜಿಂಗ್ ಸ್ಟೇಷನ್ ಹೊಂದಿರುತ್ತದೆ. ಅಲ್ಲದೆ 3.6 ತಾಸಿನಲ್ಲೇ ಸಂಪೂರ್ಣ ಚಾರ್ಜಿಂಗ್ ಮಾಡಿಸಬಹುದಾಗಿದೆ. ಇದರೊಂದಿಗೆ ಮೈ ಫೋರ್ಡ್ ಮೊಬೈಲ್ ಅಪ್ಲಿಕೇಷನ್ ಸಹ ಸಂಪರ್ಕಿಸಬಹುದಾಗಿದೆ.

01. ಟೆಸ್ಲಾ, ಬಿಎಂಡಬ್ಲ್ಯು

01. ಟೆಸ್ಲಾ, ಬಿಎಂಡಬ್ಲ್ಯು

ನಾವಿಲ್ಲಿ ಟೆಸ್ಲಾ ಹಾಗೂ ಬಿಎಂಡಬ್ಲ್ಯು ಮಾದರಿಗಳನ್ನು ಪರಿಚಯಿಸಲು ಇಚ್ಛಿಸುತ್ತೇವೆ. ಟೆಸ್ಲಾ ವಿಶ್ವದ ನಂಬರ್ ವನ್ ಎಲೆಕ್ಟ್ರಿಕ್ ಕಾರು ಸಂಸ್ಥೆಯಾಗಿದೆ.

ಟೆಸ್ಲಾ, ಬಿಎಂಡಬ್ಲ್ಯು

ಟೆಸ್ಲಾ, ಬಿಎಂಡಬ್ಲ್ಯು

ಈ ಪೈಕಿ ಟೆಸ್ಲಾ ಸಂಸ್ಥೆಯು ನಿಕಟ ಭವಿಷ್ಯದಲ್ಲೇ ಭಾರತ ವಾಹನ ಮಾರುಕಟ್ಟೆ ಪ್ರವೇಶಿಸುವುದಾಗಿಯೂ ಅಧಿಕೃತವಾಗಿ ಘೋಷಿಸಿದೆ. ಇನ್ನೊಂದೆಡೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಈಗಾಗಲೇ ಭಾರತ ಮಾರುಕಟ್ಟೆ ಪ್ರವೇಶಿಸಿದರೂ ಐ3 ಎಲೆಕ್ಟ್ರಿಕ್ ಕಾರು ದೇಶ ಪ್ರವೇಶಿಸಲು ಮೀನಾಮೇಷ ಎದುರಿಸುತ್ತಿದೆ.

Most Read Articles

Kannada
English summary
What is the next car you think the Indian auto market should have? Here is a list of electric cars we think that should be in India by now.
Story first published: Friday, April 17, 2015, 15:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X