ಸಕತ್ ಬ್ಯೂಟಿಫುಲ್ ಟೆಸ್ಲಾ ಎಲೆಕ್ಟ್ರಿಕ್ ಎಸ್‌ಯುವಿ 'ಮಾಡೆಲ್ ಎಕ್ಸ್'

By Nagaraja

ಆಧುನಿಕ ತಂತ್ರಜ್ಞಾನಕ್ಕೆ ಸರಿಯಾದ ರೀತಿಯಲ್ಲಿ ಒಗ್ಗಿಕೊಂಡಿರುವ ಅಮೆರಿಕ ಮೂಲದ ಪ್ರಖ್ಯಾತ ವಿದ್ಯುತ್ ಚಾಲಿತ ಸಂಸ್ಥೆ ಟೆಸ್ಲಾ ಮೋಟಾರ್ಸ್, ಅತಿ ನೂತನ ಎಲೆಕ್ಟ್ರಿಕ್ ಕ್ರೀಡಾ ಬಳಕೆಯ ವಾಹನವನ್ನು ಅಭಿವೃದ್ಧಿಪಡಿಸಿದೆ.

ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ; ಅಜೆಂಡಾ ಏನು? ಮುಂದಕ್ಕೆ ಓದಿ

ಪ್ರಸ್ತುತ ಟೆಸ್ಲಾ ಮಾಡೆಲ್ ಎಕ್ಸ್ ವಿದ್ಯುತ್ ಚಾಲಿತ ಕ್ರೀಡಾ ಬಳಕೆಯು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರನ್ನು ತಲುಪಲಿದೆ. ಅಲ್ಲದೆ ಟೆಸ್ಲಾದಿಂದ ನಿರ್ಮಾಣವಾಗಿರುವ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಎಂಬ ಕೀರ್ತಿಗೂ ಪಾತ್ರವಾಗಿದೆ.

ಸಕತ್ ಬ್ಯೂಟಿಫುಲ್ ಟೆಸ್ಲಾ ಎಲೆಕ್ಟ್ರಿಕ್ ಎಸ್‌ಯುವಿ 'ಮಾಡೆಲ್ ಎಕ್ಸ್'

ಕ್ಯಾಲಿಫೋರ್ನಿಯಾದಲ್ಲಿ ಸ್ಥಿತಗೊಂಡಿರುವ ಘಟಕದಲ್ಲಿ ಭರ್ಜರಿ ಅನಾವರಣಗೊಂಡಿರುವ ಟೆಸ್ಲಾ ಮಾಡೆಲ್ ಎಕ್ಸ್, ಆಟೋಮೋಟಿವ್ ತಂತ್ರಗಾರಿಕೆಯಲ್ಲಿ ಹೊಸ ಮೈಲುಗಲ್ಲಾಗಿರಲಿದೆ ಎಂದು ವಾಹನ ತಜ್ಞರು ಅಭಿಪ್ರಾಯಪಡುತ್ತಾರೆ.

ವಿಶಿಷ್ಟತೆ

ವಿಶಿಷ್ಟತೆ

ವಿಶಿಷ್ಟ ರೀತಿಯಲ್ಲಿ ರೆಕ್ಕೆಯಂತೆ ತೆರೆದುಕೊಳ್ಳುವ ಫಾಲ್ಕನ್ ವಿಂಗ್ ಡೋರ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಸಕತ್ ಬ್ಯೂಟಿಫುಲ್ ಟೆಸ್ಲಾ ಎಲೆಕ್ಟ್ರಿಕ್ ಎಸ್‌ಯುವಿ 'ಮಾಡೆಲ್ ಎಕ್ಸ್'

ಇದು ಕಳೆದ 12 ವರ್ಷಗಳಲ್ಲಿ ಅಮೆರಿಕ ಮೂಲದ ಟೆಸ್ಲಾದಿಂದ ಆಗಮನವಾಗುತ್ತಿರುವ ಮೂರನೇ ವಾಹನವಾಗಿದೆ. ಈ ಹಿಂದೆ ರೋಡ್ ಸ್ಟರ್ (2012ರಲ್ಲಿ ನಿರ್ಮಾಣ ಸ್ಥಗಿತ) ಹಾಗೂ ಮಾಡೆಲ್ ಎಸ್ ಸೆಡಾನ್ ಮಾದರಿಗಳನ್ನು ಪರಿಚಯಿಸಿತ್ತು.

ಸಕತ್ ಬ್ಯೂಟಿಫುಲ್ ಟೆಸ್ಲಾ ಎಲೆಕ್ಟ್ರಿಕ್ ಎಸ್‌ಯುವಿ 'ಮಾಡೆಲ್ ಎಕ್ಸ್'

ಕ್ರೀಡಾ ಪ್ರಿಯ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಫರ್ಫಮನ್ಸ್ ಮಾದರಿಯನ್ನು ಟೆಸ್ಲಾ ಮೋಟಾರ್ಸ್ ಪರಿಚಯಿಸುತ್ತಿದ್ದು, ಆಲ್ ವೀಡ್ ಡ್ರೈವ್ ವ್ಯವಸ್ಥೆಯೂ ಮಗದೊಂದು ಆಕರ್ಷಣೆಯಾಗಲಿದೆ.

ಸಕತ್ ಬ್ಯೂಟಿಫುಲ್ ಟೆಸ್ಲಾ ಎಲೆಕ್ಟ್ರಿಕ್ ಎಸ್‌ಯುವಿ 'ಮಾಡೆಲ್ ಎಕ್ಸ್'

ಒಮ್ಮೆ ಟೆಸ್ಲಾ ಮಾಡೆಲ್ ಎಕ್ಸ್ 90ಡಿ ವರ್ಷನ್ ಸಂಪೂರ್ಣ ಚಾರ್ಜ್ ಮಾಡಿದಾಗ 257 ಮೈಲು ಹಾಗೂ ಪಿ90ಡಿ ನಿರ್ವಹಣಾ ವರ್ಷನ್ 250 ಮೈಲು ವ್ಯಾಪ್ತಿಯನ್ನು ನೀಡಲಿದೆ. ಅಲ್ಲದೆ 3.2 ಸೆಕೆಂಡುಗಳಲ್ಲೇ ಗಂಟೆಗೆ 0-60 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸಕತ್ ಬ್ಯೂಟಿಫುಲ್ ಟೆಸ್ಲಾ ಎಲೆಕ್ಟ್ರಿಕ್ ಎಸ್‌ಯುವಿ 'ಮಾಡೆಲ್ ಎಕ್ಸ್'

ಮೂರು ಸಾಲಿನ ಸೀಟು ವ್ಯವಸ್ಥೆಯನ್ನು ಹೊಂದಿರುವ ಮಾಡೆಲ್ ಎಕ್ಸ್ ಕಾರಿನಲ್ಲಿ ಏಳು ಮಂದಿಗೆ ಆರಾಮದಾಯಕವಾಗಿ ಸಂಚರಿಸಬಹುದಾಗಿದೆ. ಅಲ್ಲದೆ ನೇವಿಗೇಷನ್, ಮ್ಯೂಸಿಕ್, ಕ್ಯಾಬಿನ್ ಹಾಗೂ 17 ಇಂಚುಗಳ ಡ್ಯಾಶ್ ಬೋರ್ಡ್ ಟಚ್ ಸ್ಕ್ರೀನ್ ಇರಲಿದೆ.

Most Read Articles

Kannada
English summary
Tesla unveils its first electric SUV Model X
Story first published: Saturday, October 3, 2015, 16:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X