ಮತ್ತೆ ಮತ್ತೆ ಬಯಸುವ ದೇಶದ 5 ಜನಪ್ರಿಯ ಕಾರುಗಳು

By Nagaraja

ಹಳೆಯ ಕಾರುಗಳಲ್ಲಿ ಲಭ್ಯವಾಗುವ ಕೆಲವೊಂದು ಅತ್ಯುನ್ನತ್ತ ವೈಶಿಷ್ಟ್ಯಗಳು ನಮಗೆ ಹೊಸ ಕಾರುಗಳಲ್ಲಿ ದೊರಕಲಾರದು. ಉದಾಹರಣೆ ನಿರ್ಮಾಣ ಗುಣಮಟ್ಟತೆ, ಚಾಲನಾ ಅನುಭವ, ಸ್ಥಳಾವಕಾಶ ಹೀಗೆ ಹತ್ತು ಹಲವಾರು ವಿಚಾರಗಳ ಬಗ್ಗೆ ಪಟ್ಟಿ ಮಾಡಿ ಹೇಳಬಹುದು.

ಹಾಗಿರುವಾಗ ಶಾಶ್ವತವಾಗಿ ಅಳಿಸಿ ಹೋಗಿರುವ ಇಂತಹ ಹಳೆಯ ಕಾರುಗಳ ಸಾನಿಧ್ಯವನ್ನು ನಾವು ಮತ್ತೆ ಮತ್ತೆ ಬಯಸುತ್ತೇವೆ. ಹೀಗೆ ನಮ್ಮ ಹೃದಯಕ್ಕೆ ಹತ್ತಿರವಾಗಿರುವ ಹಾಗೂ ಮಿಸ್ ಮಾಡಿಕೊಳ್ಳಲಾಗದ ಐದು ಜನಪ್ರಿಯ ಮಾದರಿಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ.

01. ಟೊಯೊಟಾ ಕ್ವಾಲಿಸ್

01. ಟೊಯೊಟಾ ಕ್ವಾಲಿಸ್

ವಿಶ್ವಾಸಾರ್ಹ ಎಂಜಿನ್, ಸೌಲಭ್ಯ ಮುಂತಾದ ವಿಚಾರಗಳಲ್ಲಿ ಟೊಯೊಟಾ ಕ್ವಾಲಿಸ್ ಈಗಲೂ ನಮ್ಮ ಹೃದಯಕ್ಕೆ ಹತ್ತಿರವಾಗಿದೆ. ನಿಮ್ಮ ಮಾಹಿತಿಗಾಗಿ 200ನೇ ಇಸವಿಯಲ್ಲಿ ಟೊಯೊಟಾ ಕ್ವಾಲಿಸ್ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಆಗಲೇ ಎರಡು ತಲೆಮಾರಿನ ಮಾದರಿಗಳನ್ನು ಕಂಡಿರುವ ಕ್ವಾಲಿಸ್ ದೇಶಕ್ಕೆ ಪರಿಚಯವಾದ ಟೊಯೊಟಾದ ಮೊದಲ ಉತ್ಪನ್ನ ಕೂಡಾ ಆಗಿತ್ತು. ಹಾಗಾಗಿ ಸಹಜವಾಗಿಯೇ ನಿರೀಕ್ಷೆಯೂ ಜಾಸ್ತಿಯಾಗಿತ್ತು.

ಟೊಯೊಟಾ ಕ್ವಾಲಿಸ್

ಟೊಯೊಟಾ ಕ್ವಾಲಿಸ್

ಇಂಡೋನೇಷ್ಯಾದ ಕಿಂಜಾಗ್ ನ ಭಾರತ ಮಾದರಿಯಾಗಿರುವ ಕ್ವಾಲಿಸ್ ಪ್ರಾಯೋಗಿಕ ರೂಪದಲ್ಲಿ ಭಾರತ ಪ್ರವೇಶಿಸಿದ್ದರೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಟಾಟಾ ಸುಮೋಗಳಂತಹ ಉಪಯುಕ್ತ ವಾಹನಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಕ್ವಾಲಿಸ್ ವಾಣಿಜ್ಯ ಹಾಗೂ ಕುಟುಂಬ ಅಗತ್ಯಗಳಿಗಾಗಿ ಬಳಕೆ ಮಾಡಲಾಗುತ್ತಿತ್ತು.

02. ಫೋರ್ಡ್ ಐಕಾನ್

02. ಫೋರ್ಡ್ ಐಕಾನ್

1999ನೇ ಇಸವಿಯಲ್ಲಿ ಮೊದಲ ಜನಾಂಗದ ಫೋರ್ಡ್ ಐಕಾನ್ ಕಾರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಡುಗಡೆಗೊಂಡಿತ್ತು. ನಾಲ್ಕನೇ ತಲೆಮಾರಿನ ಫೋರ್ಡ್ ಫಿಯೆಸ್ಟಾ ತಳಹದಿಯಲ್ಲಿ ನಿರ್ಮಾಣವಾಗಿರುವ ಫೋರ್ಡ್ ಐಕಾನ್ ಕಾರನ್ನು ವಿಶೇಷವಾಗಿಯೂ ಭಾರತೀಯ ಮಾರುಕಟ್ಟೆಗಾಗಿ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲದೆ ಇದಕ್ಕಾಗಿ ಚೆನ್ನೈನ ಘಟಕದಲ್ಲಿ ನಿರ್ಮಾಣ ಪ್ರಕ್ರಿಯೆಯನ್ನು ಆರಂಭಿಸಿತ್ತು.

ಫೋರ್ಡ್ ಐಕಾನ್

ಫೋರ್ಡ್ ಐಕಾನ್

ವಿದೇಶಗಳಿಯೂ ಭಾರತದಿಂದ ರಫ್ತಾಗುತ್ತಿದ್ದ ಫೋರ್ಡ್ ಐಕಾನ್ ಮಾರಾಟವನ್ನು 2011ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಸಿಡಿ ಪ್ಲೇಯರ್, ವಿದ್ಯುನ್ಮಾನ ಗಾಜು, ರಿಮೋಟ್ ಸೆಂಟ್ರಲ್ ಲಾಕಿಂಗ್, ಏರ್ ಬ್ಯಾಗ್ ಎಲ್ಲವೂ ಫೋರ್ಡ್ ಗ್ರಾಹಕರಿಗೆ ಮೊದಲ ಅನುಭವವಾಗಿತ್ತು. ಅಲ್ಲದೆ ಈಗಲೂ ಹಳೆಯ ಕಾರು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಕಾಪಾಡಿಕೊಂಡಿದೆ.

03. ಮಾರುತಿ ಬಲೆನೊ

03. ಮಾರುತಿ ಬಲೆನೊ

1999ರಿಂದ 2007ರ ವರೆಗೆ ಮಾರಾಟದಲ್ಲಿದ್ದ ಮಾರುತಿ ಬಲೆನೊ ಮೂಲತ: ಸುಜುಕಿ ಕಲ್ಟಸ್ ಕ್ರೆಸಂಟ್ ಆಗಿದೆ. ಮಾರುತಿಯ ಎಂಟ್ರಿ ಲೆವೆಲ್ ಸೆಡಾನ್ ಕಾರಾಗಿದ್ದ ಬಲೆನೊ ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಮಾರಾಟ ನಿಲುಗಡೆಗೊಳಿಸಲಾಗಿತ್ತು.

ಮಾರುತಿ ಬಲೆನೊ

ಮಾರುತಿ ಬಲೆನೊ

ಕೇವಲ ರಾಲಿ ಚಾಲಕರು ಮಾತ್ರವಲ್ಲದೆ ಇಂದಿಗೂ ಭಾರತದ ದೊಡ್ಡ ಕುಟುಂಬಗಳು ಹೆಚ್ಚು ಸ್ಥಳಾವಕಾಶದ ಬೆಲನೊ ಕಾರನ್ನು ಇಷ್ಟಪಡುತ್ತಾರೆ. ಬಳಿಕ ಮುಂದುವರಿದ ಬೆಳವಣಿಗೆಯಲ್ಲಿ ಎಸ್ ಎಕ್ಸ್4 ಮಾದರಿಗೆ ಬೆಲೆ ಹಾದಿ ಬಿಟ್ಟುಕೊಟ್ಟಿತ್ತು. ಈಗ ತಲೆಮಾರಿಂದ ತಲೆಮಾರಿಗೆ ಹೊಸತನವನ್ನು ನೀಡುವ ಮಾರುತಿ ಎಸ್ ಎಕ್ಸ್4 ಸ್ಥಾನವನ್ನು ಸಿಯಾಝ್ ಮೂಲಕ ತುಂಬಿಕೊಂಡಿದೆ.

04. ಫಿಯೆಟ್ ಪ್ಯಾಲಿಯೊ

04. ಫಿಯೆಟ್ ಪ್ಯಾಲಿಯೊ

ದೇಶದಲ್ಲಿ ಫಿಯೆಟ್ ಸಂಸ್ಥೆಯ ಪುನರ್ಜನ್ಮದಲ್ಲಿ ಪ್ಯಾಲಿಯೊ ಪಾತ್ರ ಮಹತ್ತರವಾಗಿತ್ತು. 2001ರಲ್ಲಿ ಪರಿಚಯವಾಗಿದ್ದ ಪ್ಯಾಲಿಯೊ ತನ್ನ ಪಾದಾರ್ಪಣೆಯ ವರ್ಷದಲ್ಲೇ ಅತ್ಯುತ್ತಮ ಕಾರೆಂಬ ಪಟಕ್ಕೂ ಅರ್ಹವೆನಿಸಿತ್ತು. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರಚಾರ ರಾಯಭಾರಿಯಾದ ಸಂದರ್ಭದಲ್ಲಿ ವಿಶೇಷ ಆವೃತ್ತಿಯನ್ನು ಕ್ರಿಕೆಟ್ ದಿಗ್ಗಜನಾಗಿ ಫಿಯೆಟ್ ಅರ್ಪಿಸಿತ್ತು.

ಫಿಯೆಟ್ ಪ್ಯಾಲಿಯೊ

ಫಿಯೆಟ್ ಪ್ಯಾಲಿಯೊ

ಈ ಸೂಪರ್ ಮಿನಿ ಕಾರು ಕ್ರಮೇಣ ಕಳಪೆ ಸರ್ವಿಸ್ ಹಿನ್ನೆಲೆಯಲ್ಲಿ ಹಿನ್ನೆಡೆ ಅನುಭವಿಸುವಂತಾಗಿತ್ತು. ಜಾಗತಿಕವಾಗಿ ಅನೇಕ ರಾಷ್ಟ್ರಗಳಿಗೆ ಎಂಟ್ರಿ ಕೊಟ್ಟಿರುವ ಪ್ಯಾಲಿಯೊ ದೇಶದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು.

05. ಹ್ಯುಂಡೈ ಸ್ಯಾಂಟ್ರೊ

05. ಹ್ಯುಂಡೈ ಸ್ಯಾಂಟ್ರೊ

1997ನೇ ಇಸವಿಯಲ್ಲಿ ದೇಶದ ಅತಿ ದೊಡ್ಡ ಕಾರು ಸಂಸ್ಥೆಯಾದ ಮಾರುತಿ ಸುಜುಕಿ ಜನಪ್ರಿಯ ಜೆನ್ ಮಾದರಿಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದ್ದ ಹ್ಯುಂಡೈ ಸ್ಯಾಂಟ್ರೊ ಕ್ಸಿಂಗ್ ಹ್ಯಾಚ್ ಬ್ಯಾಕ್ ಸಣ್ಣ ಕಾರು ಅತಿ ಬೇಗನೇ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಸುದೀರ್ಘ 15 ವರ್ಷಗಳ ವರೆಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ನ್ನ ಬಿಡುಗಡೆ ಬಳಿಕ ಸ್ಯಾಂಟ್ರೊ ಇದುವರೆಗೆ ದೇಶದಲ್ಲಿ 1.36 ಯುನಿಟ್‌ಗಳ ಮಾರಾಟ ಸಾಧಿಸಿತ್ತು. ಅದೇ ರೀತಿ 5,35,00 ಯುನಿಟ್‌ಗಳನ್ನು ರಫ್ತು ಮಾಡಿತ್ತು.

ಹ್ಯುಂಡೈ ಸ್ಯಾಂಟ್ರೊ

ಹ್ಯುಂಡೈ ಸ್ಯಾಂಟ್ರೊ

ಹ್ಯುಂಡೈ ಆಟೋಸ್ ಭಾರತದಲ್ಲಿ ಸ್ಯಾಂಟ್ರೊ ರೂಪದಲ್ಲಿ ಪರಿಚಯವಾಗಿತ್ತು. ಬಳಿಕ 2007ರಲ್ಲಿ ಇದರ ಸ್ಥಾನವನ್ನು ಹ್ಯುಂಡೈ ಐ10 ತುಂಬಿಕೊಂಡಿತ್ತು. ಹಾಗಿದ್ದರೂ ಸ್ಯಾಂಟ್ರೊ ಜನಪ್ರಿಯತೆಯನ್ನು ಕಂಡ ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯು 2014ರ ವರೆಗೆ ನಿರ್ಮಾಣ ಪ್ರಕ್ರಿಯೆಯನ್ನು ಮುಂದುವರಿಸಲು ನಿರ್ಧರಿಸಿತ್ತು. ವಿಶೇಷವೆಂದರೆ ಈಗಲೂ ಅನೇಕ ಡ್ರೈವಿಂಗ್ ಸ್ಕೂಲ್ ಗಳಲ್ಲಿ ಸ್ಯಾಂಟ್ರೊ ಕ್ಸಿಂಗ್ ಕಾರನ್ನೇ ಚಾಲನಾ ಕರಗತ ಮಾಡಲು ಬಳಕೆ ಮಾಡಲಾಗುತ್ತಿದೆ.

Most Read Articles

Kannada
Read more on ಕಾರು cars
English summary
That's why we thought we'd reminisce over 5 cars that had that something we truly miss in today's world—soul.
Story first published: Wednesday, April 29, 2015, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X