ದೇಶದ 10 ರೋಚಕ ಕಾರು ಸಂಸ್ಥೆಗಳು

By Nagaraja

ನಾವು ಈಗಷ್ಟೇ ದೇಶದ 10 ರೋಚಕ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳ ಬಗ್ಗೆ ಲೇಖನವೊಂದನ್ನು ಪ್ರಕಟಿಸಿರುತ್ತೇವೆ. ಇದರ ಮುಂದುವರಿದ ಭಾಗವೆಂಬಂತೆ ಇಂದಿನ ಈ ಲೇಖನದಲ್ಲಿ ದೇಶದ 10 ರೋಚಕ ಕಾರು ಸಂಸ್ಥೆಗಳ ಬಗ್ಗೆ ಹೇಳಿ ಕೊಡಲಿದ್ದೇವೆ.

ದೇಶದ 10 ರೋಚಕ ಬೈಕ್ ಬ್ರಾಂಡ್ ಗಳು

ಕಳೆದ ಕೆಲವು ವರ್ಷಗಳಿಂದ ವಾಹನ ಸಂಸ್ಥೆಗಳು ಜನರಿಗೆ ಹತ್ತಿರವಾಗತೊಡಗಿದೆ. ಕಾರುಗಳನ್ನು ಬಳಕೆ ಮಾಡುವ ಗ್ರಾಹಕರ ಸಂಖ್ಯೆಯಲ್ಲಿ ವರ್ಧನೆಯಾಗಿರುವುದು ಇಂದರ ಹಿಂದಿರುವ ಪ್ರಮುಖ ಕಾರಣವಾಗಿದೆ. ಅಂದರೆ ಪ್ರತಿಯೊಂದು ವಾಹನ ಸಂಸ್ಥೆಗಳ ಏಳು ಬೀಳುಗಳನ್ನು ಗ್ರಾಹಕರು ನಿಕಟವಾಗಿ ಗಮನಿಸುತ್ತಿದ್ದಾರೆ. ಅಷ್ಟಕ್ಕೂ ದೇಶದ 10 ರೋಚಕ ಕಾರು ಬ್ರಾಂಡ್ ಗಳು ಯಾವುವು ? ಉತ್ತರಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

10. ಸ್ಕೋಡಾ

10. ಸ್ಕೋಡಾ

ಸ್ಕೋಡಾ ಭಾರತದಲ್ಲಿ ನಿರೀಕ್ಷಿದಷ್ಟು ಯಶ ಕಾಣಿಸಿದಿರಬಹುದು. ಆದರೆ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ. ಅಲ್ಲದೆ ಶ್ರೀಮಂತ ಕಾರು ಖರೀದಿಗಾರಲ್ಲಿ ತನ್ನದೇ ಆದ ಮಾರಾಟ ವಲಯವನ್ನು ಸ್ಥಾಪಿಸಿದೆ. ನಮ್ಮ ರೋಚಕ 10 ಕಾರು ಸಂಸ್ಥೆಗಳ ಪಟ್ಟಿಯಲ್ಲಿ ಸ್ಕೋಡಾಗೆ 10ನೇ ಸ್ಥಾನ.

09. ಮಾರುತಿ ಸುಜುಕಿ

09. ಮಾರುತಿ ಸುಜುಕಿ

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಷ್ಟೊಂದು ಹಿಂದೆ ಬಿದ್ದಿರುವುದಾದರೂ ಹೇಗೆ ಎಂಬ ಅನುಮಾನ ನಿಮ್ಮ ಮೂಡಬಹುದು. ಖಂಡಿತವಾಗಿಯೂ ಇದಕ್ಕೆ ಕಾರಣ ಮಾರುತಿಯಲ್ಲ. ಆದರೆ ಇತ್ತೀಚೆಗಿನ ಸಮಯದಲ್ಲಿ ಇತರ ಸಂಸ್ಥೆಗಳು ಈ ವಿಭಾಗದಲ್ಲಿ ಮಾರುತಿಯನ್ನು ಮೀರಿ ನಿಂತಿದೆ. ವಿಸ್ತಾರವಾಗಿ ಹರಡಿರುವ ಡೀಲರ್ ಜಾಲ ಹಾಗೂ ಸರ್ವಿಸ್ ಸಂತೃಪ್ತಿಗೆ ಮಾರುತಿ ಮೆಚ್ಚೆಗೆಗೆ ಪಾತ್ರವಾಗಿದೆ.

08. ಆಡಿ

08. ಆಡಿ

ಜರ್ಮನಿಯ ಮೂರು ಐಷಾರಾಮಿ ಕಾರು ಸಂಸ್ಥೆಗಳನ್ನು ನೆನಪಿಸಿದಾಗ ಆಡಿ ಸಹ ಗುರುತಿಸಿಕೊಳ್ಳುತ್ತದೆ. ಈಗಷ್ಟೇ ಆರ್ ಎಸ್7 ಗಳಂತಹ ದುಬಾರಿ ಕಾರುಗಳನ್ನು ಬಿಡುಗಡೆ ಮಾಡಿರುವ ಸಂಸ್ಥೆಯು ಅಭಿಮಾನಿಗಳಲ್ಲಿ ರೋಚಕತೆಯನ್ನುಂಟು ಮಾಡಿದೆ.

07. ಲ್ಯಾಂಡ್ ರೋವರ್

07. ಲ್ಯಾಂಡ್ ರೋವರ್

ಐಷಾರಾಮಿ ಎಸ್‌ಯುವಿಗಳಲ್ಲಿ ಲ್ಯಾಂಡ್ ರೋವರ್ ಅತಿ ಹೆಚ್ಚು ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ಪ್ರಸ್ತುತ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಲ್ಯಾಂಡ್ ರೋವರ್ ಆಫ್ ರೋಡ್ ಸಾಮರ್ಥ್ಯವನ್ನು ಮೈಗೂಡಿಸಿ ಬಂದಿದೆ.

06. ಹ್ಯುಂಡೈ

06. ಹ್ಯುಂಡೈ

ವಿನ್ಯಾಸದ ಹಿಡಿದು ಹಣಕ್ಕೆ ತಕ್ಕ ಮೌಲ್ಯವನ್ನು ನೀಡುತ್ತಿರುವ ಹ್ಯುಂಡೈ ದೇಶದಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಸಂಸ್ಥೆಗಳ ಪಾಲಿನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಈ ಪೈಕಿ ಎಲೈಟ್ ಐ20 ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿದೆ.

05. ಜಾಗ್ವಾರ್

05. ಜಾಗ್ವಾರ್

ಟಾಟಾ ಸಂಸ್ಥೆಯ ಅಧೀನತೆಯಲ್ಲಿರುವ ಮಗದೊಂದು ಕಾರು ತಯಾರಿಕ ಸಂಸ್ಥೆಯಾಗಿರುವ ಜಾಗ್ವಾರ್ ಐದನೇ ಸ್ಥಾನದಲ್ಲಿದೆ. ಜಾಗ್ವಾರ್ ಎಕ್ಸ್ ಇ, ಎಕ್ಸ್ ಎಫ್, ಎಕ್ಸ್ ಜೆ ಹಾಗೂ ಎಫ್ ಟೈಪ್ ಗಳು ಕೆಲವು ಜನಪ್ರಿಯ ಮಾದರಿಗಳಾಗಿವೆ.

04. ಟೊಯೊಟಾ

04. ಟೊಯೊಟಾ

ಟೊಯೊಟಾ ದೇಶದ ಮಗದೊಂದು ಜನಪ್ರಿಯ ಮಾದರಿಯಾಗಿದೆ. ಇನ್ನೋವಾಗಳಂತಹ ಫೇಮಸ್ ಬಹು ಬಳಕೆಯ ವಾಹನಗಳನ್ನು ಉತ್ಪಾದಿಸಿರುವ ಟೊಯೊಟಾ ಅತ್ಯುತ್ತಮ ಗುಣಮಟ್ಟದ ಕಾರುಗಳನ್ನು ಕಾಯ್ದುಕೊಂಡಿದೆ.

03. ಹೋಂಡಾ

03. ಹೋಂಡಾ

ಅತ್ಯಂತ ರೋಚಕ ಮಾದರಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಹೋಂಡಾ ತನ್ನ ವಿಶ್ವಾಸಾರ್ಹ ಎಂಜಿನ್ ಗಳಿಂದ ಹೆಚ್ಚು ಸದ್ದು ಮಾಡಿದೆ. ಅಲ್ಲದೆ ಅಮೇಜ್, ಸಿಟಿ, ಮೊಬಿಲಿಯೊಗಳಂತಹ ಮಾದರಿಗಳನ್ನು ದೇಶಕ್ಕೆ ನೀಡಿರುವ ಹೋಂಡಾ ಸದ್ಯದಲ್ಲೇ ಜಾಝ್ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

02. ಬಿಎಂಡಬ್ಲ್ಯು

02. ಬಿಎಂಡಬ್ಲ್ಯು

ಕ್ರಿಕೆಟಿನ ಜೀವಂತ ದಿಗ್ಗಜ ಸಚಿನ್ ತೆಂಡೂಲ್ಕರ್ ಮುಖ್ಯ ಪ್ರಚಾರ ರಾಯಭಾರಿ ಆಗಿರುವ ಬಿಎಂಡಬ್ಲ್ಯು ಗ್ರಾಹಕರಲ್ಲಿ ಉತ್ಸಾಹ ಹೆಚ್ಚಿಸುವಲ್ಲಿಯೂ ಹಿಂದೆ ಬಿದ್ದಿಲ್ಲ. ಪ್ರಸ್ತುತ ಸೆಲೆಬ್ರಿಟಿಗಳ ಜೊತೆಗೆ ಖ್ಯಾತ ಉದ್ಯಮಿಗಳ ಫೇವರಿಟ್ ವಾಹನ ಎನಿಸಿಕೊಂಡಿರುವ ಬಿಎಂಡಬ್ಲ್ಯು ದೇಶದ ಅತ್ಯಂತ ರೋಚಕ ಕಾರು ಬ್ರಾಂಡ್ ಗಳಲ್ಲಿ ಎರಡನೇ ಸ್ಥಾನದಲ್ಲಿದೆ.

01. ಮರ್ಸಿಡಿಸ್ ಬೆಂಝ್

01. ಮರ್ಸಿಡಿಸ್ ಬೆಂಝ್

ಭಾರತ ವಾಹನ ಮಾರುಕಟ್ಟೆಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ನಿರಂತರ ಅಂತರಾಳದಲ್ಲಿ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಪ್ರಸ್ತುತ ಪ್ರೀಮಿಯಂ ಸಂಸ್ಥೆಯು ದೇಶದ ರೋಚಕ 10 ಕಾರು ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

Most Read Articles

Kannada
Read more on ಕಾರು cars
English summary
So how do they stand when carmakers are rated based on how exciting they are? Let's take a look at the top 10 most exciting four-wheeler brands in India:
Story first published: Monday, May 18, 2015, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X