ಕಾಲು ವಾರ್ಷಿಕ ಪರೀಕ್ಷೆಯಲ್ಲಿ ಫೇಲಾದ ಕಾರುಗಳು

By Nagaraja

ಕಾರೊಂದರ ಮಾರಾಟದಲ್ಲಿ ಹಲವು ವಿಚಾರಗಳು ಅತಿ ಮುಖ್ಯ ಘಟಕೆನಿಸುತ್ತದೆ. ಬೆಲೆಯಿಂದ ಹಿಡಿದು ನಿರ್ದಿಷ್ಟ ಮಾದರಿಯ ವಿಶ್ವಾಸಾರ್ಹತೆ, ನಿರ್ವಹಣೆ, ಸರ್ವೀಸ್ ಹೀಗೆ ಹತ್ತು ಹಲವಾರು ವಿಚಾರಗಳು ಪ್ರಮುಖ ಪಾತ್ರ ವಹಿಸುತ್ತದೆ.

ಎಲ್ಲೋ ಒಂದು ಕಡೆ ಅತ್ಯುತ್ತಮ ವಿನ್ಯಾಸ ಹೊಂದಿರುವ ಹೊರತಾಗಿಯೂ ಕೆಲವು ಮಾದರಿಗಳು ಮಾರುಕಟ್ಟೆಯಲ್ಲಿ ದೊಪ್ಪನೆ ಬೀಳುತ್ತವೆ. ಹೀಗೆ 2016ನೇ ಆರ್ಥಿಕ ಸಾಲಿನ ಕಾಲು ವಾರ್ಷಿಕ ಪರೀಕ್ಷೆಯಲ್ಲಿ ಫೇಲಾಗಿರುವ 15 ಲಕ್ಷ ರು.ಗಳ ವರೆಗಿನ ದೇಶದ 10 ಕಾರುಗಳ ಬಗ್ಗೆ ವಿವರಣೆಯನ್ನು ಇಲ್ಲಿ ಕೊಡಲಿದ್ದೇವೆ.

10. ಫಿಯೆಟ್ ಅವೆಂಚ್ಯುರಾ

10. ಫಿಯೆಟ್ ಅವೆಂಚ್ಯುರಾ

ಕ್ರಾಸೋವರ್ ಮಾದರಿಯಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿದ್ದ ಫಿಯೆಟ್ 2016ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ 591 ಯುನಿಟ್ ಗಳಷ್ಟೇ ಮಾರಾಟ ಸಾಧಿಸುವ ಮೂಲಕ ನಿರಾಸೆ ಅನುಭವಿಸಿದೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಆಕರ್ಷಿಸಲು ಇಟಲಿಯ ಮೂಲದ ಐಕಾನಿಕ್ ಫಿಯೆಟ್ ಸಂಸ್ಥೆಯು ಏನೆಲ್ಲ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

09. ನಿಸ್ಸಾನ್ ಸನ್ನಿ

09. ನಿಸ್ಸಾನ್ ಸನ್ನಿ

ವಾಹನ ಪ್ರೇಮಿಗಳು ಆಕರ್ಷಿಕಲು ನೂತನ ಜಾಹೀರಾತಿನೊಂದಿಗೆ ಮುಂದೆ ಬಂದಿದ್ದ ಸನ್ನಿ ಮಾರಾಟದ ವಿಚಾರದಲ್ಲಿ ಜನಪ್ರಿಯತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಮಧ್ಯಮ ವಿಭಾಗದ ಸೆಡಾನ್ ವಿಭಾಗದಲ್ಲಿ ಪ್ರತಿಸ್ಪರ್ಧಿಗಳ ಮುಂದೆ ಎಡವಿ ಬಿದ್ದಿರುವ ಸನ್ನಿ 2016ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ 549 ಯುನಿಟ್ ಗಳಷ್ಟೇ ಮಾರಾಟವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

08. ರೆನೊ ಪಲ್ಸ್

08. ರೆನೊ ಪಲ್ಸ್

ಯಾಕೋ ಪಲ್ಸ್ ರೇಟ್ ಹೆಚ್ಚಾಗಲಿಲ್ಲ. ಪರಿಣಾಮ ರೆನೊ ಪಲ್ಸ್ ಕೂಡಾ ಮಾರಾಟದಲ್ಲಿ ಕುಸಿತ ಕಂಡಿದೆ. 2016 ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ರೆನೊ ಪಲ್ಸ್ ಹ್ಯಾಚ್ ಬ್ಯಾಕ್ ಸಾಧಿಸಿರುವ ಒಟ್ಟು ಮಾರಾಟ 497 ಯುನಿಟ್ ಗಳಾಗಿವೆ.

07. ಫಿಯೆಟ್ ಲಿನಿಯಾ

07. ಫಿಯೆಟ್ ಲಿನಿಯಾ

ಮಗದೊಂದು ಸೆಡಾನ್ ಕಾರು ವಾಹನ ಪ್ರೇಮಿಗಳ ವಿಶ್ವಾಸ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದೆ. ಅವುದೇ ಫಿಯೆಟ್ ಲಿನಿಯಾ. ಹಿಂದಿನ ವರ್ಷಕ್ಕೆ ಹೋಲಿಸಿದಾಗ 2016 ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 38ರಷ್ಟು ಕುಸಿತ ಕಂಡಿರುವ ಲಿನಿಯಾ 411 ಯುನಿಟ್ ಗಳ ಮಾರಾಟಕ್ಕಷ್ಟೇ ತೃಪ್ತಿಕೊಂಡಿದೆ. ಇಲ್ಲಿ ಗಮನಾರ್ಹ ವಿಶೇಷವೆಂದರೆ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾರುತಿ ಡಿಜೈರ್ ಕಾರಿನಲ್ಲೂ ಫಿಯೆಂಟ್ ಲಿನಿಯಾದಲ್ಲಿರುವ ಡೀಸೆಲ್ ಎಂಜಿನ್ ಬಳಕೆಯಾಗುತ್ತಿದೆ ಅಂದರೆ ನಂಬಬಹುದೇ?

06. ರೆನೊ ಸ್ಕಾಲಾ

06. ರೆನೊ ಸ್ಕಾಲಾ

ರೆನೊದ ಮಗದೊಂದು ಮಾದರಿ ಸ್ಕಾಲಾ ಕೂಡಾ ಸೋತವರ ಪಟ್ಟಿಗೆ ಸೇರ್ಪಡೆಗೊಂಡಿದೆ. 2016ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸ್ಕಾಲಾ ಮಾರಾಟ ಸಂಖ್ಯೆ ಬರಿ 274 ಯುನಿಟ್ ಮಾತ್ರವಾಗಿದೆ.

05. ಷೆವರ್ಲೆ ಸ್ಪಾರ್ಕ್

05. ಷೆವರ್ಲೆ ಸ್ಪಾರ್ಕ್

ಮಾರಾಟಕ್ಕೆ ಕಿಚ್ಚು ಹಚ್ಚಿಸುವಲ್ಲಿ ಸ್ಪಾರ್ಕ್ ವಿಫಲವಾಗಿದೆ. ಪರಿಣಾಮ ಈ ಸಣ್ಣ ಹ್ಯಾಚ್ ಬ್ಯಾಕ್ ಕಾರು 2016 ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ 252 ಯುನಿಟ್ ಗಳಷ್ಟೇ ಮಾರಾಟವನ್ನು ಕಂಡಿದೆ.

04. ಫೋರ್ಡ್ ಫಿಯೆಸ್ಟಾ ಕ್ಲಾಸಿಕ್

04. ಫೋರ್ಡ್ ಫಿಯೆಸ್ಟಾ ಕ್ಲಾಸಿಕ್

ಒಂದು ಕ್ಲಾಸಿಕ್ ಕಾರಿಗೆ ಎದುರಾಗಿರುವ ದುರ್ಗತಿಯಿದು. ಈ ಪಟ್ಟಿಯಲ್ಲಿ ಫೋರ್ಡ್ ಫಿಯೆಟ್ ಕ್ಲಾಸಿಕ್ ಸಹ ಕಾಣಿಸಿಕೊಂಡಿರುವ ನಿಜಕ್ಕೂ ಬೇಸರದ ಸಂಗತಿ. ಇಲ್ಲಿ ಫಿಯೆಟ್ ಕ್ಲಾಸಿಕ್ ಕಾರಿನ ಮಾರಾಟ ಸಂಖ್ಯೆ 236 ಆಗಿದೆ.

03. ಷೆವರ್ಲೆ ಕ್ರೂಝ್

03. ಷೆವರ್ಲೆ ಕ್ರೂಝ್

ಮಾರಾಟ ಓಟದ ಗತಿಯನ್ನು ಏರಿಸುವಲ್ಲಿ ಕ್ರೂಝ್ ವಿಫಲವಾಗಿದೆ. ಶಕ್ತಿಶಾಲಿ ಡೀಸೆಲ್ ಎಂಜಿನ್ ಹೊಂದಿರುವ ಹೊರತಾಗಿಯೂ ಮಾರಾಟದಲ್ಲಿದ್ದು ಪ್ರತಿಫಲಿಸಿಲ್ಲ. ಕ್ರೂಝ್ ಮಾರಾಟ ಸಂಖ್ಯೆ ಜಸ್ಟ್ 207 ಮಾತ್ರವಾಗಿದೆ.

 02. ನ್ಯೂ ಫೋರ್ಡ್ ಫಿಯೆಸ್ಟಾ

02. ನ್ಯೂ ಫೋರ್ಡ್ ಫಿಯೆಸ್ಟಾ

ನ್ಯೂ ಫೋರ್ಡ್ ಫಿಯೆಸ್ಟಾ ಕಥೆ ಕೂಡಾ ಭಿನ್ನವಾಗಿರಲಿಲ್ಲ. ಅತ್ಯುತ್ತಮ ವಿನ್ಯಾಸ ತಂತ್ರಗಾರಿಕೆಯ ಹೊರತಾಗಿಯೂ ದೇಶದ ಗ್ರಾಹಕರ ಮನ ಗೆಲ್ಲುವಲ್ಲಿ ನ್ಯೂ ಫೋರ್ಡ್ ಫಿಯೆಸ್ಟಾ ವಿಫಲವಾಗಿದ್ದು, 2016ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬೆರಳಣಿಕೆಯ 55 ಯುನಿಟ್ ಗಳಷ್ಟೇ ಮಾರಾಟ ಕಂಡಿದೆ.

01. ರೆನೊ ಫ್ಲೂಯೆನ್ಸ್

01. ರೆನೊ ಫ್ಲೂಯೆನ್ಸ್

2016ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾರಾಟದ ವಿಚಾರದಲ್ಲಿ ದೇಶದ ಅತಿ ಕೆಟ್ಟ ಕಾರೆಂಬ ಅಪಖ್ಯಾತಿಗೆ ರೆನೊ ಫ್ಲೂಯೆನ್ಸ್ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಫ್ರಾನ್ಸ್ ಮೂಲದ ಈ ಜನಪ್ರಿಯ ಸಂಸ್ಥೆಯು ಡ್ಯಾಮೇಜ್ ಕಂಟ್ರೋಲ್ ಮಾಡಲಿದೆ ಎಂಬುದು ಬಹಳ ನಿರ್ಣಾಯಕವೆನಿಸಲಿದೆ. ಯಾಕೆಂದರೆ ಕಳೆದ ಮೂರು ತಿಂಗಳಲ್ಲಿ ಕೇವಲ ಸೀಮಿತ ಸಂಖ್ಯೆಯ 34 ಯುನಿಟ್ ಗಳಷ್ಟೇ ಮಾರಾಟ ಗಿಟ್ಟಿಸಿಕೊಂಡಿರುವ ಫ್ಲೂಯೆನ್ಸ್ ದೇಶದಲ್ಲಿ ಉಳಿಗಾಲದ ಭೀತಿಯನ್ನೆದುರಿಸುತ್ತಿದೆ ಅಂದರೆ ತಪ್ಪಾಗಲಾರದು.

Most Read Articles

Kannada
English summary
So, here is a list of the top 10 worst selling cars under INR 15 lakh in India during the first quarter of the financial year of 2016:
Story first published: Monday, July 13, 2015, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X