ಟೊಯೊಟಾ ಎಸ್‌ಯುವಿ, ಸೆಡಾನ್‌ಗೆ ಭಾರತದಲ್ಲಿ ಯಶ ದಕ್ಕಿತೇ?

By Nagaraja

ಇನ್ನೋವಾದಂತಹ ಜನಪ್ರಿಯ ಮಾದರಿಗಳನ್ನು ಭಾರತಕ್ಕೆ ಪರಿಚಯಿಸಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ದೇಶದಲ್ಲಿ ತನ್ನದೇ ಆದ ಮಾರಾಟ ವಲಯ ಸೃಷ್ಟಿ ಮಾಡಿದೆ. ಪ್ರಸ್ತುತ ಸಂಸ್ಥೆಯೀಗ ನಿಕಟ ಭವಿಷ್ಯದಲ್ಲಿ ಎರಡು ಅತ್ಯಾರ್ಷಕ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಅದುವೇ ಕಾಂಪಾಕ್ಟ್ ಎಸ್ ಯುವಿ ಮತ್ತು ಕಾಂಪಾಕ್ಟ್ ಸೆಡಾನ್ ಕಾರು.

toyota compact sedan

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಈ ಎರಡು ಬಹುನಿರೀಕ್ಷಿತ ಮಾದರಿಗಳನ್ನು ಪರಿಚಯಿಸುವ ಯೋಜನೆಯನ್ನು ಟೊಯೊಟಾ ಹೊಂದಿದೆ. ಆದರೆ ಹೊಸ ವರ್ಷದಲ್ಲೇ ನೂತನ ಕಾರುಗಳು ಬಿಡುಗಡೆಯಾಗಲಿದೆಯೇ ಎಂಬುದಕ್ಕೆ ಸ್ಪಷ್ಟ ಮಾಹಿತಿಗಳು ಬಂದಿಲ್ಲ.

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್ ಯುವಿ ಹಾಗೂ ಕಾಂಪಾಕ್ಟ್ ಸೆಡಾನ್ ಕಾರುಗಳು ಅತಿ ಹೆಚ್ಚಿನ ಬೇಡಿಕೆಯನ್ನು ದಾಖಲಿಸುತ್ತಿದೆ. ಈ ಎರಡು ವಿಭಾಗದಲ್ಲಿ ಮಾರಾಟವು ಕ್ಷಿಪ್ರ ಗತಿಯಲ್ಲಿ ಏರಿಕೆ ಸಾಧಿಸುತ್ತಿದೆ.

toyota concept

ಈ ಎರಡು ಮಾದರಿಗಳನ್ನು ನಾಲ್ಕು ಮೀಟರ್ ಉದ್ದ ಪರಿಧಿಯೊಳಗಡೆ ಅಭಿವೃದ್ಧಿಪಡಿಸಲಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಭಾರತದಲ್ಲಿ ಸಬ್ ಫೋರ್ ಮೀಟರ್ ವಾಹನಗಳಿಗೆ ತೆರಿಗೆ ವಿನಾಯಿತಿ ನೀತಿ ಅನ್ವಯವಾಗುತ್ತದೆ. ಈ ಮೂಲಕ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಟೊಯೊಟಾಗೆ ಸಾಧ್ಯವಾಗಲಿದೆ.

ಹಾಗಿದ್ದರೂ ಹೊಸ ಮಾದರಿಗಳ ಬೆಲೆ ಅಥವಾ ನಾಮಕರಣದ ಬಗ್ಗೆ ಟೊಯೊಟಾದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಈ ನಡುವೆ 2016 ಆಟೋ ಎಕ್ಸ್ ಪೋದಲ್ಲಿ ಹೊಸ ಇನ್ನೋವಾ ಹಾಗೂ ಫಾರ್ಚ್ಯುನರ್ ಮಾದರಿಗಳನ್ನು ಟೊಯೊಟಾ ಪರಿಚಯಿಸಲಿದೆ ಎಂಬುದು ಅಷ್ಟೇ ಸಂತೋಷದಾಯಕ ವಿಚಾರವಾಗಿದೆ.

Most Read Articles

Kannada
English summary
Japanese automobile manufacturer Toyota is betting high on Indian market. They are planning on introducing a new compact SUV and sedan, which will fall under the sub four metre category.
Story first published: Monday, March 30, 2015, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X