ಗರಡಿಯಲ್ಲಿ ಪಳಗುತ್ತಿರುವ ಮಾರುತಿ ಸಿಯಾಝ್ ಪ್ರತಿಸ್ಪರ್ಧಿ ಟೊಯೊಟಾ ವೈಯೊಸ್

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಮಗದೊಂದು ಅತ್ಯಾಕರ್ಷಕ ಕಾರನ್ನು ದೇಶದಲ್ಲಿ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ ಟೊಯೊಟಾ ವೈಯೊಸ್ ಸೆಡಾನ್ ಕಾರು ಭಾರತಕ್ಕೆ ಯಾವುದೇ ಕ್ಷಣವಾದರೂ ಎಂಟ್ರಿ ಕೊಡಲಿದೆ.

ಈ ಸಂಬಂಧ ಸಂಸ್ಥೆಯು ಹೊಸ ಕಾರಿನ ಟೆಸ್ಟಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. ವಿಶೇಷವೆಂದರೆ ಬೆಂಗಳೂರಿನಲ್ಲೇ ಹೊಸ ಕಾರಿನ ಟೆಸ್ಟಿಂಗ್ ಹಮ್ಮಿಕೊಳ್ಳಲಾಗಿದೆ.

toyota vios

ಥೈಲಾಂಡ್, ಮಲೇಷ್ಯಾ ಹಾಗೂ ಇಂಡೋನೇಷ್ಯಾಗಳಂತಹ ರಾಷ್ಟ್ರಗಳಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಿರುವ ವೈಯೊಸ್ 2015 ವರ್ಷಾಂತ್ಯದಲ್ಲಿ ಅಥವಾ 2016 ವರ್ಷಾರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸ್ಥಳೀಯವಾಗಿ ನಿರ್ಮಾಣ ಮಾಡುವ ಮೂಲಕ ಹೊಸ ಕಾರನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ. ಇದು ಏಳರಿಂದ 10 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

toyota vios

ಪೆಟ್ರೋಲ್ ಜೊತೆಗೆ ಡೀಸೆಲ್ ವೆರಿಯಂಟ್‌ಗಳಲ್ಲಿ ಹೊಸ ಕಾರು ಆಗಮನವಾಗಲಿದೆ. ಇದು 1.4 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಪಡೆಯಲಿದ್ದು, 67.04 ಅಶ್ವಶಕ್ತಿ (170 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 1.5 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ 107.4 ಅಶ್ವಶಕ್ತಿ (141 ತಿರುಗುಬಲ) ಉತ್ಪಾದಿಸಲಿದೆ.

ಭಾರತದಲ್ಲಿ ಟೊಯೊಟಾದ ಹೊಸ ಕಾರು ಮಾರುತಿ ಸುಜುಕಿ ಸಿಯಾಝ್, ಹ್ಯುಂಡೈ ವೆರ್ನಾ, ಫೋಕ್ಸ್ ವ್ಯಾಗನ್ ವೆಂಟೊ ಹಾಗೂಗಳಂತಹ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
Japanese automobile manufacturer, Toyota has begun testing a new sedan in India. This new vehicle looks like the Vios model and has been caught testing in Bangalore recently. The sedan is on offer in several Asian markets like Thailand, Malaysia and Indonesia.
Story first published: Saturday, February 14, 2015, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X