ಬ್ರೇಕಿಂಗ್; ಪೊಲೊ ಮಾರಾಟ ತತ್ ಕ್ಷಣಕ್ಕೆ ನಿಲುಗಡೆಗೊಳಿಸುವಂತೆ ಆದೇಶ!

By Nagaraja

ದೇಶದಲ್ಲಿ ತನ್ನ ಜನಪ್ರಿಯ ಪೊಲೊ ಹ್ಯಾಚ್ ಬ್ಯಾಕ್ ಕಾರಿನ ಮಾರಾಟವನ್ನು ತತ್ ಕ್ಷಣಕ್ಕೆ ನಿಲುಗಡೆಗೊಳಿಸುವಂತೆ ಜರ್ಮನಿಯ ಮೂಲದ ಐಕಾನಿಕ್ ಸಂಸ್ಥೆ ಫೋಕ್ಸ್ ವ್ಯಾಗನ್ ಸೂಚನೆ ನೀಡಿದೆ. ಫೋಕ್ಸ್ ವ್ಯಾಗನ್ ಇಂಡಿಯಾದ ಈ ನಿರ್ಧಾರವು ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದ್ದು, ಇತ್ತೀಚೆಗಷ್ಟೇ ಅಮೆರಿಕದಲ್ಲಿ ಸಂಭವಿಸಿರುವ ಮಾಲಿನ್ಯ ಮೋಸ ಪ್ರಕರಣ ಭಾರತದಲ್ಲೂ ತಟ್ಟಿರಬಹುದೇ ಎಂಬುದು ಆತಂಕಕ್ಕೆ ಕಾರಣವಾಗಿದೆ.

Also Read : ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು? ಮುಂದಕ್ಕೆ ಓದಲು ಕ್ಲಿಕ್ಕಿಸಿ

ಅಮೆರಿಕದಲ್ಲಿ ನಡೆದ ಫೋಕ್ಸ್ ವ್ಯಾಗನ್ ಮಾಲಿನ್ಯ ಮೋಸ ಪ್ರಕರಣದ ಬೆನ್ನಲ್ಲೇ ಭಾರತದಲ್ಲೂ ತನಿಖೆ ನಡೆಸುವಂತೆಯೇ ವಾಹನ ಅಧ್ಯಯನ ಸಂಸ್ಥೆಗೆ (ARAI) ಕೇಂದ್ರ ಸರಕಾರವು ನಿರ್ದೇಶ ನೀಡಿತ್ತು. ಇದಾದ ಬೆನ್ನಲ್ಲೇ ಫೋಕ್ಸ್ ವ್ಯಾಗನ್ ಸಂಸ್ಥೆಯು ಇಂತಹದೊಂದು ನಿರ್ಧಾರವನ್ನು ಪ್ರಕಟಿಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬ್ರೇಕಿಂಗ್; ಪೊಲೊ ಮಾರಾಟ ತತ್ ಕ್ಷಣಕ್ಕೆ ನಿಲುಗಡೆಗೊಳಿಸುವಂತೆ ಆದೇಶ!

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ, ಮುಂದಿನ ಸೂಚನೆ ನೀಡುವ ವರೆಗೂ ಫೋಕ್ಸ್ ವ್ಯಾಗನ್ ಪೊಲೊ ಮಾದರಿಗಳನ್ನು ವಿತರಿಸದಂತೆ ಡೀಲರ್ ಶಿಪ್ ಗಳಿಗೆ ನಿರ್ದೇಶ ಮಾಡಲಾಗಿದೆ. ಪ್ರಸ್ತುತ ಆದೇಶ ಪತ್ರದಲ್ಲಿ ಇಬ್ಬರು ಫೋಕ್ಸ್ ವ್ಯಾಗನ್ ಉನ್ನತಾಧಿಕಾರಿಗಳಾದ ಆಶೀಶ್ ಗುಪ್ತಾ (ಹೆಡ್ ಆಫ್ ಆಫ್ಟರ್ ಸೇಲ್ಸ್) ಮತ್ತು ಪಂಕಜ್ ಶರ್ಮಾ (ಹೆಡ್ ಆಫ್ ಸೇಲ್ಸ್ ಆಪರೇಷನ್ಸ್) ಸಹಿ ಕೂಡಾ ದಾಖಲಾಗಿದೆ.

ಬ್ರೇಕಿಂಗ್; ಪೊಲೊ ಮಾರಾಟ ತತ್ ಕ್ಷಣಕ್ಕೆ ನಿಲುಗಡೆಗೊಳಿಸುವಂತೆ ಆದೇಶ!

ಹಾಗಿದ್ದರೂ ದೇಶದಲ್ಲಿ ಪೊಲೊ ಮಾರಾಟ ಸ್ಥಗಿತ ಮಾಡಿರುವುದಕ್ಕೂ ಹಾಗೂ ಇತ್ತೀಚೆಗಿನ ಮಾಲಿನ್ಯ ಮೋಸ ಪ್ರಕರಣಕ್ಕೆ ಸಂಪರ್ಕ ಕಲ್ಪಿಸದಂತೆ ಫೋಕ್ಸ್ ವ್ಯಾಗನ್ ಸ್ಪಷ್ಟಪಡಿಸಿದೆ. ಅಲ್ಲದೆ ಈ ಸಂಬಂಧ ಸಮಗ್ರ ಪತ್ರಿಕಾ ಪ್ರಕಟಣೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಬ್ರೇಕಿಂಗ್; ಪೊಲೊ ಮಾರಾಟ ತತ್ ಕ್ಷಣಕ್ಕೆ ನಿಲುಗಡೆಗೊಳಿಸುವಂತೆ ಆದೇಶ!

ಇತ್ತೀಚೆಗಷ್ಟೇ ಅಮೆರಿಕ ಮಾಲಿನ್ಯ ತಪಾಸನೆಯ ಮಾನದಂಡ (ಎಮಿಷನ್ ಟೆಸ್ಟ್) ಮರೆಮಾಚಲು ಫೋಕ್ಸ್‌ವ್ಯಾಗನ್ ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಬಳಕೆ ಮಾಡಿತ್ತು. ಇದರಿಂದ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ಪರಿಸ್ಥಿತಿಯಲ್ಲಿ ಪ್ರಾಯೋಗಾಲಯದಲ್ಲಿ ಕೊಡುವ ಕ್ಷಮತೆಗೂ, ರಸ್ತೆಯ ಮೇಲೆ ಬಂದಾಗ ತೋರಿಸುವ ಕ್ಷಮತೆಗೂ ವ್ಯತ್ಯಾಸಗಳು ಕಂಡುಬಂದಿತ್ತು.

ಬ್ರೇಕಿಂಗ್; ಪೊಲೊ ಮಾರಾಟ ತತ್ ಕ್ಷಣಕ್ಕೆ ನಿಲುಗಡೆಗೊಳಿಸುವಂತೆ ಆದೇಶ!

ಅಮೆರಿಕ ಪರಿಸರ ಸಂರಕ್ಷಣಾ ಏಜೆನ್ಸಿ (ಇಪಿಎ) ನೀಡಿರುವ ಮಾಹಿತಿಗಳ ಪ್ರಕಾರ ಜನಪ್ರಿಯ ಪಸ್ಸಾಟ್, ಜೆಟ್ಟಾ, ಬೀಟೆಲ್, ಗಾಲ್ಫ್ ಹಾಗೂ ಆಡಿ ಎ3 ಸೇರಿದಂತೆ ಸರಿ ಸುಮಾರು 1.10 ಕೋಟಿ ಡೀಸೆಲ್ ಕಾರುಗಳಲ್ಲಿ ಮಾಲಿನ್ಯ ಮೋಸ ನಡೆದಿತ್ತು. ತದಾ ಬೆನ್ನಲ್ಲೇ ಫೋಕ್ಸ್ ವ್ಯಾಗನ್ ಸಬ್ ಬ್ರಾಂಡ್ ಆಗಿರುವ ಆಡಿ, ಸಿಯೆಟ್ ಸಹ ತಪ್ಪೊಪ್ಪಿಗೆ ನಡೆಸಿದ್ದವು.

ಬ್ರೇಕಿಂಗ್; ಪೊಲೊ ಮಾರಾಟ ತತ್ ಕ್ಷಣಕ್ಕೆ ನಿಲುಗಡೆಗೊಳಿಸುವಂತೆ ಆದೇಶ!

ಪ್ರಸ್ತುತ ಫೋಕ್ಸ್‌ವ್ಯಾಗನ್ ಪೊಲೊ ಮಾರಾಟವನ್ನು ಭಾರತದಲ್ಲಿ ತತ್ ಕ್ಷಣಕ್ಕೆ ನಿಲುಗಡೆಗೊಳಿಸಿರುವುದು ಭಾರಿ ಆತಂಕ ಮನೆ ಮಾಡಲು ಕಾರಣವಾಗಿದೆ. ಈ ಸಂಬಂಧ ತಾಜಾ ಮಾಹಿತಿ ಗಿಟ್ಟಿಸಿಕೊಳ್ಳಲು ಡ್ರೈವ್ ಸ್ಪಾರ್ಕ್ ಗೆ ಭೇಟಿ ಕೊಡುತ್ತಿರಿ.

ಇವನ್ನೂ ಓದಿ

ಫೋಕ್ಸ್‌ವ್ಯಾಗನ್ ಮೋಸದಾಟ ಬಯಲಿಗೆಳೆದಿದ್ದು ಭಾರತೀಯ - ಲೇಖನ ಓದಲು ಕ್ಲಿಕ್ಕಿಸಿ


Most Read Articles

Kannada
English summary
Volkswagen halts polo car sales in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X