ಇನ್ನು ಸ್ವಲ್ಪ ಸಮಯದಲ್ಲಿ 'ಬೀಟ್ಲ್' ಹವಾ ಮತ್ತೆ ಶುರು..!

By Nagaraja

ಜರ್ಮನಿಯ ಪ್ರೀಮಿಯಂ ಕಾರು ಸಂಸ್ಥೆ ಫೋಕ್ಸ್ ವ್ಯಾಗನ್ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಪ್ರತಿಷ್ಠೆಯ ಸಂಕೇತವಾಗಿರುವ ಚೊಕ್ಕದಾದ ಸುಂದರ ಕಾರು 'ಬೀಟ್ಲ್'. ಪ್ರಸ್ತುತ ಕಾರು ಪ್ರಸಕ್ತ ಸಾಲಿನಲ್ಲೇ ಭಾರತವನ್ನು ಸೇರುತ್ತಿದೆ ಎಂಬುದು ಖುಷಿ ಸುದ್ದಿ.

ಬಲ್ಲ ಮೂಲಗಳ ಪ್ರಕಾರ ಸದ್ಯ ಪ್ರಯೋಗಾರ್ಥ ಸಂಚಾರದಲ್ಲಿರುವ ಫೋಕ್ಸ್ ವ್ಯಾಗನ್ ಬೀಟ್ಲ್, 2015 ವರ್ಷಾಂತ್ಯದೊಳಗೆ ಭಾರತವನ್ನು ತಲುಪಲಿದೆ. ನಿಮ್ಮ ಮಾಹಿತಿಗಾಗಿ, ಈ ಹಿಂದೆ ಕಳಪೆ ಮಾರಾಟದಿಂದಾಗಿ ಭಾರತದಲ್ಲಿ ಬೀಟ್ಲ್ ಮಾರಾಟವನ್ನು ಹಿಂಪಡೆಯಲಾಗಿತ್ತು.

ಫೋಕ್ಸ್‌ವ್ಯಾಗನ್ ಬೀಟ್ಲ್

ಈಗ ಸಂಪೂರ್ಣ ಹೊಸತನದೊಂದಿಗೆ ಬೀಟ್ಲ್ ಭಾರತ ಪ್ರವೇಶ ಪಡೆಯಲಿದೆ. ಇದು ಮಹಾರಾಷ್ಟ್ರದ ಚಕನ್ ಘಟಕದಲ್ಲಿ ನಿರ್ಮಾಣವಾಗಲಿದೆ. ಪ್ರಸ್ತುತ ಕಾರು ಆಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದೆ.

ಭಾರತದಲ್ಲಿ ಹಬ್ಬದ ಆವೃತ್ತಿಯು ಆಗಮನವಾಗುತ್ತಿರುವಂತೆಯೇ ಬೀಟ್ಲ್ ಹವಾ ಶುರುವಾಗಲಿದೆ ಎಂಬುದನ್ನು ನಿರೀಕ್ಷಿಸಲಾಗಿದೆ. ಪ್ರಸ್ತುತ ಕಾರು ಮೂರು ಪೆಟ್ರೋಲ್ ಎಂಜಿನ್ ಹಾಗೂ ಏಕಮಾತ್ರ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದೆ.

ಫೋಕ್ಸ್‌ವ್ಯಾಗನ್ ಬೀಟ್ಲ್

ಪೆಟ್ರೋಲ್ ಎಂಜಿನ್
  • 1.2 ಲೀಟರ್ ಟಿಎಸ್‌ಐ,
  • 1.4 ಲೀಟರ್ ಟಿಎಸ್‌ಐ
  • 2.0 ಲೀಟರ್ ಟಿಎಸ್‌ಐ

ಡೀಸೆಲ್ ಎಂಜಿನ್: 1.6 ಲೀಟರ್ ಟರ್ಬೊ

ಅಂತಿಮವಾಗಿ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತವನ್ನು ತಲುಪಲಿರುವ ಫೋಕ್ಸ್‌ವ್ಯಾಗನ್ ಬೀಟ್ಲ್ ದೇಶದಲ್ಲಿ 30 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ) ದುಬಾರಿಯಾಗುವ ಸಾಧ್ಯತೆಯಿದೆ.

Most Read Articles

Kannada
English summary
Volkswagen New Beetle Begins India Testing; Launch By 2015-end
Story first published: Monday, August 3, 2015, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X